ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕಾನೂನುಬಾಹಿರವಾಗಿ ಮಾದರ ಮಹಾಸಭಾ ಕಾರ್ಯದರ್ಶಿ‌ ಸ್ಥಾನದಿಂದ ವಜಾ: ಡಾ. ಬಾಣದರಂಗಯ್ಯ ಆರೋಪ

Madhugiri News: ಕಾನೂನು ನಿಯಮ ಗಾಳಿಗೆ ತೂರಿ ಸಂಘದ‌ ಬೈಲಾ‌ ನಿಯಮಗಳಿಗೆ ವಿರುದ್ದವಾಗಿ ಯಾವುದೇ ಸೂಚನೆ‌ ನೀಡದೆ,‌ ಗಮನಕ್ಕೂ ಸಹ ತಾರದೆ ಏಕಾಏಕಿ ನನ್ನನ್ನು ಮಾದರ ಮಹಾಸಭಾ ಕಾರ್ಯದರ್ಶಿ‌ ಸ್ಥಾನದಿಂದ‌ ತೆಗೆದು ಹಾಕಲಾಗಿದೆ ಎಂದು‌ ಮಾಜಿ ಗ್ರಾ.ಪಂ.ಅಧ್ಯಕ್ಷ, ವಕೀಲ ಡಾ. ಬಾಣದರಂಗಯ್ಯ ಆರೋಪಿಸಿದ್ದಾರೆ.

ಮಧುಗಿರಿಯಲ್ಲಿ ಆದಿಜಾಂಬವ ಸಮುದಾಯದ ಮುಖಂಡರು.

ಮಧುಗಿರಿ, ಜು.3: ಕಾನೂನು ನಿಯಮ ಗಾಳಿಗೆ ತೂರಿ ಸಂಘದ‌ ಬೈಲಾ‌ ನಿಯಮಗಳಿಗೆ ವಿರುದ್ಧವಾಗಿ ಯಾವುದೇ ಸೂಚನೆ‌ ನೀಡದೆ,‌ ಗಮನಕ್ಕೂ ತಾರದೆ ಏಕಾಏಕಿ ನನ್ನನ್ನು ಮಾದರ ಮಹಾಸಭಾ ಕಾರ್ಯದರ್ಶಿ‌ ಸ್ಥಾನದಿಂದ‌ ತೆಗೆದು ಹಾಕಲಾಗಿದೆ ಎಂದು‌ ಮಾಜಿ ಗ್ರಾ.ಪಂ.ಅಧ್ಯಕ್ಷ, ವಕೀಲ ಡಾ. ಬಾಣದರಂಗಯ್ಯ ಆರೋಪಿಸಿದ್ದಾರೆ. ಪಟ್ಟಣದ (Madhugiri News) ಅಂಬೇಡ್ಕರ್ ವೃತ್ತದಲ್ಲಿರುವ‌ ಮಾತಂಗ‌ ಮಹರ್ಷಿ ಪತ್ತಿನ ಸಹಕಾರ ಸಂಘದ ಕಛೇರಿ ‌ಆವರಣದಲ್ಲಿ ಆದಿಜಾಂಬವ ಸಮುದಾಯದ ಮುಖಂಡರಿಂದ‌‌ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ.

ಯಾವುದೇ ಸೂಚನೆ ಇಲ್ಲದೆ ಮತ್ತು ನನ್ನ ಗಮನಕ್ಕೆ ತಾರದೆ ಮಾದರ ಮಹಾಸಭಾದ ತಾಲೂಕು ಕಾರ್ಯದರ್ಶಿ ಸ್ಥಾನದಿಂದ ನನ್ನನ್ನು ತೆಗೆದುಹಾಕಲಾಗಿದೆ ಎಂದು ದೂರಿದ ಅವರು, ಸಂಘದ ಬೈಲಾ ನಿಯಮದ ಪ್ರಕಾರ ಮೂರು ಸಭೆಗಳಿಗೆ ಹಾಜರಾಗದಿದ್ದರೆ ಮಾತ್ರ ತೆಗೆದು ಹಾಕಬೇಕು ಎಂದಿದೆ. ಆದರೆ ಇದುವರೆಗೂ ಒಂದು ಸಭೆಯನ್ನೂ ನಡೆಸಿಲ್ಲ. ನಾನು ತಾಲೂಕಿನಲ್ಲಿ ಮಾದರ ಮಹಾಸಭಾಕ್ಕೆ ಹೆಚ್ಚು ಸದಸ್ಯತ್ವ ಮಾಡಿಸಿದ್ದರೂ ನನ್ನನ್ನು ಕಾರ್ಯದರ್ಶಿ ಸ್ಥಾನದಿಂದ ತೆಗೆಯಲಾಗಿದೆ ಎಂದು ಆರೋಪಿಸಿದರು.

