ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gruha Lakshmi Scheme: ಗೃಹಲಕ್ಷ್ಮಿ ಹಣದಲ್ಲಿ ಮಗಳ ವಿದ್ಯಾಭ್ಯಾಸಕ್ಕೆ ಕಂಪ್ಯೂಟರ್ ಕೊಡಿಸಿದ ತಾಯಿ

Gruha Lakshmi Scheme: ಗೃಹಲಕ್ಷ್ಮಿ ಯೋಜನೆಯಲ್ಲಿ ಪ್ರತಿ ತಿಂಗಳು ಬರುವ 2000 ರೂ.ಗಳನ್ನು ತಾಯಿ ಕೂಡಿಟ್ಟು, ಕಂಪ್ಯೂಟರ್‌ ಕೊಡಿಸಿರುವುದಕ್ಕೆ ಮಗಳು ಸಂತಸ ವ್ಯಕ್ತಪಡಿಸಿದ್ದಾಳೆ.

ತಿಪಟೂರು: ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಬಡ ಕುಟುಂಬಗಳಿಗೆ ಸಾಕಷ್ಟು ನೆರವಾಗುತ್ತಿದೆ. ವಿಶೇಷವಾಗಿ ಗೃಹಲಕ್ಷ್ಮಿ ಯೋಜನೆಯಿಂದ ಕೋಟ್ಯಂತರ ಮಹಿಳೆಯರು ಪ್ರಯೋಜನ ಪಡೆಯುತ್ತಿದ್ದಾರೆ. ಯಲಬುರ್ಗಾದಲ್ಲಿ ಇತ್ತೀಚೆಗೆ ಯೋಜನೆಯ ಹಣವನ್ನು ತಾಯಿ ಕೂಡಿಟ್ಟು ಮಗನಿಗೆ ಲ್ಯಾಪ್‌ಟಾಪ್ ಕೊಡಿಸಿ ಗಮನ ಸೆಳೆದಿದ್ದರು. ಅದೇ ರೀತಿ ಇದೀಗ ಮಗಳ ವಿದ್ಯಾಭ್ಯಾಸಕ್ಕಾಗಿ ತಾಯಿ, ಗೃಹಲಕ್ಷ್ಮಿ ಹಣದಲ್ಲಿ ಕಂಪ್ಯೂಟರ್ ಕೊಡಿಸಿರುವುದು ತಿಪಟೂರಿನಲ್ಲಿ ಕಂಡುಬಂದಿದೆ.

Tiptur News

ನಗ್ಮಾಬಾನು ಎಂಬುವವರು ಗೃಹಲಕ್ಷ್ಮಿ ಹಣದಲ್ಲಿ ಮಗಳ ವಿದ್ಯಾಭ್ಯಾಸಕ್ಕೆ ಕಂಪ್ಯೂಟರ್ ಕೊಡಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಯಲ್ಲಿ ಪ್ರತಿ ತಿಂಗಳು ಬರುವ 2000 ರೂ.ಗಳನ್ನು ತಾಯಿ ಕೂಡಿಟ್ಟು, ಕಂಪ್ಯೂಟರ್‌ ಕೊಡಿಸಿರುವುದಕ್ಕೆ ಮಗಳು ಸಂತಸ ವ್ಯಕ್ತಪಡಿಸಿದ್ದಾಳೆ. ನನ್ನ ತಾಯಿ ತನಗೆ ಬಂದ ಗೃಹಲಕ್ಷ್ಮಿ ಹಣದಲ್ಲಿ ನನಗೆ ಕಂಪ್ಯೂಟರ್‌ ಕೊಡಿಸಿದ್ದಾರೆ ಎಂದು ಪುತ್ರಿ ತಿಳಿಸಿದ್ದಾಳೆ.

