ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Tumkur News: ತುಮಕೂರಿನಲ್ಲಿ ಧ್ವಜ ಪೂಜೆಯೊಂದಿಗೆ ಹಿಂದೂ ಮಹಾ ಗಣಪತಿ ಮಹೋತ್ಸವಕ್ಕೆ ಚಾಲನೆ

Tumkur News: ವಿಶ್ವ ಹಿಂದೂ ಪರಿಷದ್ ಹಾಗೂ ಭಜರಂಗದಳದ ವತಿಯಿಂದ ಈ ವರ್ಷದ ಹಿಂದೂ ಮಹಾ ಗಣಪತಿ ಮಹೋತ್ಸವದ ಅಂಗವಾಗಿ ನಗರದ ಬಿ.ಎಚ್. ರಸ್ತೆಯ ಸೋಮೆಕಟ್ಟೆ ಮಠದ ಬಳಿ ಸಂಪ್ರದಾಯಬದ್ಧವಾಗಿ ಗೋ ಪೂಜೆ ಮತ್ತು ಧ್ವಜ ಪೂಜೆ ನೆರವೇರಿಸುವ ಮೂಲಕ ಗಣೇಶೋತ್ಸವ ಕಾರ್ಯಕ್ರಮಗಳಿಗೆ ಅಧಿಕೃತ ಚಾಲನೆ ನೀಡಲಾಯಿತು.

ತುಮಕೂರು, ಸೆ.3: ವಿಶ್ವ ಹಿಂದೂ ಪರಿಷದ್ ಹಾಗೂ ಭಜರಂಗದಳದ ವತಿಯಿಂದ ಈ ವರ್ಷದ ಹಿಂದೂ ಮಹಾ ಗಣಪತಿ ಮಹೋತ್ಸವದ ಅಂಗವಾಗಿ ನಗರದ (Tumkur News) ಬಿ.ಎಚ್. ರಸ್ತೆಯ ಸೋಮೆಕಟ್ಟೆ ಮಠದ ಬಳಿ ಸಂಪ್ರದಾಯಬದ್ಧವಾಗಿ ಗೋ ಪೂಜೆ ಮತ್ತು ಧ್ವಜ ಪೂಜೆ ನೆರವೇರಿಸುವ ಮೂಲಕ ಗಣೇಶೋತ್ಸವ ಕಾರ್ಯಕ್ರಮಗಳಿಗೆ ಅಧಿಕೃತ ಚಾಲನೆ ನೀಡಲಾಯಿತು.

ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮತ್ತು ಬೆಳ್ಳಾವಿ ಕಾರದೇಶ್ವರ ಮಠದ ಕಾರದ ವೀರಬಸವ ಸ್ವಾಮೀಜಿ ಅವರು ಗೋಪೂಜೆ ಹಾಗೂ ಧ್ವಜ ಪೂಜೆ ನೆರವೇರಿಸಿದರು. ಗಣೇಶ ಚತುರ್ಥಿಯ ದಿನದಂದು ಇಲ್ಲಿ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನಾ ಕಾರ್ಯಕ್ರಮಗಳು ಆರಂಭವಾಗಲಿವೆ.

ಸ್ವಾಭಿಮಾನದ ಸಂಕೇತ ಧ್ವಜ

"ಧ್ವಜ ನಮ್ಮ ಸ್ವಾಭಿಮಾನ ಹಾಗೂ ಗೌರವದ ಸಂಕೇತ" ಎಂದು ಬಣ್ಣಿಸಿದ ಹಿರೇಮಠದ ಸ್ವಾಮೀಜಿಗಳು, ಇಂದಿನ ಕಾರ್ಯಕ್ರಮದಲ್ಲಿ ವಿಘ್ನೇಶ್ವರ, ಆಂಜನೇಯ, ಭಾರತ ಮಾತೆ ಹಾಗೂ ಧ್ವಜಕ್ಕೆ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜನರನ್ನು ಸಂಘಟಿಸಲು ಲೋಕಮಾನ್ಯ ತಿಲಕ್ ಅವರು ಸಾರ್ವಜನಿಕ ಗಣೇಶೋತ್ಸವ ಆರಂಭಿಸಿದರು ಎಂದು ಸ್ಮರಿಸಿದರು.

ದಾಸೋಹದ ನಗರಿ ತುಮಕೂರು

ತುಮಕೂರು ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕ್ಷೇತ್ರವಾಗಿ ಪ್ರಸಿದ್ಧವಾಗಿದ್ದು, ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ ಸ್ಪರ್ಶ ಪಡೆದ ಈ ಭೂಮಿಯಲ್ಲಿ ಯಾವುದೇ ಆಚರಣೆ ಮಾಡಿದರೂ ದಾಸೋಹಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ. ಹೀಗಾಗಿ ತುಮಕೂರು 'ದಾಸೋಹದ ಯೂನಿವರ್ಸಿಟಿ' ಎಂದು ಸ್ವಾಮೀಜಿಗಳು ಪ್ರಶಂಸಿಸಿದರು.

Tumkur News: ಧರ್ಮಸ್ಥಳ ಯೋಜನೆ ವತಿಯಿಂದ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮ

ಕಾರ್ಯಕ್ರಮದಲ್ಲಿ ಗಣೇಶೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಲಕ್ಷ್ಮಿಕಾಂತ್, ಉಪಾಧ್ಯಕ್ಷರಾದ ಮಹೇಂದ್ರ ವೈಷ್ಣವ್, ಅಂಬಿಕಾ ಹುಲಿನಾಯ್ಕರ್, ವಾಸವಿ ಗುಪ್ತ, ಪ್ರಧಾನ ಕಾರ್ಯದರ್ಶಿ ಕೆ.ಜಿ. ಪ್ರದೀಪ್, ಉತ್ಸವ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಕಾರ್ಯದರ್ಶಿಗಳಾದ ಕೆ. ವೇದಮೂರ್ತಿ, ಶಂಕರ್ ಕುರಿಪಾಳ್ಯ, ಸುರೇಶ್ ರಾವ್, ಶರತ್, ಓಂಕಾರೇಶ್ವರಿ, ರವೀಶ್ ಯಜಮಾನ್, ಪ್ರಮುಖರಾದ ವೈ.ಹೆಚ್. ಹುಚ್ಚಯ್ಯ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್. ರವಿಶಂಕರ್ ಹೆಬ್ಬಾಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಹೆಚ್. ಹನುಮಂತರಾಜು, ನಗರ ಅಧ್ಯಕ್ಷ ಧನುಷ್, ಜೀವನ್, ಮೃದುಲ್ ಸೇರಿದಂತೆ ವಿಶ್ವ ಹಿಂದೂ ಪರಿಷದ್, ಭಜರಂಗದಳ ಹಾಗೂ ಬಿಜೆಪಿಯ ಹಲವಾರು ಮುಖಂಡರು ಭಾಗವಹಿಸಿದ್ದರು.