ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr G Parameshwar: ಡಿಸಿ ಜತೆ ಬೆಟ್ಟಿಂಗ್ ಕಟ್ಟಿ ಸೋಲು; ವ್ಯಾಪಕ ಟೀಕೆಗೆ ಗುರಿಯಾದ ಡಾ.ಜಿ. ಪರಮೇಶ್ವರ್

Tumkur News: ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಕಬಡ್ಡಿ ಫೈನಲ್‌ ಪಂದ್ಯದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ವಿಜಯಪುರ ತಂಡ ಗೆಲ್ಲುತ್ತದೆ ಎಂದು ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರೊಂದಿಗೆ 500 ರೂಪಾಯಿ ಬೆಟ್ಟಿಂಗ್‌ ಕಟ್ಟಿದ್ದರು. ಆದರೆ, ದಕ್ಷಿಣ ಕನ್ನಡ ತಂಡವು 36-26 ಅಂಕಗಳಿಂದ ವಿಜಯಪುರ ತಂಡವನ್ನು ಸೋಲಿಸಿತು. ಇದರಿಂದಾಗಿ ಪರಮೇಶ್ವರ್‌ ಬಾಜಿ ಹಣವನ್ನು ಕಳೆದುಕೊಂಡಿದ್ದಾರೆ. ಈ ಬಗ್ಗೆ ಬಹುಮಾನ ವಿತರಣೆ ಸಮಯದಲ್ಲಿ ಸಚಿವ ಪರಮೇಶ್ವರ್ ಹೇಳಿದ್ದಾರೆ.

ಡಿಸಿ ಜತೆ ಬೆಟ್ಟಿಂಗ್ ಕಟ್ಟಿ ವ್ಯಾಪಕ ಟೀಕೆಗೆ ಗುರಿಯಾದ ಪರಮೇಶ್ವರ್

-

Prabhakara R Prabhakara R Oct 21, 2025 7:04 PM

ತುಮಕೂರು: ಬೆಟ್ಟಿಂಗ್‌, ಸ್ಮಗ್ಲಿಂಗ್‌ ಸೇರಿ ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾದ ಗೃಹ ಸಚಿವರೇ ಬೆಟ್ಟಿಂಗ್ ಕಟ್ಟುವ ಮೂಲಕ ಭಾರಿ ಟೀಕೆಗೆ ಗುರಿಯಾಗಿದ್ದಾರೆ. ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ವೀಕ್ಷಿಸಲು ಆಗಮಿಸಿದ್ದ ಗೃಹ ಸಚಿವ ಪರಮೇಶ್ವರ್‌ (Dr G Parameshwar) ಅವರು, ಡಿಸಿ ಜತೆ ಬೆಟ್ಟಿಂಗ್ ಕಟ್ಟಿ 500 ರೂ. ಕಳೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ. ಅವರು ತಮಾಷೆಗೆ ಬೆಟ್ಟಿಂಗ್‌ ಕಟ್ಟಿದ್ದರೂ, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಕಬಡ್ಡಿ ಫೈನಲ್‌ ಪಂದ್ಯದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ವಿಜಯಪುರ ತಂಡ ಗೆಲ್ಲುತ್ತದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರೊಂದಿಗೆ 500 ರೂಪಾಯಿ ಬೆಟ್ಟಿಂಗ್‌ ಕಟ್ಟಿದ್ದರು. ಅಂತಿಮ ಪಂದ್ಯದಲ್ಲಿ ದಕ್ಷಿಣ ಕನ್ನಡ ತಂಡವು 36-26 ಅಂಕಗಳಿಂದ ವಿಜಯಪುರ ತಂಡವನ್ನು ಸೋಲಿಸಿತು. ಇದರಿಂದಾಗಿ ಬಾಜಿ ಹಣವನ್ನು ಕಳೆದುಕೊಂಡ ಸಚಿವ ಪರಮೇಶ್ವರ್, ವಿಜೇತ ತಂಡಕ್ಕೆ ಪ್ರಶಸ್ತಿ ವಿತರಿಸುವಾಗ ಬೆಟ್ಟಿಂಗ್ ವಿಷಯವನ್ನು ಬಹಿರಂಗಪಡಿಸಿದರು.

