SIRA News: ಸರೋವರ್ ನಟಿಸಿರುವ ಮಾಂಕ್ ದಿ ಯಂಗ್ ಚಲನ ಚಿತ್ರವನ್ನು ನೋಡಿ ಪ್ರೋತ್ಸಾಹಿಸಿ; ಛಲಪತಿ
ತಾಲೂಕಿನವರೇ ಆದ ಬರಗೂರು ರಾಮಚಂದ್ರಪ್ಪ ಅವರು ಹಲವಾರು ಚಲನಚಿತ್ರ ಗಳನ್ನು ನಿರ್ದೇಶಿಸಿ ಯಶಸ್ಸು ಕಂಡಿದ್ದಾರೆ. ಅದೇ ರೀತಿ ಹಲವರು ಈಗಾಗಲೇ ಚಲನ ಚಿತ್ರಗಳಲ್ಲಿ ನಟಿಸಿ ದ್ದಾರೆ. ಆದ್ದರಿಂದ ಮತ್ತೋರ್ವ ನಾಯಕ ನಟ ಸರೋವರ್ ಅವರು ನಟಿಸಿರುವ ಮಾಂಕ್ ದಿ ಯಂಗ್ ಚಿತ್ರ ಯಶಸ್ಸು ಕಾಣಲಿ ಎಂದರು.

ಶಿರಾ ನಗರದ ಭಾಗ್ಯಲಕ್ಷ್ಮೀ ಚಿತ್ರಮಂದಿರದಲ್ಲಿ ಮಾಂಕ್ ದಿ ಯಂಗ್ ಚಲನ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ನಾಯಕ ನಟ ಸರೋವರ್ ಸೇರಿದಂತೆ ಹಲವರು ಹಾಜರಿದ್ದರು.

ಶಿರಾ: ತಾಲೂಕಿನ ಕುರುಬರರಾಮನಹಳ್ಳಿ ಗ್ರಾಮದ ಯುವ ನಾಯಕ ಸರೋವರ್ ಅವರು ಹೊಸ ತಂಡ ಸೇರಿ ನಿರ್ಮಿಸಿರುವ, ವಿಭಿನ್ನ ಕಥೆ ಹೊಂದಿರುವ ಮಾಂಕ್ ದಿ ಯಂಗ್ ಚಿತ್ರ ಈ ವಾರ ಫೆ.28ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದ್ದು, ತಾಲೂ ಕಿನ ಜನತೆ ಹಾಗೂ ಜಿಲ್ಲೆಯ ಜನತೆ ಚಿತ್ರವನ್ನು ವೀಕ್ಷಿಸಿ ಗ್ರಾಮೀಣ ಪ್ರತಿಭೆಯನ್ನು ಪ್ರೋತ್ಸಾಹಿಸಿ ಎಂದು ರಂಗಭೂಮಿ ಕಲಾವಿದರ ಸಂಘದ ತಾಲೂಕು ಅಧ್ಯಕ್ಷ ಛಲಪತಿ ಹೇಳಿದರು. ನಗರದ ಭಾಗ್ಯಲಕ್ಷ್ಮೀ ಚಿತ್ರಮಂದಿರದಲ್ಲಿ ಚಿತ್ರತಂಡ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿ ಚಿತ್ರಕ್ಕೆ ಶುಭಕೋರಿ ಮಾತನಾಡಿದರು. ಶಿರಾ ತಾಲೂಕಿನಿಂದ ಹಲವಾರು ಪ್ರತಿಭೆಗಳು ಕಲೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಇದನ್ನೂ ಓದಿ: Tumkur (Gubbi)News: ಮಕ್ಕಳಲ್ಲಿನ ಸುಪ್ತ ಪ್ರತಿಭೆ ಅನಾವರಣಕ್ಕೆ ಶಾಲೆಯೇ ವೇದಿಕೆ : ಮುಖ್ಯ ಶಿಕ್ಷಕ ಬಿ.ನರಸಿಂಹಮೂರ್ತಿ
ತಾಲೂಕಿನವರೇ ಆದ ಬರಗೂರು ರಾಮಚಂದ್ರಪ್ಪ ಅವರು ಹಲವಾರು ಚಲನಚಿತ್ರ ಗಳನ್ನು ನಿರ್ದೇಶಿಸಿ ಯಶಸ್ಸು ಕಂಡಿದ್ದಾರೆ. ಅದೇ ರೀತಿ ಹಲವರು ಈಗಾಗಲೇ ಚಲನ ಚಿತ್ರಗಳಲ್ಲಿ ನಟಿಸಿದ್ದಾರೆ. ಆದ್ದರಿಂದ ಮತ್ತೋರ್ವ ನಾಯಕ ನಟ ಸರೋವರ್ ಅವರು ನಟಿಸಿರುವ ಮಾಂಕ್ ದಿ ಯಂಗ್ ಚಿತ್ರ ಯಶಸ್ಸು ಕಾಣಲಿ ಎಂದರು.
