ಕೊರಟಗೆರೆ: ಪೊಲೀಸ್ ಸಿಬ್ಬಂದಿ ಎಂದರೆ ವರ್ಷದ 365 ದಿನಗಳಲ್ಲಿ 24 ಗಂಟೆಯೂ ಕೆಲಸ ಮಾಡುವ ದೇಶದ ಗಡಿ ಕಾಯುವ ಸೈನಿಕರು ಎಷ್ಟು ಮುಖ್ಯವೋ, ದೇಶದ ಒಳಗಡೆ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಅಧಿಕಾರಿಗಳು ಅಷ್ಟೇ ಮುಖ್ಯ. ಪ್ರತಿಯೊಬ್ಬ ಪೊಲೀಸ್ ಅಧಿಕಾರಿಯೂ ತಮ್ಮ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕೊಡಿಸುವ ಕಡೆ ಗಮನ ಕೊಡಿ. ಮಕ್ಕಳಿಗಾಗಿ ಆಸ್ತಿ ಮಾಡಬೇಡಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದು ಕೆಎಸ್‌ಆರ್‌ಪಿ 12ನೇ ಪಡೆ ತುಮಕೂರಿನ (12th BN KSRP Tumkur) ಕಮಾಂಡೆಂಟ್ ಹಂಜಾ ಹುಸೇನ್ ಹೇಳಿದರು.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸುವರ್ಣ ಮಹೋತ್ಸವದ 50 ವರ್ಷದ ಅಂಗವಾಗಿ ತಾಲೂಕಿನ ಕ್ಯಾಮೇನಹಳ್ಳಿ ಪಂಚಾಯಿತಿಯ ತುಂಗನಹಳ್ಳಿ ಬಳಿ ನಿರ್ಮಿಸಿರುವ ಬೃಹತ್ ಕೆಎಸ್‌ಆರ್‌ಪಿ 12ನೇ ಪಡೆಯ ಮೈದಾನದಲ್ಲಿ ಏರ್ಪಡಿಸಿದ್ದ ಪದಕ ಪ್ರಧಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾಭ್ಯಾಸದ ಜತೆ ಕ್ರೀಡೆಗಳನ್ನು ಭಾಗವಹಿಸುವಂತೆ ಮಕ್ಕಳಲ್ಲಿ ಆಸಕ್ತಿ ಬೆಳೆಸಬೇಕು. ಮಕ್ಕಳು ಎಲ್ಲಾ ವಿಧದಲ್ಲೂ ಮುಂದೆ ಬರಬೇಕು. ಹೆತ್ತ ತಂದೆ-ತಾಯಿಗಳಿಗೆ ಮಕ್ಕಳ ಏಳಿಗೆಯೇ ಮುಖ್ಯ. ಪೊಲೀಸ್ ಅಧಿಕಾರಿಗಳು ಮಾತ್ರವಲ್ಲ, ಪ್ರತಿಯೊಬ್ಬ ತಂದೆ-ತಾಯಿಯೂ ಇದನ್ನೇ ಮಾಡುತ್ತಾರೆ ಎಂದು ಹೇಳುತ್ತಾ, ಮೀಸಲುಪಡೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ 50ನೇ ವರ್ಷದ ಸುವರ್ಣ ಮಹೋತ್ಸವದ ಶುಭಾಶಯಗಳನ್ನು ತಿಳಿಸಿದರು.

ಇದೇ ವೇಳೆ ಹಂಜಾ ಹುಸೇನ್ ಅವರು ಉನ್ನತ ಅಧಿಕಾರಿಗಳಿಗೆ ಪದಕ ಪ್ರಧಾನ ಹಾಗೂ ಕರ್ತವ್ಯ ಕೂಟದ ಪ್ರಶಂಸನಾ ಪತ್ರ ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ರಾಜ್ಯ ವಾಣಿಜ್ಯ ತೆರಿಗೆಗಳ ಇಲಾಖೆ ಉಪ ಆಯುಕ್ತ ಮಹಮ್ಮದ್ ರಫಿ ಬಾಷಾ ಮತ್ತು ತುಮಕೂರು ಜಿಲ್ಲೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅಬ್ದುಲ್ ಖಾದರ್, ಸಹಾಯಕ ಕಮಾಂಡೆಂಟ್ ನವೀನ್ ಕುಮಾರ್, ಆಯಿಷಾ, ಫಾರೆಸ್ಟ್ ಆಫೀಸರ್ ರಘುನಂದನ್ ಸೇರಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

ಈ ಸುದ್ದಿಯನ್ನೂ ಓದಿ | Republic Day Nail Art 2025: ಗಣರಾಜ್ಯೋತ್ಸವದ ಹಿನ್ನೆಲೆ ಟ್ರೆಂಡಿಯಾದ ತಿರಂಗಾ ನೇಲ್ ಆರ್ಟ್
