Chitradurga Accident: ಚಿತ್ರದುರ್ಗದಲ್ಲಿ 15 ಪಲ್ಟಿ ಹೊಡೆದ ಕಾರು; ಮೂವರ ಸಾವು, ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
Chitradurga Accident: ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬೊಮ್ಮಕ್ಕನಹಳ್ಳಿ ಗ್ರಾಮದ ಮಸೀದಿ ಬಳಿಯ ರಾಷ್ಟ್ರೀಯ ಹೆದ್ದಾರಿ 150ಎ ನಲ್ಲಿ ಭೀಕರ ಅಪಘಾತ ನಡೆದಿದೆ. ಹೆದ್ದಾರಿಯಲ್ಲಿ ಕಾರು 15 ಬಾರಿ ಪಲ್ಟಿಯಾಗಿದ್ದು, ಭೀಕರ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.


ಚಿತ್ರದುರ್ಗ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿಯಾಗಿ ಪಲ್ಟಿಯಾದ ಪರಿಣಾಮ ಇಬ್ಬರು ಬಾಲಕರು ಸೇರಿ ಒಂದೇ ಕುಟುಂಬದ ಮೂವರು ಮೃತಪಟ್ಟು, ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ (Chitradurga Accident) ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬೊಮ್ಮಕ್ಕನಹಳ್ಳಿ ಗ್ರಾಮದ ಮಸೀದಿ ಬಳಿಯ ರಾಷ್ಟ್ರೀಯ ಹೆದ್ದಾರಿ 150ಎ ನಲ್ಲಿ ಮಂಗಳವಾರ ನಡೆದಿದೆ. ಬೆಂಗಳೂರಿನ ಕುಂಬಾರ ಹಳ್ಳಿಯ ಮೌಲಾ ಅಬ್ದುಲ್ ರಹೀಂ ಸಾಬ್ (42), ಅವರ ಮಕ್ಕಳಾದ ರೆಹಮಾನ್ (15) ಹಾಗೂ ಸಮೀರ್ (10) ಮೃತಪಟ್ಟವರು.
ಕುಂಬಾರ ಹಳ್ಳಿಯಿಂದ ಯಾದಗಿರಿಗೆ ಕಾರಿನಲ್ಲಿ ಮೌಲಾ, ರೆಹಮಾನ್, ಸಮೀರ್, ಫಾತಿಮಾ ಬೇಗಂ ಹಾಗೂ ಸಲೀಮಾ ಬೇಗಂ ಹೊರಟಿದ್ದರು. ಮಾರ್ಗ ಮಧ್ಯೆ ಬೊಮ್ಮಕ್ಕನಹಳ್ಳಿ ಗ್ರಾಮದ ಬಳಿ ಕಾರು ರಸ್ತೆ ಮಧ್ಯದ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ಕಾರು ಹೆದ್ದಾರಿಯಲ್ಲಿ 15 ಬಾರಿ ಪಲ್ಟಿಯಾಗಿದ್ದು, ಭೀಕರ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Imagine the speed, car flips 15 times on a highway in Karnataka, three D¢ad.. pic.twitter.com/FO3kRkEimv
— Mihir Jha (@MihirkJha) April 2, 2025
ಕಾರಿನಲ್ಲಿದ್ದ ಮೌಲಾ ಹಾಗೂ ರೆಹಮಾನ್ ಸ್ಥಳದಲ್ಲೇ ಮೃತಪಟ್ಟರೆ, ಸಮೀರ್ ಬಳ್ಳಾರಿ ವಿಮ್ಸ್‌ನಲ್ಲಿ ಕೊನೆಯುಸಿರೆಳೆದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಫಾತಿಮಾ ಬೇಗಂ (75) ಹಾಗೂ ಸಲೀಮಾ ಬೇಗಂ (36) ಅವರಿಗೆ ವಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಾಂಪುರ ಉಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Girl death: ಜ್ಯೂಸ್ ಎಂದು ಭಾವಿಸಿ ಕಳೆನಾಶಕ ಸೇವಿಸಿ ಬಾಲಕಿ ಸಾವು, ಪೋಷಕರ ನಿರ್ಲಕ್ಷ್ಯದಿಂದ ಅನಾಹುತ
ಸಿಗದ ರಜೆ, ನೊಂದ ಕೆಎಸ್‌ಆರ್‌ಟಿಸಿ ಚಾಲಕ ಬಸ್‌ನಲ್ಲೇ ಆತ್ಮಹತ್ಯೆ
ಬೆಳಗಾವಿ: ಬೆಳಗಾವಿಯಲ್ಲಿ (Belagavi news) ಘೋರ ಘಟನೆ ನಡೆದಿದೆ. ತಮ್ಮ ಮನೆಯಲ್ಲಿಯೇ ನಡೆಯುತ್ತಿರುವ ಮದುವೆಗೆ ತೆರಳಲೂ ಮೇಲಧಿಕಾರಿಗಳು ರಜೆ (Leave) ಕೊಡಲಿಲ್ಲ ಎಂದು ತೀವ್ರವಾಗಿ ಮನನೊಂದ ಕೆಎಸ್ಆರ್ಟಿಸಿ ಚಾಲಕನೊಬ್ಬ (KSRTC driver) ಬಸ್‌ನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ (Self Harming) ಶರಣಾಗಿದ್ದಾನೆ. ಇಲ್ಲಿನ ಹಳೆ ಗಾಂಧಿನಗರದ ನಿವಾಸಿ ಬಾಲಚಂದ್ರ ಶಿವಪ್ಪ ಹುಕ್ಕೋಜಿ (47) ಸಾವಿಗೆ ಶರಣಾದವರು. ಶಹಾಪುರ ನಾಕಾದಿಂದ ವಡಗಾವಿಗೆ ಸಂಚರಿಸುವ ಬಸ್ಸಿನಲ್ಲಿ ಅವರು ಚಾಲಕರಾಗಿದ್ದರು.
ಮನೆಯಲ್ಲಿ ಬಾಲಚಂದ್ರ ಅವರ ಅಕ್ಕನ ಮಗಳ ಮದುವೆ ನಿಶ್ಚಯವಾಗಿತ್ತು. ಮದುವೆಗೆ ಕೆಲ ದಿನ ರಜೆ ಕೊಡುವಂತೆ ಡಿಪೊ ಮ್ಯಾನೇಜರ್ ಬಳಿ ಅರ್ಜಿ ಸಲ್ಲಿಸಿದ್ದರು. ಆದರೆ ಅವರು ರಜೆ ಕೊಡದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದವರು ದೂರಿದ್ದಾರೆ.