ಮಧುಗಿರಿ, ಮಾ.16: ರೈತರು ಹಾಗೂ ಸಾರ್ವಜನಿಕರು ತಮ್ಮ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳುತ್ತಾ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದು ಸೇರಿ ಸಾಕಷ್ಟು ವಿಚಾರಗಳು, ತುಮಕೂರು ಜಿಲ್ಲಾಧಿಕಾರಿ ಕೆ. ಶುಭ ಕಲ್ಯಾಣ್ ಅವರು ಸೋಮವಾರ ಮಧುಗಿರಿ ತಾಲೂಕು (Madhugiri News) ಕಚೇರಿಯಲ್ಲಿ ನಡೆಸಿದ ಜನ ಸಂಪರ್ಕ ಸಭೆಯಲ್ಲಿ ಸದ್ದು ಮಾಡಿದವು.
ಸಭೆಯಲ್ಲಿ 331 ಅರ್ಜಿ ಬಂದಿದ್ದು, ಕೆಲವು ಸ್ಥಳದಲ್ಲೇ ಸಮಸ್ಯೆಗಳನ್ನು ಡಿಸಿ ಸ್ಥಳದಲ್ಲೇ ಬಗೆಹರಿಸಿದರು. ಅದರಲ್ಲಿ ಮಧುಗಿರಿ ತಾಲೂಕಿನ ದೊಡ್ಡೇರಿ ಹಾಗೂ ಐ.ಡಿ.ಹಳ್ಳಿ ಹೋಬಳಿಯ ವ್ಯಾಪ್ತಿಯ ಕಂದಾಯ ಇಲಾಖೆಗೆ ಸಂಬಂಧಪಟ್ಟ ಸಮಸ್ಯೆಗಳು ಇವೆ. ಇನ್ನು ಪಿಂಚಣಿ, ಆಹಾರ, ಆಧಾರ್ ಅದಾಲತ್ ಮಾಡಿಕೊಟ್ಟಿದ್ದೇವೆ ಎಂದು ಜಿಲ್ಲಾಧಿಕಾರಿಗಳು, ಸೋಗೆನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ, ಅಕ್ರಮ ಮದ್ಯ ಮಾರಾಟದ ಬಗ್ಗೆ ಪೊಲೀಸ್ ಹಾಗೂ ಅಬಕಾರಿ ಅಧಿಕಾರಿಗಳು ಜಂಟಿ ತನಿಖೆ ನಡೆಸಲು ಆದೇಶಿಸಿದರು.

ಈಗಾಗಲೇ ತಾಲೂಕಿನಲ್ಲಿ ಗ್ರಾಮ ಪಂಚಾಯತಿಗಳಲ್ಲಿ ನಿವೇಶನಕ್ಕೆ ಜಾಗ ಮೀಸಲಿಟ್ಟಿದ್ದು, ಹಂಚಿಕೆ ಮಾಡಲು ವಿಳಂಬ ಆಗುತ್ತಿದೆ. ಪೌತಿ ಖಾತೆ, ಆಶ್ರಯ ಯೋಜನೆ, ಆರ್ ಆರ್ ಟಿ ತಿದ್ದುಪಡಿ, ದರಖಾಸ್ತು ಪೋಡಿ ಆದ್ಯತೆ ಮೇರೆಗೆ ತಹಸಿಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳು ಮಾಡಬೇಕು ಎಂದು ಸೂಚನೆ ನೀಡಿದ್ದೇನೆ ಎಂದು ಡಿಸಿ ಮಾಹಿತಿ ನೀಡಿದರು.
ಹೆಲಿಪ್ಯಾಡ್ ನಿರ್ಮಾಣಕ್ಕೆ ತಾಲೂಕಿನಲ್ಲಿ ಸ್ಥಳ ಸಿಕ್ಕರೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಏಪ್ರಿಲ್ 3ಕ್ಕೆ ಮಧುಗಿರಿಗೆ ಸಿಎಂ ಭೇಟಿ
ಏಪ್ರಿಲ್ 3ರಂದು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿಗೆ ಮುಖ್ಯಮಂತ್ರಿ ಅವರು ಆಗಮಿಸುವ ಹಿನ್ನೆಲೆಯಲ್ಲಿ ಮಧುಗಿರಿಯ ತಾಲೂಕು ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳು ಸಭೆ ನಡೆಸಿ, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.
ಮಂಡ್ಯದಲ್ಲಿ ಎಆರ್‌ಎಐ ಪರೀಕ್ಷಾ ಕೇಂದ್ರ; ಪ್ರಸ್ತಾವಿತ ಜಾಗ ಪರಿಶೀಲಿಸಿದ ಅಧಿಕಾರಿಗಳು
ಈ ವೇಳೆ ರೈತರ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರಪ್ಪ ಅವರ ನೇತೃತ್ವದ ತಂಡ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಸಭೆಯಲ್ಲಿ ಎಡಿಸಿ ತಿಪ್ಪೇಸ್ವಾಮಿ, ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಸೀಲ್ದಾರ್ ಎಚ್. ಶ್ರೀನಿವಾಸ್, ಇಒ ಲಕ್ಷ್ಮಣ್, ಡಿವೈಎಸ್ಪಿ ಮಂಜುನಾಥ್, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.