ಈ ಸುದ್ದಿಯನ್ನೂ ಓದಿ | Gruha Lakshmi Scheme: ಗೃಹಲಕ್ಷ್ಮಿ ಯೋಜನೆಯಿಂದ ಬದುಕಿಗೆ ಹೊಸ ಚೈತನ್ಯ; ಸಿಎಂ ಎದುರು ಗೃಹಲಕ್ಷ್ಮಿಯರ ಪ್ರಶಂಸೆ

ಪ್ರಹ್ಲಾದ್ ರಾವ್ ಪ್ರಶಸ್ತಿ ಪಡೆದ ಮಹಾಬಲ ಸೀತಾಳಭಾವಿ

Award ceremony

ತುಮಕೂರು: ನಗರದಲ್ಲಿ ಆಯೋಜಿಸಿದ್ದ 39 ನೇ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಮ್ಮೇಳನದಲ್ಲಿ, ಮೊದಲಬಾರಿಗೆ ಕೆ. ಪ್ರಹ್ಲಾದ್‌ರಾವ್ ದತ್ತಿ ಪ್ರಶಸ್ತಿಯನ್ನು ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕರಾದ ಮಹಾಬಲ ಸೀತಾಳಭಾವಿಗೆ ನೀಡಿ ಗೌರವಿಸಲಾಯಿತು. 30 ವರ್ಷ ಮಾಧ್ಯಮ ಕ್ಷೇತ್ರದಲ್ಲಿ ಸುಧೀರ್ಘ ಸೇವೆ ಸಲ್ಲಿಸಿದ್ದ ಮಂಡ್ಯದ ಹೆಸರಾಂತ ಹಿರಿಯ ಪತ್ರಕರ್ತ ಕೆ. ಪ್ರಹ್ಲಾದ್‌ರಾವ್ ರಾವ್ ಹೆಸರಿನಲ್ಲಿ ಅವರ ಪುತ್ರರಾದ ಕೆ.ಪಿ.ಎಸ್. ಪ್ರಮೋದ್ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ದತ್ತಿ ಸ್ಥಾಪಿಸಿದ್ದು, ಪ್ರತಿ ವರ್ಷವೂ ಸಹ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನಡೆಸುವ ಸಮ್ಮೇಳನದಲ್ಲಿ ಅತ್ಯುತ್ತಮ ಪತ್ರಕರ್ತರಿಗೆ ಪ್ರಶಸ್ತಿ ನೀಡಬೇಕೆಂದು ಮನವಿಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ಪತ್ರಕರ್ತರ ಸಂಘವು, ತುಮಕೂರಿನಲ್ಲಿ ಆಯೋಜಿಸಿದ್ದ 39 ನೇ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಮ್ಮೇಳನದಲ್ಲಿ ಮೊದಲ ಬಾರಿಗೆ ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕ ಮಹಾಬಲ ಸೀತಾಳಭಾವಿ ಅವರಿಗೆ ಕೆ. ಪ್ರಹ್ಲಾದ್‌ರಾವ್ ದತ್ತಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

ಕೆ. ಪ್ರಹ್ಲಾದ್‌ರಾವ್ ರಾವ್ ಅವರ ಪುತ್ರರಾದ ಕೆ.ಪಿ.ಎಸ್. ಪ್ರಮೋದ್ ಅವರನ್ನು ಸನ್ಮಾನಿಸಲಾಯಿತು. ನನ್ನ ಎಲ್ಲ ಸಾಧನೆಗಳಗೆ ತಂದೆಯವರಾದ ಕೆ. ಪ್ರಹ್ಲಾದ್‌ರಾವ್ ಸ್ಪೂತಿಯಾಗಿದ್ದು, ಅವರಿಗೆ ಮಾಧ್ಯಮದ ಮೇಲಿದ್ದ ಅಪಾರವಾದ ಪ್ರೀತಿ, ಗೌರವ ಮತ್ತು ನಿಷ್ಠೆಯನ್ನು ನೆನೆಯುತ್ತಾ ಸಾರ್ಥಕ ಭಾವ ಮೆರೆದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಹಲವು ಗಣ್ಯರು ಭಾಗಿಯಾಗಿದ್ದರು.