ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

SIRA News: ಮುಂದಿನ ಪೀಳಿಗೆಗೆ ಶುದ್ಧವಾದ ನೀರನು ಉಳಿಸುವುದು ನಮ್ಮೆಲ್ಲರ ಕರ್ತವ್ಯ: ಗುರುಶಿವ

ನೀರಿನ ಮಿತ ಬಳಕೆಗೆ ಒತ್ತು ನೀಡುವುದು ಮುಂದಿನ ಪೀಳಿಗೆಗೆ ಪರಿಸರ ಸಮತೋಲನಕ್ಕೆ ಪಶು ಪಕ್ಷಿಗಳ ಸಂರಕ್ಷಣೆಗೆ ನೀರನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿರುತ್ತದೆ. ಅಟಲ್ ಭೂಜಲ್ ಯೋಜನೆ ಅಡಿ ನೀಡುತ್ತಿರುವ ತುಂತುರು ನೀರಾವರಿ ಮತ್ತು ಹನಿ ನೀರಾ ವರಿ. ಅಳವಡಿಕೆಯಿಂದ ಕೃಷಿಯಲ್ಲಿ ಶೇಕಡ 30, 40ರಷ್ಟು ನೀರಿನ ಉಳಿತಾಯ ವಾಗುತ್ತದೆ

ಚಿಕ್ಕನಹಳ್ಳಿ ಡಿ.ಎ.ಟಿ.ಸಿ.ಯಲ್ಲಿ ಅಂತರ್ಜಲ ನಿರ್ವಹಣೆ ಬಗ್ಗೆ ಕಾರ್ಯಾಗಾರ

Profile Ashok Nayak Feb 26, 2025 6:53 PM

ಶಿರಾ: ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಚಿಕ್ಕನಹಳ್ಳಿ ಮತ್ತು ಅಟಲ್ ಭೂಜಲ ಯೋಜನೆ ವತಿಯಿಂದ ಮಧುಗಿರಿ ತಾಲ್ಲೂಕಿನ ರೈತರಿಗೆ ಅಟಲ್ ಭೂಜಲ ಯೋಜನೆಯಡಿ ಸಮು ದಾಯ ಸಹಭಾಗಿತ್ವದೊಂದಿಗೆ ಅಂತರ್ಜಲ ನಿರ್ವಹಣೆ, ಜಲ ಭದ್ರತಾ ಯೋಜನೆ ಸಿದ್ದ ಪಡಿಸುವುದು ಮತ್ತು ನೀರಿನ ಬೇಡಿಕೆ ಕಡಿಮೆ ಮಾಡುವ ಸೂಕ್ಷ್ಮ ನೀರಾವರಿ ತಾಂತ್ರಿಕತೆಗಳ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಡಿ.ಎ.ಟಿ.ಸಿ. ಚಿಕ್ಕನಹಳ್ಳಿಯಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಡಿ.ಎ.ಟಿ.ಸಿ. ಸಹಾಯಕ ಕೃಷಿ ನಿರ್ದೇಶಕರಾದ ವಿಜಯಮೂರ್ತಿ, ಸಹಾಯಕ ಕೃಷಿ ನಿರ್ದೇಶಕರಾದ ಸುಮ, ಅಟಲ್ ಭೂಜಲ ಯೋಜನೆ ಯ ರಾಜ್ಯ ಕಾರ್ಯಕ್ರಮ ನಿರ್ವಹಣಾ ಘಟಕದ ಐ.ಇ.ಸಿ. ತಜ್ಞರಾದ ಹೇಮ ಪ್ರಸನ್ನ ಉದ್ಘಾಟಿಸಿದರು.

