ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Tumkur News: ಸಚಿವ ಈಶ್ವರ ಖಂಡ್ರೆ ಕಟ್ಟುನಿಟ್ಟಿನ ಕ್ರಮ: ಹಿರೇಹಳ್ಳಿ ಕೆರೆ ಒತ್ತುವರಿ ತೆರವು ಆರಂಭ

Tumkur News: ತುಮಕೂರು ತಾಲೂಕಿನ ಊರ್ಡಿಗೆರೆ ಹೋಬಳಿ ಹಿರೇಹಳ್ಳಿ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ತೀವ್ರಗೊಂಡಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಅವರ ಕಟ್ಟುನಿಟ್ಟಿನ ಸೂಚನೆ ಹಾಗೂ ಇತ್ತೀಚಿನ ಸ್ಥಳ ಪರಿಶೀಲನೆಯ ಬೆನ್ನಲ್ಲೇ, ತೆರವು ಕಾರ್ಯಾಚರಣೆ ತೀವ್ರಗೊಂಡಿದೆ.

ತುಮಕೂರು ತಾಲೂಕಿನ ಹಿರೇಹಳ್ಳಿ ಕೆರೆ ಒತ್ತುವರಿ ತೆರವು ಕಾರ್ಯ.

ತುಮಕೂರು, ಸೆ.09: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಅವರ (Eshwar Khandre) ಕಟ್ಟುನಿಟ್ಟಿನ ಸೂಚನೆ ಹಾಗೂ ಇತ್ತೀಚಿನ ಸ್ಥಳ ಪರಿಶೀಲನೆಯ ಬೆನ್ನಲ್ಲೇ, ತಾಲೂಕಿನ (Tumkur News) ಊರ್ಡಿಗೆರೆ ಹೋಬಳಿ ಹಿರೇಹಳ್ಳಿ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ತೀವ್ರಗೊಂಡಿದೆ.

ರಾಜ್ಯದ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರಿದ ಒಟ್ಟು 32,504 ಕೆರೆಗಳ ಪೈಕಿ ಒತ್ತುವರಿಯಾಗಿ ಉಳಿದಿರುವ 4,828 ಕೆರೆಗಳ 11,671 ಎಕರೆ ಪ್ರದೇಶವನ್ನು ನಿಯಮಾನುಸಾರ ತೆರವುಗೊಳಿಸುವಂತೆ ಸಚಿವರು ಇತ್ತೀಚೆಗೆ ಕಡಕ್ ಆದೇಶ ಹೊರಡಿಸಿದ್ದರು. ಆದೇಶದ ಮುಂದುವರಿದ ಭಾಗವಾಗಿ ಸೆಪ್ಟೆಂಬರ್ 5ರಂದು ಸಚಿವ ಈಶ್ವರ ಖಂಡ್ರೆ ಅವರು ತುಮಕೂರಿನ ಹಿರೇಹಳ್ಳಿ ಕೆರೆ ಪ್ರದೇಶಕ್ಕೆ ಖುದ್ದಾಗಿ ಭೇಟಿ ನೀಡಿ, ಒತ್ತುವರಿ ತೆರವಿಗೆ ಸ್ಥಳದಲ್ಲೇ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

ಪ್ರಾರಂಭವಾದ ಕಾರ್ಯಾಚರಣೆ: ಸಚಿವರ ಭೇಟಿಯ ಬೆನ್ನಲ್ಲೇ ಎಚ್ಚೆತ್ತ ಪಂಚಾಯತ್ ಅಧಿಕಾರಿಗಳು ಮತ್ತು ಭೂಮಾಪಕರು, ಸರ್ವೆ ನಂ. 118ರಲ್ಲಿ ಬರುವ ಒಟ್ಟು 17.32 ಎಕರೆ ಕೆರೆ ಅಂಗಳದಲ್ಲಿ ಅಳತೆ ಕಾರ್ಯ ನಡೆಸಿ ಒತ್ತುವರಿ ಪ್ರದೇಶವನ್ನು ಗುರುತಿಸಿದ್ದಾರೆ.

ಜೆಸಿಬಿ ಮೂಲಕ ತೆರವು: ಜೆಸಿಬಿ ಯಂತ್ರಗಳ ಸಹಾಯದಿಂದ ಅಕ್ರಮವಾಗಿ ಕೆರೆಗೆ ಮಣ್ಣು ತುಂಬಿ ಮಾಡಲಾಗಿದ್ದ ಸುಮಾರು 28 ಗುಂಟೆ ಒತ್ತುವರಿಯನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಅಲ್ಲದೆ, ಕೆರೆಯ ಹೆಚ್ಚಿನ ಭೂಮಿ ಸಾರ್ವಜನಿಕ ರಸ್ತೆಯಾಗಿ ಬಳಕೆಯಾಗುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ.

ಮುಂದುವರಿದ ಪ್ರಕ್ರಿಯೆ: ಸಂಪೂರ್ಣ 17.32 ಎಕರೆ ಕೆರೆಗೆ ಗಡಿ ಗುರುತಿಸಿ ಹದ್ದುಬಸ್ತು ಮಾಡುವ ಕಾರ್ಯ ಭರದಿಂದ ಸಾಗಿದ್ದು, ಉಳಿದ ಒತ್ತುವರಿ ತೆರವಿನ ಕಾರ್ಯಾಚರಣೆಯೂ ಮುಂದುವರಿಯಲಿದೆ.

ಯುವ ಬಾಕ್ಸರ್ ಪ್ರಕುಲ್ ಸಾಯಿಗೆ ಐಸಿಎಸ್‍ಇ ಪ್ರಾದೇಶಿಕ ಕ್ರೀಡಾಕೂಟದಲ್ಲಿ ಚಿನ್ನ: ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಗ್ರಾಮ ಪಂಚಾಯತ್ ಕೆರೆಗಳ ಸಂರಕ್ಷಣೆಗೆ ಸಚಿವರು ಕೈಗೊಂಡಿರುವ ಈ ದಿಟ್ಟ ಕ್ರಮವು ರಾಜ್ಯದ ಇತರೆಡೆಗಳಲ್ಲಿ ಕೆರೆಗಳನ್ನು ಒತ್ತುವರಿ ಮಾಡಿಕೊಂಡಿರುವವರಿಗೂ ಸ್ಪಷ್ಟ ಎಚ್ಚರಿಕೆಯ ಸಂದೇಶ ರವಾನಿಸಿದೆ.