ವಿಜೇತ ತಂಡಕ್ಕೆ ಬಹುಮಾನ ವಿತರಿಸಿದ ನಂತರ ಪರಮೇಶ್ವರ್ ಅವರು ಮಾತನಾಡಿ, ನಾನು 500 ಕಳೆದುಕೊಂಡು ಬಿಟ್ಟೆ. ವಿಜಯಪುರ ತಂಡ ಗೆಲ್ಲುತ್ತದೆ ಎಂದು ಜಿಲ್ಲಾಧಿಕಾರಿ ಜತೆ ಬೆಟ್ಟಿಂಗ್ ಕಟ್ಟಿದ್ದೆ. ಆದರೆ ಸೋತೆ ಎಂದು ತಾವೇ ಹೇಳಿಕೊಂಡಿದ್ದು, ಇದರಿಂದ ಭಾರಿ ಟೀಕೆಗೆ ಗುರಿಯಾಗಿದ್ದಾರೆ.

ಈ ಸುದ್ದಿಯನ್ನೂ ಓದಿ | CM Siddaramaiah: ಒಂದು ವಾರದಲ್ಲಿ ರಸ್ತೆ ಗುಂಡಿಗಳನ್ನೆಲ್ಲ ಮುಚ್ಚಲು ಸಿಎಂ ಸಿದ್ದರಾಮಯ್ಯ ಆದೇಶ

ಪಟಾಕಿಯಿಂದ ಗಾಯಗೊಂಡ ಬಾಲಕನ ದೃಷ್ಟಿ ಉಳಿಸಿದ ಶಾರದಾದೇವಿ ಕಣ್ಣಿನ ಆಸ್ಪತ್ರೆ ವೈದ್ಯರು

Pavagada News

ಪಾವಗಡ, ಅ.21: ಪಟಾಕಿಯಿಂದ ಗಾಯಗೊಂಡ ಬಾಲಕನಿಗೆ ಪಟ್ಟಣದ ಶಾರದಾದೇವಿ ಕಣ್ಣಿನ ಆಸ್ಪತ್ರೆ ವೈದ್ಯರು ತುರ್ತು ಚಿಕಿತ್ಸೆ ನೀಡಿ ದೃಷ್ಟಿ ಉಳಿಸಿದ್ದಾರೆ. ಪಾವಗಡ (Pavagada News) ತಾಲೂಕಿನ ಬುಡ್ಡಾರೆಡ್ಡಿ ಹಳ್ಳಿಯ ಬಾಲಕ ನಾಣಿ (9) ನೆನ್ನೆ ರಾತ್ರಿ ದೀಪಾವಳಿಯ ಪ್ರಯುಕ್ತ ಹೂಬಾಣವನ್ನು ತನ್ನ ಮನೆಯ ಮುಂದೆ ಹಚ್ಚಲು ಪ್ರಯತ್ನಿಸಿದಾಗ ಎಡಗಣ್ಣಿಗೆ ಬೆಂಕಿಯ ಕಿಡಿಗಳು ಹಾರಿ ದೃಷ್ಟಿ ಅಪಾಯದಲ್ಲಿತ್ತು. ಹೀಗಾಗಿ ಇಂದು ಮುಂಜಾನೆಯೇ ಬಾಲಕನನ್ನು ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು, ಸಂಸ್ಥೆಯ ಮುಖ್ಯ ನೇತ್ರ ತಜ್ಞರು ಹಾಗೂ ಸಿಬ್ಬಂದಿ ಚಿಕಿತ್ಸೆ ನೀಡಿ ಬಾಲಕನ ದೃಷ್ಟಿ ಉಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Delhi Air Pollution: ದೀಪಾವಳಿ ಸಂಭ್ರಮ; ದೆಹಲಿಯಲ್ಲಿ ಅತ್ಯಂತ ಕಳಪೆಗಿಳಿದ ವಾಯು ಗುಣಮಟ್ಟ

ಬಾಲಕನಿಗೆ ಔಷಧೋಪಚಾರ ಮಾಡಿದ ನಂತರ ಯಾವುದೇ ರೀತಿಯ ಅಪಾಯವಿಲ್ಲವೆಂದು ಆತನ ತಂದೆ-ತಾಯಿಗೆ ಪೂಜ್ಯ ಸ್ವಾಮಿ ಜಪಾನಂದಜೀ ಅವರು ಧೈರ್ಯ ಕಳುಹಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ, ಎಲ್ಲಾ ಮಕ್ಕಳಿಗೂ, ಪೋಷಕರಿಗೂ ತಿಳಿಸುವುದೇನೆಂದರೆ, ದಯಮಾಡಿ ಪಟಾಕಿಗಳನ್ನು ಹಚ್ಚುವ ಮುನ್ನ ದೂರದಿಂದ ಹಚ್ಚಲು ಹಾಗೂ ಎಲ್ಲ ರೀತಿಯ ಮುಂಜಾಗ್ರತೆಯನ್ನು ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.