ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dharmasthala: ಧರ್ಮಸ್ಥಳ ಪ್ರಕರಣ; ಬೆಂಗಳೂರು ಕೋರ್ಟ್ ಆದೇಶ ವಿರುದ್ಧ ಥರ್ಡ್ ಐ ಯುಟ್ಯೂಬ್ ಚಾನಲ್ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಬೆಂಗಳೂರು ಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿ, ಥರ್ಡ್ ಐ ಯೂಟ್ಯೂಬ್ ಚಾನಲ್ ನೇರವಾಗಿ ಸುಪ್ರೀಂ ಕೋರ್ಟ್‌ಗೆ ಹಾಕಿದ ಅರ್ಜಿಯನ್ನು ಸ್ವೀಕರಿಸದೆ ಮೊದಲು ಹೈಕೋರ್ಟ್‌ಗೆ ಹೋಗಿ ಎಂದು ಕಟ್ಟುನಿಟ್ಟಿನ ಸಂದೇಶ ನೀಡಿದೆ. ಥರ್ಡ್ ಹೈ ಯುಟ್ಯೂಬ್ ಚಾನೆಲ್‌ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಸುಪ್ರೀಂ ಕೋರ್ಟ್‌.

ನವದೆಹಲಿ: ಶ್ರೀ ಕ್ಷೇತ್ರ ಧರ್ಮಸ್ಥಳ (Dharmasthala), ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ (D.Veerendra Heggade) ಮತ್ತು ಅವರ ಸೋದರ ಡಿ. ಹರ್ಷೇಂದ್ರ ಕುಮಾರ್ (D.Harshendra Kumar) ವಿರುದ್ಧ ಸುದ್ದಿ ಪ್ರಕಟಣೆಯ ಮೇಲಿನ ನಿರ್ಬಂಧವನ್ನು ತೆರವುಗೊಳಿಸಲು ಕೋರಿ ಥರ್ಡ್ ಹೈ ಯುಟ್ಯೂಬ್ ಚಾನೆಲ್‌ (YouTube channel) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ವಜಾಗೊಳಿಸಿದೆ.

ಈ ಗ್ಯಾಗ್ ಆದೇಶವು ಪತ್ರಿಕಾ ಮತ್ತು ವಾಕ್ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಯುಟ್ಯೂಬರ್ ಅರ್ಜಿ ಸಲ್ಲಿಸಿದ್ದರು. ಆದರೆ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ, ನ್ಯಾಯಮೂರ್ತಿಗಳಾದ ವಿನೋದ್ ಚಂದ್ರನ್ ಮತ್ತು ಜೋಯಿಲಿಯಾ ಬಾಗ್ಚಿ ಅವರ ತ್ರಿಸದಸ್ಯ ಪೀಠವು, “ಮೊದಲು ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ. ಅಲ್ಲಿ ನ್ಯಾಯ ಸಿಗದಿದ್ದರೆ ನಮ್ಮ ಬಳಿಗೆ ಬನ್ನಿ” ಎಂದು ಯುಟ್ಯೂಬರ್ ಪರ ವಕೀಲರಿಗೆ ಸೂಚಿಸಿದ್ದು, “ನಮ್ಮ ದೇಶದ ಹೈಕೋರ್ಟ್ ಆದೇಶವನ್ನು ನಾವು ತೆರವುಗೊಳಿಸಲು ಸಾಧ್ಯವಿಲ್ಲ” ಎಂದು ಕಾನೂನು ಶಿಷ್ಟಾಚಾರ ಪಾಲನೆ ಮಾಡುವಂತೆ ಸೂಚಿಸಿ ಅರ್ಜಿಯನ್ನು ತಿರಸ್ಕರಿಸಿದೆ.

