ತಿಪಟೂರು, ಏ.24: 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ (Karnataka SSLC Result) ಗುರುವಾರ ಪ್ರಕಟಗೊಂಡಿದ್ದು, ತಿಪಟೂರು ತಾಲೂಕು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ. ನಳಂದ ಶಾಲೆಯು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಮಣಿ ಮಾತನಾಡಿದ್ದು, 2025-26ನೇ ಸಾಲಿನಲ್ಲಿ ತಾಲೂಕಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-1ರ ಫಲಿತಾಂಶದಲ್ಲಿ ತಾಲೂಕಿನಲ್ಲಿ ಒಟ್ಟು 2251 ಮಕ್ಕಳು ಪರೀಕ್ಷೆಯನ್ನು ಬರೆದಿದ್ದು 2190 ವಿದ್ಯಾರ್ಥಿಗಳು ಉತ್ತಿರ್ಣರಾಗಿರುತ್ತಾರೆ. 61 ವಿದ್ಯಾರ್ಥಿಗಳು ಅನುತ್ತಿರ್ಣರಾಗಿದ್ದಾರೆ. ತಾಲೂಕಿನ ಒಟ್ಟು ಫಲಿತಾಂಶ 97.29% ಬಂದಿದ್ದು ಈ ಬಾರಿ ನಮ್ಮ ತಾಲೂಕು ತುಮಕೂರು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ ಎಂದು ತಿಳಿಸಿದ್ದಾರೆ.
ಈ ಬಾರಿಯ ಫಲಿತಾಂಶದಲ್ಲಿ ನಮ್ಮ ತಾಲೂಕಿನಲ್ಲಿ 1107 ಬಾಲಕಿಯರು ಪರೀಕ್ಷೆಯನ್ನು ಬರೆದಿದ್ದು 1083 ಬಾಲಕಿಯರು ಉತ್ತಿರ್ಣರಾಗಿರುತ್ತಾರೆ. ಬಾಲಕಿಯರ ಫಲಿತಾಂಶ 97.83%, 1144 ಬಾಲಕರು ಪರೀಕ್ಷೆಯನ್ನು ಬರೆದಿದ್ದು 1107 ಬಾಲಕರು ಉತ್ತಿರ್ಣರಾಗಿರುತ್ತಾರೆ. ಬಾಲಕರ ಫಲಿತಾಂಶ 96.77%. ತಾಲೂಕಿನ ಸರ್ಕಾರಿ ಶಾಲೆಗಳ ಫಲಿತಾಂಶ 96.56%. ಅನುದಾನಿತ ಶಾಲೆಗಳ ಫಲಿತಾಂಶ 96.90%. ಅನುದಾನರಹಿತ ಶಾಲೆಗಳ ಫಲಿತಾಂಶ 98.96% ಪಡೆದಿದೆ. ನಮ್ಮ ತಾಲೂಕಿನಲ್ಲಿ 600ಕ್ಕಿಂತ ಹೆಚ್ಚು ಅಂಕಗಳನ್ನು 59 ವಿದ್ಯಾರ್ಥಿಗಳು ಪಡೆದಿದ್ದಾರೆ.
ತಾಲೂಕಿನ ನಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಲ್ಲಿ ಪ್ರಥಮ ಸ್ಥಾನವನ್ನು ನಳಂದ ಪ್ರೌಢಶಾಲೆ ವಿದ್ಯಾರ್ಥಿ ಮಣಿಕಂಠ ಕೆ. 621 ಅಂಕಗಳನ್ನು ಪಡೆದಿದ್ದಾರೆ. ದ್ವಿತೀಯ ಸ್ಥಾನವನ್ನು ಶ್ರೀಮದ್ ರಂಭಪುರಿ ಆಂಗ್ಲ ಪ್ರೌಢಶಾಲೆ ವಿದ್ಯಾರ್ಥಿ ವಿಸ್ಮಯ ಜಿ.ಆರ್. 620 ಅಂಕಗಳನ್ನು ಪಡೆದಿದ್ದಾರೆ. ತೃತೀಯ ಸ್ಥಾನವನ್ನು ಶ್ರೀಮದ್ ರಂಭಪುರಿ ಆಂಗ್ಲ ಪ್ರೌಢಶಾಲೆ ವಿದ್ಯಾರ್ಥಿ ಪ್ರಜ್ವಲ್ ಎಂ.ಪಿ. 619 ಅಂಕಗಳನ್ನು ಪಡೆದಿದ್ದಾರೆ ಎಂದು ಹೇಳಿದರು.
ತಾಲೂಕಿನಲ್ಲಿ ಒಟ್ಟು ಗ್ರೇಡ್‌ವಾರು ಫಲಿತಾಂಶದಲ್ಲಿ A+ ಶ್ರೇಣಿಯನ್ನು 264 ವಿದ್ಯಾರ್ಥಿಗಳು ಪಡೆದಿದ್ದಾರೆ. A ಶ್ರೇಣಿಯನ್ನು 344 ವಿದ್ಯಾರ್ಥಿಗಳು ಪಡೆದಿದ್ದಾರೆ. B+ ಶ್ರೇಣಿಯನ್ನು 475 ವಿದ್ಯಾರ್ಥಿಗಳು ಪಡೆದಿದ್ದಾರೆ. B ಶ್ರೇಣಿಯನ್ನು 419 ವಿದ್ಯಾರ್ಥಿಗಳು ಪಡೆದಿದ್ದಾರೆ. C+ ಶ್ರೇಣಿಯನ್ನು 397 ವಿದ್ಯಾರ್ಥಿಗಳು ಪಡೆದಿದ್ದಾರೆ. C ಶ್ರೇಣಿಯನ್ನು 291 ವಿದ್ಯಾರ್ಥಿಗಳು ಪಡೆದಿದ್ದಾರೆ. ತಾಲೂಕಿನ 50 ಶಾಲೆಗಳಲ್ಲಿ 31 ಶಾಲೆಗಳು ಶೇಕಡಾ 100 ರಷ್ಟು ಫಲಿತಾಂಶ ಪಡೆದಿದೆ ಎಂದರು.
ತಾಲೂಕಿಗೆ ಪ್ರಥಮ ಸ್ಥಾನ ಪಡೆದ ನಳಂದ ಶಾಲೆಯ ಆಡಳಿತ ಅಧಿಕಾರಿ ರೇಖಾ ಮಾತನಾಡಿ, ನಮ್ಮ ಶಾಲೆಯ ವಿದ್ಯಾರ್ಥಿ ಮಣಿಕಂಠ ಕೆ. ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದು 625 ಅಂಕಗಳಿಗೆ 621 ಅಂಕಗಳನ್ನು ಪಡೆದಿರುವುದು ನಮ್ಮೆಲ್ಲರ ಹೆಮ್ಮೆಯ ವಿಚಾರವಾಗಿದ್ದು, ನಮ್ಮ ಶಾಲೆಯು ನೂರರಷ್ಟು ಫಲಿತಾಂಶ ಪಡೆದಿದೆ ಎಂದು ತಿಳಿಸಿದರು.