*
ಮಾಂಕ್ ದಿ ಯಂಗ್ ಚಲನ ಚಿತ್ರದ ನಾಯಕ ನಟ ಸರೋವರ್ ಅವರು ಮಾತನಾಡಿ ಶಿರಾ ತಾಲೂಕಿನ ಕುರುಬರರಾಮನಹಳ್ಳಿ ಗ್ರಾಮದಲ್ಲಿ ಹುಟ್ಟಿ ಬೆಳೆದ ನಾನು ನನ್ನಲ್ಲಿರುವ ಕಲೆಯಿಂದ ಏನನ್ನಾದರೂ ಸಾಧಿಸಬೇಕೆಂದು ಚಿತ್ರರಂಗಕ್ಕೆ ಪ್ರವೇಶಿಸಿದ್ದೇನೆ. ಹಲವಾರು ದಾರವಾಹಿಗಳಲ್ಲಿ ನಟಿಸಿದ್ದೇನೆ, ಕಿರು ಚಿತ್ರಗಳನ್ನು ತಯಾರಿಸಿದ್ದೇನೆ. ಈಗ ವಿಭಿನ್ನ ಕಥೆ ಯುಳ್ಳ ಮಾಂಕ್ ದಿ ಯಂಗ್ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದೇನೆ. ಈ ಚಿತ್ರದ ನಾಯಕಿ ಸೌಂದರ್ಯ ಗೌಡ. ತೆಲುಗು ಹಾಗೂ ತಮಿಳಿನ ಪ್ರಸಿದ್ದ ನಟ ಬಬ್ಲೂ ಪೃಥ್ವಿರಾಜ್ ಅವರು ಈ ಚಿತ್ರದ ವಿಶೇಷಪಾತ್ರದಲ್ಲಿ ಅಭಿನಯಿಸಿದ್ದು, ಉಷಾ ಭಂಡಾರಿ, ಪ್ರಣಯ ಮೂರ್ತಿ ಮುಂತಾದವರು ತಾರಾಬ¼ಗದಲ್ಲಿದ್ದಾರೆ. ಕೆ.ಆರ್.ಜಿ ಸ್ಟುಡಿಯೋಸ್ ಅವರು ಚಲನಚಿತ್ರ ವನ್ನು ವಿತರಣೆ ಮಾಡುತ್ತಿದ್ದಾರೆ. ಈಗಾಗಲೇ ಆನಂದ್ ಆಡಿಯೋ ಮೂಲಕ ಬಿಡುಗಡೆ ಯಾಗಿರುವ ಚಿತ್ರದ ಹಾಡುಗಳು, ಟೀಸರ್ ಹಾಗೂ ಟ್ರೇಲರ್ ಜನರ ಮನ ತಲುಪಿದೆ. ಸ್ವಾಮಿನಾಥನ್ ರಾಮಕೃಷ್ಣ ಹಾಗೂ ಸುಪ್ರೀತ್ ಫಾಲ್ಗುಣ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಈವರೆಗೂ ಕನ್ನಡದಲ್ಲಿ ಅಪರೂಪ ಎನ್ನಬಹುದಾದ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಮಾಸ್ಚಿತ್ ಸೂರ್ಯ ನಿರ್ದೇಶಿಸಿದ್ದಾರೆ. ನಿವೃತ್ತ ಆರ್ಮಿ ಆಫೀಸರ್ ಕರ್ನಲ್ ರಾಜೇಂದ್ರನ್, ವಿನಯ್ ಬಾಬು ರೆಡ್ಡಿ ಶೆಟ್ಟಿಹಳ್ಳಿ, ಗೋಪಿಚಂದ್, ಲಾಲ್ ಚಂದ್ ಖತಾರ್ ಮತ್ತು ಸರೋವರ್ ಐದು ಜನ ಸೇರಿ ಈ ಚಿತ್ರವನ್ನು ನಿರ್ಮಿಸಿ ದ್ದಾರೆ. ನಿರ್ಮಾಪಕರೆಲ್ಲಾ ಈ ಚಿತ್ರದಲ್ಲಿ ನಟನೆಯನ್ನೂ ಮಾಡಿರುವುದು ವಿಶೇಷ. ಕಾರ್ತಿಕ್ ಶರ್ಮ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಕ್ಲೆöÊಮಾಕ್ಸ್ ಛಾಯಾಗ್ರಹಣ ದೀಪಕ್ ಹಾಗೂ ಧನುಷ್ ಬೆದ್ರೆ ಅವರ ಸಂಕಲನ ಹರ್ಷವರ್ಧನ್ ಎ ಎಲ್ ಅವರ ನೃತ್ಯ ನಿರ್ದೇಶನ ಮಾಡಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ವೈದ್ಯರಾದ ಡಾ.ರಾಮಕೃಷ್ಣ, ಎಂ.ಆರ್.ಎಫ್. ಶೋ ರೂಂ ಮಾಲೀಕರಾದ ಅಶೋಕ್ ರಾಜ್, ಮೈಸ್ ಕಂಪ್ಯೂಟರ್ ಎಜುಕೇಷನ್ ಸೆಂಟರ್‌ನ ಮುಖ್ಯಸ್ಥ ಲೋಕೇಶ್, ಮಾಜಿ ನಗರಸಭೆ ಸದಸ್ಯ ಸಂತೋಷ್, ಯುವ ಕಾಂಗ್ರೆಸ್ ನಗರ ಅಧ್ಯಕ್ಷ ಅಂಜನ್‌ಕುಮಾರ್, ಗ್ರಾಮಾಂತರ ಅಧ್ಯಕ್ಷ ಹೇಮಂತ್ ಗೌಡ, ಶಿಕ್ಷಕರಾದ ಮರಡಿ ರಂಗಪ್ಪ, ಜೆಡಿಎಸ್ ಮುಖಂಡ ಸುನಿಲ್ ಕುಮಾರ್, ಶ್ರೀಧರ್, ತಿಪ್ಪಣ್ಣ, ವಕೀಲ ಬಿ.ಡಿ.ಗೌಡ, ಅಜ್ಗರ್ ಪಾಷ, ಚಂದ್ರಶೇಖರ್ ಸೇರಿದಂತೆ ಹಲವರು ಹಾಜರಿದ್ದರು.