ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತುಮಕೂರು ದಸರಾದಲ್ಲಿ ಮನಸೂರೆಗೊಂಡ ಕಾಡುಗೊಲ್ಲರ ವಿಶಿಷ್ಟ ‘ಅಲಗು ಕುಣಿತʼ ಪ್ರದರ್ಶನ

Tumkur News: ತುಮಕೂರು ದಸರಾ ಸಾಂಸ್ಕೃತಿಕ ಉತ್ಸವದಲ್ಲಿ ಕಾಡುಗೊಲ್ಲ ಬುಡಕಟ್ಟು ಸಂಸ್ಕೃತಿಯ ಅನನ್ಯ ಕಲೆಯಾದ ‘ಅಲಗು ಕುಣಿತʼ ಪ್ರದರ್ಶನವು ಪ್ರೇಕ್ಷಕರ ಮನಸೂರೆಗೊಂಡಿತು. ಮಧುಗಿರಿ ತಾಲೂಕಿನ ಬಸವನಹಳ್ಳಿ ಗೊಲ್ಲರಹಟ್ಟಿ ಗ್ರಾಮದ ಪಿಡಿಓ ಬೋರಣ್ಣನವರ ತಂಡದ ಜಾನಪದ ಕಲಾವಿದರು ಈ ಪ್ರದರ್ಶನ ನೀಡಿದ್ದಾರೆ.

ತುಮಕೂರು, ಅ.12: ಅದ್ಧೂರಿಯಾಗಿ ಆರಂಭಗೊಂಡ ತುಮಕೂರು ದಸರಾ (Tumkur Dasara) ಸಾಂಸ್ಕೃತಿಕ ಉತ್ಸವದಲ್ಲಿ ಕಾಡುಗೊಲ್ಲ ಬುಡಕಟ್ಟು ಸಂಸ್ಕೃತಿಯ ಅನನ್ಯ ಕಲೆಯಾದ ‘ಅಲಗು ಕುಣಿತʼ ಪ್ರದರ್ಶನವು ಪ್ರೇಕ್ಷಕರ ಮನಸೂರೆಗೊಂಡಿತು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಹಾಗೂ ಪ್ರಸಿದ್ಧ ಜಾನಪದ ಕಲಾವಿದ ಮೋಹನ್ ಕುಮಾರ್ ಅವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಈ ಸಾಂಸ್ಕೃತಿಕ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಮಧುಗಿರಿ ತಾಲೂಕಿನ ಬಸವನಹಳ್ಳಿ ಗೊಲ್ಲರಹಟ್ಟಿ ಗ್ರಾಮದ ಪಿಡಿಓ ಬೋರಣ್ಣನವರ ತಂಡದ ಜಾನಪದ ಕಲಾವಿದರು ಈ ಪ್ರದರ್ಶನವನ್ನು ನೀಡಿ ಗ್ರಾಮೀಣ ಸೊಗಡನ್ನು ನಗರದ ವೇದಿಕೆಗೆ ತಂದರು.

ಸಾಂಸ್ಕೃತಿಕ ಹಿನ್ನೆಲೆ ಹಾಗೂ ವಿಶೇಷತೆಗಳು

ಕಾಡುಗೊಲ್ಲ ಬುಡಕಟ್ಟು ಸಮುದಾಯದ ಅತ್ಯಂತ ಪ್ರಾಚೀನ ಕಲೆಗಳಲ್ಲಿ ಒಂದಾಗಿರುವ ‘ಅಲಗು ಕುಣಿತʼ, ಈ ಸಮುದಾಯದರಾದ್ಯದೇವತೆಯಾದ ಜುಂಜಪ್ಪನ ಹಾಗೂ ಇತರೆ ಪುರಾತನ ದೈವಗಳ ಆರಾಧನೆ ಮತ್ತು ಇತಿಹಾಸದೊಂದಿಗೆ ಗಾಢವಾದ ನಂಟನ್ನು ಹೊಂದಿದೆ. ಸಮುದಾಯದ ವೀರಾವೇಶ, ಭಕ್ತಿ ಹಾಗೂ ಸಾಂಸ್ಕೃತಿಕ ಹೆಮ್ಮೆಯನ್ನು ಈ ಕಲೆಯು ಬಿಂಬಿಸುತ್ತದೆ.

ದಸರಾ ವೇದಿಕೆಯಲ್ಲಿ ಅಲಗು ಕುಣಿತದ ಜತೆಗೆ ಸಾಂಪ್ರದಾಯಿಕವಾದ ‘ಮನೆವು ಕುಣಿತʼ, ‘ಕೋಲಾಟ’ ಹಾಗೂ ‘ದೇವರು ಕುಣಿತʼ ಗಳು ಸಹ ಪ್ರದರ್ಶನಗೊಂಡು ದಸರಾ ಸಂಭ್ರಮವನ್ನು ಇಮ್ಮಡಿಸಿದವು. ಬುಡಕಟ್ಟು ಶೈಲಿಯ ಹೆಜ್ಜೆಗಳು ಮತ್ತು ವಿಶಿಷ್ಟ ವಾದ್ಯಗಳ ನಿನಾದ ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿತು. ತುಮಕೂರು ದಸರಾದಲ್ಲಿ ಈ ಕಾರ್ಯಕ್ರಮವು ಸಾರ್ವಜನಿಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.

ಅಲಗು ಕುಣಿತವು ಕೇವಲ ನೃತ್ಯವಲ್ಲ; ಇದು ಕಾಡುಗೊಲ್ಲ ಸಮುದಾಯದ ಶೌರ್ಯ, ಸಾಹಸ ಹಾಗೂ ದೈವಿಕ ಭಕ್ತಿಯ ಸಂಕೇತ. ಕಾಡುಗೊಲ್ಲರ ಆರಾಧ್ಯ ದೈವ ಶ್ರೀ ಜುಂಜಪ್ಪ ಹಾಗೂ ಕೃಷ್ಣನ ಹಿನ್ನೆಲೆಯನ್ನು ಸ್ಮರಿಸುತ್ತಾ, ಸಮುದಾಯದ ವೀರಪುರುಷರ ಸಾಹಸಗಾಥೆಗಳನ್ನು ಬಿಂಬಿಸುವ ಹಾಡುಗಳಿಗೆ ತಕ್ಕಂತೆ ಈ ನೃತ್ಯವನ್ನು ಪ್ರದರ್ಶಿಸಲಾಗುತ್ತದೆ.

ಜಾಗತಿಕ ವಿಜ್ಞಾನಿಗಳ ಪಟ್ಟಿ: ತುಮಕೂರು ವಿವಿಯ ಇಬ್ಬರು ಪ್ರಾಧ್ಯಾಪಕರು, ಇಬ್ಬರು ಸಂಶೋಧನಾರ್ಥಿಗಳಿಗೆ ಸ್ಥಾನ

ನೃತ್ಯದ ಸಮಯದಲ್ಲಿ ಕಲಾವಿದರು ಮೈಮರೆತು ಮೈದುಂಬಿ ಕುಣಿಯುವ ರೀತಿ ಮತ್ತು ಪ್ರದರ್ಶಿಸುವ ಕಲಾಕೌಶಲ್ಯ ರೋಮಾಂಚನಕಾರಿಯಿರುತ್ತದೆ.