ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರತಿಯೊಬ್ಬರಿಗೆ ಸಾಲ ಸಿಗಬೇಕು ಎಂಬುದು ಸಂಘದ ಉದ್ದೇಶ: ಐ.ಡಿ.ಹಳ್ಳಿ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಕೆ. ಶ್ರೀನಿವಾಸರೆಡ್ಡಿ

ಮಧುಗಿರಿ ತಾಲೂಕಿನ ಐ.ಡಿ.ಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಸಂಘದ ಆವರಣದಲ್ಲಿ ಭಾನುವಾರ ನಡೆಯಿತು. ಸಭೆಯಲ್ಲಿ ಸಂಘದ ಪದಾಧಿಕಾರಿಗಳು, ಷೇರುದಾರರು, ರೈತರು ಹಾಗೂ ವಿವಿಧ ಮುಖಂಡರು ಭಾಗವಹಿಸಿದ್ದರು.

ಮಧುಗಿರಿ: ಐ.ಡಿ.ಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಸಂಘದ ಆವರಣದಲ್ಲಿ ಭಾನುವಾರ ನಡೆಯಿತು. ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷರಾದ ಕೆ.ಶ್ರೀನಿವಾಸರೆಡ್ಡಿ ಅವರು, 2018ರಲ್ಲಿ ದಾಖಲೆಗಳ ಕೊರತೆಯಿಂದ 45 ರೈತರ ಸಾಲ ಮನ್ನಾ ಆಗಿಲ್ಲ. ಪ್ರತಿಯೊಬ್ಬರಿಗೆ ಸಾಲ ಸಿಗಬೇಕು ಎಂಬುದು ಸಂಘದ ಉದ್ದೇಶ ಎಂದು ಹೇಳಿದರು.

ಪಕ್ಷಭೇದ ಮಾಡದೇ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್.ರಾಜಣ್ಣರವರು ಎಲ್ಲರಿಗೂ ಸಾಲ ಕೊಡಬೇಕು ಎಂಬ ಆಶಯ ಹೊಂದಿದ್ದಾರೆ. ನಮ್ಮ ಸಂಘದಲ್ಲಿ 2 ಸಾವಿರಕ್ಕೂ ಹೆಚ್ಚು ಷೇರುದಾರರು ಇದ್ದು, ವಾಹನ ಸಾಲವೂ ಸಹ ವಿತರಣೆ ಮಾಡುತಿದ್ದೇವೆ ಎಂದು ಅಧ್ಯಕ್ಷರು ತಿಳಿಸಿದರು.

ಇನ್ನು ಷೇರುದಾರರು ಕೆಲವು ಸಲಹೆ ನೀಡಿದ ವೇಳೆ ಪ್ರತಿಕ್ರಿಯಿಸಿದ ಕಾರ್ಯದರ್ಶಿ ಎಲ್. ಕೆಂಪಯ್ಯ ಅವರು, ಅವುಗಳನ್ನು ಮುಂದಿನ ದಿನಗಳಲ್ಲಿ ಸರಿಪಡಿಕೊಳ್ಳುವುದು ಎಂದು ಹೇಳಿದರು.

ರಸಗೊಬ್ಬರ ಮಾರಾಟ, ಷೇರುದಾರರಿಗೆ ಬ್ಯಾಲೆನ್ಸ್ ಪ್ರತಿಗಳನ್ನು ನೀಡಬೇಕು, ರೈತರಿಗೆ ಕೆಸಿಸಿ ಸಾಲ ಕೊಡಬೇಕು, ಮಧುಗಿರಿ ತಾಲೂಕಿನ 26 ಸಹಕಾರ ಸಂಘಗಳ ಪೈಕಿ ಐ.ಡಿ.ಹಳ್ಳಿ ಸಂಘಕ್ಕೆ ಜಿಲ್ಲಾ ಡಿಸಿಸಿ ಬ್ಯಾಂಕ್ ವತಿಯಿಂದ ಪ್ರಶಸ್ತಿ ಪತ್ರ ಬಂದಿದೆ. ಹಾಗೇ ಸಂಘದಲ್ಲಿ ಠೇವಣಿ ಇಟ್ಟರೆ ಮುಂದೆ ಅನುಕೂಲ ಆಗಲಿದೆ ಎಂದು ಕಾರ್ಯದರ್ಶಿ ಎಲ್ ಕೆಂಪಯ್ಯ ಮನವಿ ಮಾಡಿದರು.

ವಾರ್ಷಿಕ ಮಹಾ ಸಭೆಯಲ್ಲಿ ಷೇರುದಾರರು, ರೈತರು, ಸಾರ್ವಜನಿಕರು ಹಾಗೂ ಮುಖಂಡರು ಇದ್ದರು.