ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Koratagere News: ಪತ್ರಕರ್ತರ ಸಮಸ್ಯೆಗಳನ್ನು ಸರ್ಕಾರ ಆಲಿಸಲಿ: ವೀರಭದ್ರ ಶಿವಾಚಾರ್ಯ ಸ್ವಾಮೀಜಿ

ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಸಸ್ಯ ಸಂಜೀವಿನಿ ಕ್ಷೇತ್ರ ಸಿದ್ದರಬೆಟ್ಟದ ಮಠದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತರು ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಆಯ್ಕೆಯಾದ ಪತ್ರಕರ್ತರಿಗೆ ಗೌರವಿಸಿ ಸನ್ಮಾನಿಸಲಾಯಿತು.

ಕೊರಟಗೆರೆ ತಾಲೂಕಿನ ಸಿದ್ದರಬೆಟ್ಟದ ಮಠದಲ್ಲಿ ಪತ್ರಕರ್ತರನ್ನು ಸನ್ಮಾನಿಸಲಾಯಿತು.

ಕೊರಟಗೆರೆ, ನ.22: ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಈ ಮೂರು ಅಂಗಗಳಿಗೆ ವಿಶೇಷ ಸ್ಥಾನಮಾನವನ್ನು ಕೊಟ್ಟಿರುವ ಸರ್ಕಾರ ಹೆಸರಿಗಷ್ಟೇ ಸೀಮಿತವಾದ ಸರ್ಕಾರದ 4ನೇ ಅಂಗ ಪತ್ರಿಕಾರಂಗಕ್ಕೆ ಯಾವುದೇ ಸವಲತ್ತುಗಳನ್ನು ನೀಡದೇ ಇರುವುದರಿಂದ ಪತ್ರಕರ್ತರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಕೂಡಲೇ ಸರ್ಕಾರ ಇತ್ತ ಗಮನ ಹರಿಸಿ ಗ್ರಾಮೀಣ ಭಾಗದ ಪತ್ರಕರ್ತರಿಗೆ ಅಗತ್ಯ ಸೌಕರ್ಯಗಳನ್ನು ನೀಡುವಂತಾಗಲಿ ಎಂದು ಸಿದ್ದರಬೆಟ್ಟ ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ತಾಲೂಕಿನ (Koratagere News) ಸಸ್ಯ ಸಂಜೀವಿನಿ ಕ್ಷೇತ್ರ ಸಿದ್ದರಬೆಟ್ಟದ ಮಠದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತರು ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಆಯ್ಕೆಯಾದ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀಗಳು ಮಾತನಾಡಿದರು.

ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಕೆ.ವಿ. ಪುರುಷೋತ್ತಮ್ ಮಾತನಾಡಿ, ರಾಜ್ಯದ ಮೂರೂವರೆ ಕೋಟಿ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಆಧಾರ್ ಕಾರ್ಡ್ ತೋರಿಸಿ ಉಚಿತವಾಗಿ ಪಯಣ ಮಾಡಬಹುದಾಗಿದೆ ಆದರೆ ರಾಜ್ಯದಲ್ಲಿರುವ 8 ರಿಂದ 9 ಸಾವಿರ ಪತ್ರಕರ್ತರಿಗೆ ನೂರೆಂಟು ರೂಲ್ಸ್‌ಗಳನ್ನು ಹಾಕಿದ್ದಾರೆ. ಜಿಲ್ಲಾ ಭಾಗದ ಪತ್ರಕರ್ತರಿಗೆ ಸಣ್ಣ ಪುಟ್ಟ ಸಹಾಯ ಆಗುತ್ತಿದೆ. ಆದರೆ ಸರ್ಕಾರದ ವತಿಯಿಂದ ಗ್ರಾಮೀಣ ಭಾಗದ ಪತ್ರಕರ್ತರಿಗೆ ಯಾವುದೇ ಒಂದು ಸಣ್ಣ ಪ್ರಯೋಜನವು ಆಗುತ್ತಿಲ್ಲ ಎಂದು ದೂರಿದರು.

ಇದೇ ವೇಳೆ ಕೆ.ವಿ. ಪುರುಷೋತ್ತಮ್, ಯಶಸ್ ಹಾಗೂ ರಂಗಧಾಮಯ್ಯ, ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದ ಸತೀಶ್, ಬಾಬು ನಾಯಕ್, ಸಾಹಿತಿ ಹನುಮಂತರಾಜ್ ಅವರನ್ನು ಸನ್ಮಾನಿಸಲಾಯಿತು.

ಇದನ್ನೂ ಓದಿ | 3 ದಿನಗಳ 'ಭಜ ಮನ' ಪೂರ್ವ-ಸಂಗೀತ ಕಾರ್ಯಾಗಾರಕ್ಕೆ ತೆರೆ

ಈ ಸಂದರ್ಭದಲ್ಲಿ ಕೊರಟಗೆರೆ ತಾಲೂಕು ಪತ್ರಕರ್ತರ ಸಂಘದ ಹಿರಿಯರಾದ ಪದ್ಮರಾಜ್, ಪದ್ಮನಾಭ, ಚಿದಂಬರ್, ಶಿವಾನಂದ್, ನಾಗರಾಜು, ವಿ.ಕೆ. ಮೂರ್ತಿ, ನವೀನ್, ಮಂಜುನಾಥ್, ಮಂಜು ಸ್ವಾಮಿ, ವಿಜಯಶಂಕರ್, ಲಕ್ಷ್ಮೀಶ್, ಲಕ್ಷ್ಮಿಕಾಂತ್, ಹರೀಶ್ ಬಾಬು, ತಿಮ್ಮಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು