ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

India U19 squad: ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ U19 ತಂಡ ಪ್ರಕಟ

ಬಹುತೇಕ ಇಂಗ್ಲೆಂಡ್‌ ಪ್ರವಾಸದಲ್ಲಿ ಕಾಣಿಸಿಕೊಂಡಿದ್ದ ಆಟಗಾರರರು ಈ ಸರಣಿಯಲ್ಲಿ ಸ್ಥಾನ ಪಡೆದಿದ್ದಾರೆ. ರಾಹುಲ್ ಕುಮಾರ್, ಹರ್ವಂಶ್ ಸಿಂಗ್, ಆರ್.ಎಸ್. ಅಂಬರೀಶ್, ಕನಿಷ್ಕ್ ಚೌಹಾಣ್, ಹೆನಿಲ್ ಪಟೇಲ್, ಡಿ. ದೀಪೇಶ್, ಅನ್ಮೋಲ್ಜೀತ್ ಸಿಂಗ್ ಮತ್ತು ನಮನ್ ಪುಷ್ಪಕ್ ಮುಂತಾದವರು ತಂಡದಲ್ಲಿ ಸೇರಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ U19 ತಂಡ ಪ್ರಕಟ

Profile Abhilash BC Jul 31, 2025 9:48 AM

ನವದೆಹಲಿ: ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ U19 ತಂಡವನ್ನು(India U19 squad) ಬಿಸಿಸಿಐ ಪ್ರಕಟಿಸಿದ್ದು, ಆಯುಷ್ ಮ್ಹಾತ್ರೆ(Ayush Mhatre) ತಂಡದ ನಾಯಕನಾಗಿದ್ದಾರೆ. ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಮೂರು ಏಕದಿನ ಪಂದ್ಯಗಳು ಮತ್ತು ಎರಡು ಬಹು-ದಿನ ಪಂದ್ಯ ನಡೆಯಲಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಿದ 14 ವರ್ಷದ ವೈಭವ್ ಸೂರ್ಯವಂಶಿ(Vaibhav Suryavanshi) ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಮ್ಹಾತ್ರೆ ಇತ್ತೀಚಿನ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತದ U19 ತಂಡದ ನಾಯಕರಾಗಿದ್ದರು. ಯುವ ತಂಡವು ಯುವ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ಅನ್ನು 3-2 ಅಂತರದಿಂದ ಸೋಲಿಸಿತ್ತು. ಆದರೆ ಎರಡು ಪಂದ್ಯಗಳ ಟೆಸ್ಟ್ ಸರಣಿಯು ಡ್ರಾದಲ್ಲಿ ಕೊನೆಗೊಂಡಿತ್ತು.

ಭಾರತ U19 ಮತ್ತು ಆಸ್ಟ್ರೇಲಿಯಾ U19 ನಡುವಿನ ಸರಣಿ ಸೆಪ್ಟೆಂಬರ್ 2 ರಂದು ಆರಂಭವಾಗಲಿದೆ. ಮೂರು ಏಕದಿನ ಪಂದ್ಯಗಳು ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 3 ರವರೆಗೆ ನಡೆಯಲಿವೆ. ಎರಡನೇ ಬಹು-ದಿನ ಪಂದ್ಯ ಅಕ್ಟೋಬರ್ 7 ರಂದು ಆರಂಭವಾಗಲಿದೆ.

ಬಹುತೇಕ ಇಂಗ್ಲೆಂಡ್‌ ಪ್ರವಾಸದಲ್ಲಿ ಕಾಣಿಸಿಕೊಂಡಿದ್ದ ಆಟಗಾರರರು ಈ ಸರಣಿಯಲ್ಲಿ ಸ್ಥಾನ ಪಡೆದಿದ್ದಾರೆ. ರಾಹುಲ್ ಕುಮಾರ್, ಹರ್ವಂಶ್ ಸಿಂಗ್, ಆರ್.ಎಸ್. ಅಂಬರೀಶ್, ಕನಿಷ್ಕ್ ಚೌಹಾಣ್, ಹೆನಿಲ್ ಪಟೇಲ್, ಡಿ. ದೀಪೇಶ್, ಅನ್ಮೋಲ್ಜೀತ್ ಸಿಂಗ್ ಮತ್ತು ನಮನ್ ಪುಷ್ಪಕ್ ಮುಂತಾದವರು ತಂಡದಲ್ಲಿ ಸೇರಿದ್ದಾರೆ.

ಭಾರತ U19 ತಂಡ

ಆಯುಷ್ ಮ್ಹಾತ್ರೆ (ನಾಯಕ), ವಿಹಾನ್ ಮಲ್ಹೋತ್ರಾ (ಉಪ ನಾಯಕ), ವೈಭವ್ ಸೂರ್ಯವಂಶಿ, ವೇದಾಂತ್ ತ್ರಿವೇದಿ, ರಾಹುಲ್ ಕುಮಾರ್, ಅಭಿಜ್ಞಾನ್ ಕುಂದು (ಡಬ್ಲ್ಯುಕೆ), ಹರ್ವಂಶ್ ಸಿಂಗ್ (ವಿ.ಕೀ.), ಆರ್ ಎಸ್ ಅಂಬ್ರಿಶ್, ಕಾನಿಷ್ಕ್ ಚೌಹಾಣ್, ನಮನ್ ಪುಷ್ಪಕ್, ಹೆನಿಲ್, ಕಿಶನ್ ಕುಮಾರ್, ಅನ್ಮೋಲ್, ಕಿಶನ್ ಕುಮಾರ್, ಡಿ ದೀಪೇಶ್ ಪಟೇಲ್, ಡಿ ದೀಪೇಶ್ ಪಟೇಲ್ ಮೋಹನ್, ಅಮನ್ ಚೌಹಾಣ್.

ಇದನ್ನೂ ಓದಿ IND vs ENG: ಪಿಚ್‌ ಕ್ಯುರೇಟರ್‌-ಗಂಭೀರ್‌ ಜಗಳದ ಬಗ್ಗೆ ಬೆನ್‌ ಸ್ಟೋಕ್ಸ್‌ ಹೇಳಿದ್ದಿದು!