ಇದನ್ನೂ ಓದಿ: SIRA News: ಸರೋವರ್ ನಟಿಸಿರುವ ಮಾಂಕ್ ದಿ ಯಂಗ್ ಚಲನ ಚಿತ್ರವನ್ನು ನೋಡಿ ಪ್ರೋತ್ಸಾಹಿಸಿ; ಛಲಪತಿ

ಕಾರ್ಯಕ್ರಮದಲ್ಲಿ ಅಟಲ್ ಭೂಜಲ ಯೋಜನೆಯ ಬಗ್ಗೆ ಸಹಾಯಕ ಕೃಷಿ ನಿರ್ದೇಶಕ ರಾದ ಸುಮ ಹಾಗೂ ಡಿ.ಪಿ.ಎಂ.ಯು ನ ಕೃಷಿ ತಜ್ಞರಾದ ಗುರುಶಿವ ಅವರು ನೀರಿನ ಮಹತ್ವ, ಜಲ ಭದ್ರತಾ ಯೋಜನೆ ತಯಾರಿಸುವ ಹಂತಗಳ ಬಗೆಗಿನ ಮಾಹಿತಿ ನೀಡಿದರು. ನೀರಿನ ಮಿತ ಬಳಕೆಗೆ ಒತ್ತು ನೀಡುವುದು ಮುಂದಿನ ಪೀಳಿಗೆಗೆ ಪರಿಸರ ಸಮತೋಲನಕ್ಕೆ ಪಶು ಪಕ್ಷಿಗಳ ಸಂರಕ್ಷಣೆಗೆ ನೀರನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿರುತ್ತದೆ. ಅಟಲ್ ಭೂಜಲ್ ಯೋಜನೆ ಅಡಿ ನೀಡುತ್ತಿರುವ ತುಂತುರು ನೀರಾವರಿ ಮತ್ತು ಹನಿ ನೀರಾವರಿ. ಅಳವಡಿಕೆಯಿಂದ ಕೃಷಿಯಲ್ಲಿ ಶೇಕಡ 30, 40ರಷ್ಟು ನೀರಿನ ಉಳಿತಾಯ ವಾಗುತ್ತದೆ. ಮಳೆಯಾಶ್ರಿತ ಪ್ರದೇಶದಲ್ಲಿ ರೈತರು ಮಳೆಯ ನೀರನ್ನು ಕಂದಕ ಬದು ಕೃಷಿ ಹೊಂಡಗಳು ನಾಲ ಬದು, ಚೆಕ್ ಡ್ಯಾಮ್ ನಿರ್ಮಿಸಿಕೊಳ್ಳುವ ಮೂಲಕ ನೀರನ್ನು ಭೂಮಿಗೆ ಹಿಂಗಿಸಬೇಕೆಂದು ತಿಳಿಸಿದರು.

ನೈಸರ್ಗಿಕ ಕೃಷಿಯ ಅಳವಡಿಕೆಯಿಂದ ಮಣ್ಣು ಮತ್ತು ನೀರಿನ ಸಂರಕ್ಷಣೆ ಮಾಡುವುದು ಸಾವಯುವ ಹೊದಿಕೆ ಪದ್ಧತಿಯನ್ನು ಅಳವಡಿಸಿಕೊಂಡು ನೀರು ಹಾವಿಯಾಗುವುದನ್ನು ನಿಯಂತ್ರಿಸಬಹುದು ಈ ಮೇಲ್ಕಂಡ ಕ್ರಮಗಳನ್ನು ಅಳವಡಿಸಿಕೊಂಡು ಶುದ್ಧ ನೀರು ಮತ್ತು ಆರೋಗ್ಯಕರ ಆಹಾರವನ್ನು ಮುಂದಿನ ಪೀಳಿಗೆಗೆ ನೀಡಲು ಎಲ್ಲ ರೈತರಿಂದ ಪ್ರತಿ ಜ್ಞೆ ಮಾಡಿಸಲಾಯಿತು ರಾಜಶೇಖರ್ ಸಹಾಯಕ ಕೃಷಿ ಅಧಿಕಾರಿಗಳು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ವಿಜಯ ಮೂರ್ತಿ ಸೇರಿದಂತೆ ಹಲವರು ಹಾಜರಿದ್ದರು.