ಧರ್ಮಸ್ಥಳದಲ್ಲಿ ನಿಗೂಢ ಶವಗಳ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸ್ವಚ್ಛತಾ ಕಾರ್ಮಿಕರೊಬ್ಬರ ದೂರಿನ ಆಧಾರದ ಮೇಲೆ, ಡಿ. ಹರ್ಷೇಂದ್ರ ಕುಮಾರ್ ಸಲ್ಲಿಸಿದ ಮಾನಹಾನಿ ಮೊಕದ್ದಮೆಯನ್ನು ವಿಚಾರಿಸಿದ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ವಿಜಯಕುಮಾರ್ ರಾಯ್, ಧರ್ಮಸ್ಥಳ, ಹೆಗ್ಗಡೆ ಕುಟುಂಬ ಮತ್ತು ಅವರ ಸಂಸ್ಥೆಗಳ ವಿರುದ್ಧ ಅವಹೇಳನಕಾರಿ ವರದಿಗಳಿಗೆ ಮಧ್ಯಂತರ ತಡೆಯಾಜ್ಞೆ ಹೊರಡಿಸಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ಈಗಾಗಲೇ ಪ್ರಕಟವಾದ ವರದಿಗಳನ್ನು ತೆಗೆದುಹಾಕಲು ಸೂಚಿಸಲಾಗಿತ್ತು.

ಹೈಕೋರ್ಟ್ ಆದೇಶದಂತೆ, ಶವಗಳನ್ನು ಹೂತಿಟ್ಟ ಆರೋಪಕ್ಕೆ ಸಂಬಂಧಿಸಿ, ವಾಟ್ಸ್‌ಆ್ಯಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯುಟ್ಯೂಬ್, ಟಿವಿ ಚಾನಲ್‌ಗಳು ಮತ್ತು ಇತರ ಮಾಧ್ಯಮಗಳಲ್ಲಿ ಆರೋಪ ಅಥವಾ ಅವಹೇಳನಕಾರಿ ವರದಿಗಳನ್ನು ಪ್ರಕಟಿಸದಂತೆ ನಿರ್ಬಂಧಿಸಲಾಗಿದೆ. ಡಿ. ಹರ್ಷೇಂದ್ರ ಕುಮಾರ್ 4,140 ಯುಟ್ಯೂಬ್ ವಿಡಿಯೊಗಳು, 3,584 ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳು, 932 ಫೇಸ್‌ಬುಕ್ ಪೋಸ್ಟ್‌ಗಳು ಮತ್ತು 108 ಸುದ್ದಿ ಲೇಖನಗಳ ಸೇರಿ 8,842 ಲಿಂಕ್‌ಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇವೆಲ್ಲವನ್ನೂ ತೆಗೆದುಹಾಕಲು ಆದೇಶಿಸಲಾಗಿತ್ತು.

ಈ ಸುದ್ದಿಯನ್ನು ಓದಿ: TTD: ತಿರುಪತಿ ತಿರುಮಲ ದೇಗುಲಕ್ಕೆ ಹೈ ಸೆಕ್ಯುರಿಟಿ ಯೋಜನೆ; 40 ವರ್ಷಗಳ ಅಡ್ವಾನ್ಸ್‌ ಟೆಕ್ನಾಲಜಿ ಬಳಕೆ

ಈ ಆದೇಶವು ಧರ್ಮಸ್ಥಳದ ಖ್ಯಾತಿಗೆ ಧಕ್ಕೆಯಾಗದಂತೆ ಮತ್ತು ಅದರ ಸಂಸ್ಥೆಗಳು, ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ಭಕ್ತರ ಭಾವನೆಗಳ ಮೇಲೆ ಪರಿಣಾಮ ಬೀರದಂತೆ ರಕ್ಷಣೆ ನೀಡುವ ಉದ್ದೇಶವನ್ನು ಹೊಂದಿದೆ. ತನಿಖೆ ಮುಂದುವರಿದಿದ್ದು, ಮಾನಹಾನಿಕರ ಆರೋಪಗಳ ಪರಿಣಾಮವನ್ನು ನ್ಯಾಯಾಲಯವು ಪರಿಗಣಿಸಿದೆ.