ನಾನು ಅಧ್ಯಕ್ಷ ಗೋಪಾಲಯ್ಯನವರ ಆಶ್ರಮದ ನೌಕರನಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ನನ್ನ ವಜಾ ಮಾಡಿರುವುದು ಮಹಾಸಭಾದ ಬೈಲಾಕ್ಕೆ ವಿರುದ್ಧವಾಗಿದೆ. ಅವಶ್ಯಕತೆ ಬಿದ್ದರೆ ಕಾನೂನು ಹೋರಾಟ ನಡೆಸುತ್ತೇನೆ, ಉದ್ದೇಶಪೂರ್ವಕವಾಗಿ ನನ್ನನ್ನು ಕಾರ್ಯದರ್ಶಿ ಸ್ಥಾನದಿಂದ ವಜಾ ಗೊಳಿಸಲಾಗಿದೆ ಇದರ ಹಿಂದೆ ಕೆಲವರು ಪಿತೂರಿ ನಡೆಸಿ ಸಮುದಾಯದ‌ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಹೇಳಿದರು.

ಸಮುದಾಯದ ಹಿರಿಯ ಮುಖಂಡ ಹಾಗೂ ಮಾಜಿ ತಾ.ಪಂ. ಸದಸ್ಯ ಸಿದ್ದಗಂಗಪ್ಪ ಮಾತನಾಡಿ, ಅಧ್ಯಕ್ಷ ಗೋಪಾಲಯ್ಯ ವಿನಾಕಾರಣ ಜನಾಂಗದ ಪ್ರಮುಖರು ಹಾಗೂ ವಿದ್ಯಾವಂತ ಯುವಕರ ಮೇಲೆ ದ್ವೇಷ ರಾಜಕಾರಣ ನಡೆಸುತ್ತಾ ದೌರ್ಜನ್ಯ ನಡೆಸುತ್ತಿದ್ದಾರೆ. ಇವರು ಅಧಿಕಾರಿಯಾಗಿದ್ದ ಸಂದರ್ಭದಲ್ಲಿ ಜನಾಂಗದ‌ ಕಡೆ ತಿರುಗಿಯೂ ನೋಡದ ವ್ಯಕ್ತಿ‌ ಈಗ ನಿವೃತ್ತರಾದ ಮೇಲೆ ಸಮುದಾಯದ ಏಳ್ಗೆ ಬಯಸುವುದು ಬಿಟ್ಟು ಅವರಿವರ ಕಾಲೆಳೆದು ಎಲ್ಲಾ ಅಧಿಕಾರವು ನನಗೆ ಬೇಕು ಎನ್ನುತ್ತಾ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಹಿನ್ನಡೆ ಮಾಡುತ್ತಾ ಜನಾಂಗದ ಮುಖಂಡರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮಾತಂಗ ಮಹರ್ಷಿ ಸಂಘದ ಅಧ್ಯಕ್ಷ ಸಣ್ಣ ರಾಮಯ್ಯ ಮಾತನಾಡಿ, ಗೋಪಾಲಯ್ಯ ಅವರನ್ನು ಅಧ್ಯಕ್ಷರೆಂದು ಸಮುದಾಯದ ಯಾರೂ ಒಪ್ಪುವುದಿಲ್ಲ. ಅವರು ಅಧ್ಯಕ್ಷರಾದ ನಂತರ ಸಮುದಾಯದಲ್ಲಿ ಕಿತ್ತಾಟ ಜಾಸ್ತಿಯಾಗಿದೆ. ಸಮುದಾಯವನ್ನು ಒಗ್ಗೂಡಿಸಿ ಕರೆದೊಯ್ಯುವ ಮನಸ್ಥಿತಿ ಇವರಲ್ಲಿ ಕಂಡು ಬರುತ್ತಿಲ್ಲ ಎಂದು ದೂರಿದರು. ‌

Gruha Jyothi Scheme: ಗೃಹ ಜ್ಯೋತಿ ಪರಿಶೀಲನೆ ವೇಳೆ ಜಾತಿ ಮಾಹಿತಿ ಕಡ್ಡಾಯವಲ್ಲ: ಬೆಸ್ಕಾಂ ಸ್ಪಷ್ಟನೆ

ಪತ್ರಿಕಾಗೋಷ್ಠಿಯಲ್ಲಿ ವಕೀಲ ನರಸಿಂಹಮೂರ್ತಿ, ದಲಿತ ಸಂಘರ್ಷ ಸಮಿತಿ ಸಂಚಾಲಕ ಎಸ್.ಕೆ. ರಂಗನಾಥ್ ಮಾತನಾಡಿದರು. ಈ ವೇಳೆ ದಸಾಪ ತಾಲೂಕು ಅಧ್ಯಕ್ಷ ಮಹರಾಜು, ಪೆಟ್ರೋಲ್ ಬಂಕ್ ಮಾಲೀಕ ದೊಡ್ಡೇರಿ ರಮೇಶ್, ಮಾಜಿ ಗ್ರಾ.ಪಂ ಅಧ್ಯಕ್ಷ ಮಂಜುನಾಥ್, ಮಾಜಿ ಗ್ರಾ.ಪಂ.ಸದಸ್ಯ ದೊಡ್ಡೇರಿ ಲಿಂಗರಾಜು, ಒಳಮೀಸಲಾತಿ ಹೋರಾಟಗಾರ ತಿಪ್ಪಾಪುರ ಮೈಲಾರಪ್ಪ, ಕಾರ್ಪೆಂಟರ್ ಮೂರ್ತಿ, ಶ್ರೀಧರ್, ಗೊಲ್ಲಹಳ್ಳಿ ಹನುಮಂತರಾಯಪ್ಪ ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.