ಪ್ರೆಸಿಡೆನ್ಸಿ ವಿದ್ಯಾಸಂಸ್ಥೆ ಸಾವಿರಾರು ಮಕ್ಕಳ ಬದುಕಿನಲ್ಲಿ ಜ್ಞಾನ ದೀವಿಗೆ ಹಚ್ಚಿದೆ: ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ
ಫ್ರೆಸಿಡೆನ್ಸಿ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದವರು ಕಳೆದ ೧೭ ವರ್ಷದಲ್ಲಿ ೪೫೦೦ ವಿದ್ಯಾರ್ಥಿ ಗಳು ಇಂಜಿನಿಯರ್‌ಗಳಾಗಿದ್ದಾರೆ, ೬೦೦ ವಿದ್ಯಾರ್ಥಿಗಳು ಅಗ್ರಿಕಲ್ಚರ್, ಬಿವಿಎಸ್ ಓದಿದ್ದಾರೆ, ೩೦೦ ವಿದ್ಯಾರ್ಥಿಗಳು ಎಂ.ಬಿ.ಬಿ.ಎಸ್. ವಿದ್ಯಾಭ್ಯಾಸ ಮಾಡಿ ದೇಶದ ವಿವಿಧ ಭಾಗ ಹಾಗೂ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ.

-

ಶಿರಾ: ವಿದ್ಯಾರ್ಥಿಗಳು ನಮ್ಮ ಸಾಂಸ್ಕöÈತಿಕ ರಾಯಭಾರಿಗಳು ನೀವು ಸಮಾಜಕ್ಕೆ ಸಹಾಯ ಮಾಡಿದವರನ್ನು ಜನ್ಮ ಕೊಟ್ಟವರನ್ನು ಮರೆಯಬಾರದು ಎಂದ ಅವರು ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಪ್ರೆಸಿಡೆನ್ಸಿ ಪಬ್ಲಿಕ್ ಶಾಲೆ ತುಮಕೂರು ಜಿಲ್ಲೆಯಲ್ಲಿ ನಂಬರ್ ಒನ್ ಆಗಿದೆ. ಇದು ಸಾವಿರಾರು ಮಕ್ಕಳ ಬದುಕಿನಲ್ಲಿ ಜ್ಞಾನ ದೀವಿಗೆ ಹಚ್ಚಿದೆ. ಈ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾ ಭ್ಯಾಸ ಮಾಡುತ್ತಿರುವುದು ನಿಮ್ಮ ಪುಣ್ಯ ಎಂದು ತುಮಕೂರಿನ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಗಳು ನುಡಿದರು.
ಅವರು ನಗರದ ಪ್ರೆಸಿಡೆನ್ಸಿ ಪದವಿ ಪೂರ್ವ ಕಾಲೇಜಿನಲ್ಲಿ ೨೦೨೪-೨೫ ನೇ ಸಾಲಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗೌರವ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭ ಪ್ರತಿಭೋತ್ಸವ ಕಾರ್ಯ ಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಫ್ರೆಸಿಡೆನ್ಸಿ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದವರು ಕಳೆದ ೧೭ ವರ್ಷದಲ್ಲಿ ೪೫೦೦ ವಿದ್ಯಾರ್ಥಿ ಗಳು ಇಂಜಿನಿಯರ್‌ಗಳಾಗಿದ್ದಾರೆ, ೬೦೦ ವಿದ್ಯಾರ್ಥಿಗಳು ಅಗ್ರಿಕಲ್ಚರ್, ಬಿವಿಎಸ್ ಓದಿದ್ದಾರೆ, ೩೦೦ ವಿದ್ಯಾರ್ಥಿಗಳು ಎಂ.ಬಿ.ಬಿ.ಎಸ್. ವಿದ್ಯಾಭ್ಯಾಸ ಮಾಡಿ ದೇಶದ ವಿವಿಧ ಭಾಗ ಹಾಗೂ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ಗ್ರಾಮೀಣ ಭಾಗದಲ್ಲಿ ಅತ್ಯಂತ ಗುಣಮಟ್ಟದ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದ ಸಂಸ್ಥೆಯ ಅಧ್ಯಕ್ಷ ಚಿದಾನಂದ್ ಎಂ ಗೌಡ ಅವರ ಧೈರ್ಯ ಮೆಚ್ಚಬೇಕು ಎಂದ ಅವರು ವಿದ್ಯಾರ್ಥಿಗಳು ತಂದೆ ತಾಯಿಗಳಿಗೆ, ಅಕ್ಷರ ಕಳಿಸಿದ ಗುರುವಿಗೆ ಜೀವನ ಪೂರ್ತಿ ಋಣಿಯಾಗಿರಬೇಕು ಎಂದರು.
