ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನ್ಯಾಯಾಧೀಶರ ಕೊರತೆ: ಚಿಕ್ಕನಾಯಕನಹಳ್ಳಿ ಕೋರ್ಟ್‌ನಲ್ಲಿ ಬರೋಬ್ಬರಿ 3,500 ಪ್ರಕರಣ ಬಾಕಿ

Chikkanayakanahalli News: ಚಿಕ್ಕನಾಯಕನಹಳ್ಳಿ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಕೊರತೆಯಿಂದಾಗಿ ನ್ಯಾಯದಾನ ಪ್ರಕ್ರಿಯೆ ಕುಂಠಿತಗೊಂಡಿದ್ದು, ತಕ್ಷಣವೇ ಖಾಲಿ ಇರುವ ಹೆಚ್ಚುವರಿ ಹಾಗೂ ಪ್ರಧಾನ ನ್ಯಾಯಾಧೀಶರನ್ನು ನೇಮಕ ಮಾಡಬೇಕೆಂದು ತಾಲೂಕಿನ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ, ಸದ್ಯ ಸುಮಾರು 3,500ಕ್ಕೂ ಹೆಚ್ಚು ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣ ವಿಚಾರಣೆ ಕಾಣದೆ ಬಾಕಿ ಇದೆ.

ಚಿಕ್ಕನಾಯಕನಹಳ್ಳಿ ನ್ಯಾಯಾಲಯ (ಸಂಗ್ರಹ ಚಿತ್ರ)

-ಧನಂಜಯ್

ಚಿಕ್ಕನಾಯಕನಹಳ್ಳಿ, ಏ. 2: ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಕೊರತೆಯಿಂದಾಗಿ ನ್ಯಾಯದಾನ ಪ್ರಕ್ರಿಯೆ ಕುಂಠಿತಗೊಂಡಿದ್ದು, ತಕ್ಷಣವೇ ಖಾಲಿ ಇರುವ ಹೆಚ್ಚುವರಿ ಹಾಗೂ ಪ್ರಧಾನ ನ್ಯಾಯಾಧೀಶರನ್ನು ನೇಮಕ ಮಾಡಬೇಕೆಂದು ತಾಲೂಕಿನ (Chikkanayakanahalli News) ನಾಗರಿಕರು ಆಗ್ರಹಿಸಿದ್ದಾರೆ.

ಚಿಕ್ಕನಾಯಕನಹಳ್ಳಿ ನ್ಯಾಯಾಲಯದಲ್ಲಿ ಪ್ರಸ್ತುತ ಸೀನಿಯರ್ ಸಿವಿಲ್ ಜಡ್ಜ್ ಇದ್ದಾರೆ. ಅವರು ತರಬೇತಿಗೆ ತೆರಳಿರುವುದು ಮತ್ತು ಹೆಚ್ಚುವರಿ ನ್ಯಾಯಾಧೀಶರ ನೇಮಕವಾಗದ ಕಾರಣ ದೈನಂದಿನ ಕಾರ್ಯಕಲಾಪಗಳಿಗೆ ಭಾರಿ ಅಡಚಣೆಯಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಪ್ರಮುಖ ವಿಚಾರಣೆಗಳನ್ನು ತಿಪಟೂರು ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ. ಇದರಿಂದಾಗಿ ತಾಲೂಕಿನ ಕುಗ್ರಾಮಗಳಿಂದ ಬರುವ ಬಡ ಕಕ್ಷಿದಾರರು ಹಣ ಮತ್ತು ಸಮಯ ವ್ಯಯಿಸಿ ಪ್ರತಿ ವಿಚಾರಣೆಗೂ ದೂರದ ತಿಪಟೂರಿಗೆ ಅಲೆಯುವಂತಾಗಿದೆ.

3,500 ಪ್ರಕರಣಗಳು ಬಾಕಿ

ಇಬ್ಬರು ನ್ಯಾಯಾಧೀಶರ ಅವಶ್ಯಕತೆ ಇರುವ ಈ ನ್ಯಾಯಾಲಯದಲ್ಲಿ ಹುದ್ದೆಗಳು ಖಾಲಿ ಇರುವುದು ಸಮಸ್ಯೆಯನ್ನು ದ್ವಿಗುಣಗೊಳಿಸಿದೆ. ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ, ಸದ್ಯ ಸುಮಾರು 3,500ಕ್ಕೂ ಹೆಚ್ಚು ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣ ವಿಚಾರಣೆ ಕಾಣದೆ ಬಾಕಿ ಇದೆ. ನ್ಯಾಯಾಧೀಶರ ನೇಮಕ ವಿಳಂಬವಾಗುತ್ತಿರುವುದರಿಂದ ಈ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ನ್ಯಾಯದಾನ ವಿಳಂಬವಾಗುತ್ತಿದೆ.

ಜನನ-ಮರಣ ಪ್ರಮಾಣಪತ್ರಕ್ಕೆ ಬ್ರೇಕ್

ಸಾರ್ವಜನಿಕರಿಗೆ ಅತ್ಯಗತ್ಯವಾದ ಜನನ ಹಾಗೂ ಮರಣ ಪ್ರಮಾಣ ಪತ್ರಗಳನ್ನು ಪಡೆಯಲು ಈಗ ತೀವ್ರ ತೊಂದರೆಯಾಗುತ್ತಿದೆ. ನಿಗದಿತ ಅವಧಿಯ ನಂತರ ನೋಂದಣಿ ಮಾಡಿಸಲು ನ್ಯಾಯಾಲಯದ ಅನುಮತಿ ಬೇಕು. ಆದರೆ ಚಿಕ್ಕನಾಯಕನಹಳ್ಳಿಯ ಪ್ರಕರಣಗಳು ವರ್ಗಾವಣೆಯಾಗಿದ್ದರೂ ಸಹ, ತಿಪಟೂರು ನ್ಯಾಯಾಲಯದಲ್ಲಿ ಜನನ-ಮರಣದ ಅರ್ಜಿಗಳನ್ನು ವಿಲೇವಾರಿ ಮಾಡುತ್ತಿಲ್ಲ. ಇದರಿಂದಾಗಿ ಶಾಲಾ ದಾಖಲಾತಿ, ಆಸ್ತಿ ಹಕ್ಕು ಬದಲಾವಣೆ ಹಾಗೂ ವಿಮಾ ಸೌಲಭ್ಯ ಪಡೆಯಲು ಜನರು ಕಚೇರಿಯಿಂದ ಕಚೇರಿಗೆ ಅಲೆಯುವಂತಾಗಿದೆ.

ಭಾರತದ ಜಲಮೂಲಗಳ ಸಂರಕ್ಷಣೆಗೆ ರಿಲಯನ್ಸ್ ಫೌಂಡೇಷನ್‌ನಿಂದ ಜನ ಚಳವಳಿ

ಕೂಡಲೇ ಹೈಕೋರ್ಟ್ ಮತ್ತು ನ್ಯಾಯಾಂಗ ಇಲಾಖೆಯು ಪೂರ್ಣ ಪ್ರಮಾಣದ ನ್ಯಾಯಾಧೀಶರನ್ನು ನೇಮಿಸಬೇಕು. ತುರ್ತಾಗಿ ಜನನ-ಮರಣ ಪ್ರಮಾಣ ಪತ್ರಗಳ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.