ವಿಧಾನಪರಿಷತ್ ಸದಸ್ಯರು ಹಾಗೂ ಪ್ರೆಸಿಡೆನ್ಸಿ ಸಂಸ್ಥೆಯ ಅಧ್ಯಕ್ಷರಾದ ಚಿದಾನಂದ್ ಎಂ.ಗೌಡ ಅವರು ಮಾತನಾಡಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ನಾನು ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆಯನ್ನು ತೆರೆದಿದ್ದರೂ ಅದನ್ನು ಬಿಟ್ಟು ಶಿರಾಕ್ಕೆ ಬಂದೆ. ಇಂದು ನನ್ನ ಆಶಯ ಸಾಕಾರಗೊಳ್ಳುತ್ತಿದೆ. ಪ್ರೆಸಿಡೆನ್ಸಿ ಶಿಕ್ಷಣ ಸಂಸ್ಥೆಯು ಕಳೆದ ೨೫ ವರ್ಷಗಳಿಂದ ಶಿರಾ ತಾಲೂಕು ಸೇರಿದಂತೆ ರಾಜ್ಯದ ನಾನು ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿದೆ ಎಂದ ಅವರು ನಾನು ಸರಕಾರಿ ಶಾಲೆಗಳನ್ನೂ ಸಹ ಪ್ರೆಸಿಡೆನ್ಸಿ ಶಾಲೆಯ ಮಾದರಿಯಲ್ಲಿ ಹೈಟೆಕ್ ಶಾಲೆಗಳನ್ನಾಗಿ ನಿರ್ಮಿಸಬೇಕೆಂಬ ಗುರಿ ಹೊಂದಿದ್ದು, ಈಗಾಗಲೇ ಹಲವು ಶಾಲೆಗಳನ್ನು ಅಭಿವೃದ್ಧಿ ಮಾಡಿದ್ದೇನೆ ಮುಂದಿನ ದಿನಗಳ ಲ್ಲೂ ತಾಲೂಕಿನ ಜನತೆ ಆರ್ಶೀವಾದ ಮಾಡಿದರೆ ಹೋಬಳಿಗೊಂದು ಹೈಟೆಕ್ ಶಾಲೆ ನಿರ್ಮಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಅಕಾಡೆಮಿ ಅಡ್ವೆöÊಸರ್ ಪ್ರೊಫೆಸರ್ ದೇಶಮುಖ್, ಜೈರಾಮ್, ಪ್ರಾಂಶು ಪಾಲರಾದ ರಘು, ಐಸಿಐಸಿ ಮುಖ್ಯೋಪಾಧ್ಯಾಯರಾದ ಜಾರ್ಜ್ ಮ್ಯಾಥ್ಯೂಸ್, ಸಿಬಿಎಸ್ಸಿ ಮುಖ್ಯೋಪಾಧ್ಯಾಯರಾದ ಆಶಾ, ಆಡಳಿತಾಧಿಕಾರಿ ಗಿರಿಪ್ರಸಾದ್ ಪಾಟೀಲ್ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು.