ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ.ಜಾತಿ, ಪ.ಪಂಗಡದ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಐಕ್ಯತಾ ಸಮಾವೇಶ: ಪಿ. ಚಿಕ್ಕರಂಗಪ್ಪ

Madhugiri News: ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ನೌಕರರಿಗೆ ಸಂವಿಧಾನ ಬದ್ದವಾಗಿ ಕಾಲಕಾಲಕ್ಕೆ ದೊರಬೇಕಾದ ಸೌಲಭ್ಯಗಳನ್ನು ನೀಡುವಂತೆ ಒತ್ತಾಯಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಐಕ್ಯತಾ ಸಮಾವೇಶಕ್ಕೆ ತೆರಳುತ್ತಿರುವುದಾಗಿ ತಾಲೂಕು ಎಸ್.ಸಿ-ಎಸ್.ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಪಿ. ಚಿಕ್ಕರಂಗಪ್ಪ ತಿಳಿಸಿದ್ದಾರೆ.

ಮಧುಗಿರಿ, ಆ.28: ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ನೌಕರರಿಗೆ ಸಂವಿಧಾನ ಬದ್ಧವಾಗಿ ಕಾಲಕಾಲಕ್ಕೆ ದೊರಕಬೇಕಾದ ಸೌಲಭ್ಯಗಳನ್ನು ನೀಡುವಂತೆ ಒತ್ತಾಯಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಐಕ್ಯತಾ ಸಮಾವೇಶಕ್ಕೆ ತೆರಳುತ್ತಿರುವುದಾಗಿ ತಾಲೂಕು ಎಸ್.ಸಿ-ಎಸ್.ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಪಿ. ಚಿಕ್ಕರಂಗಪ್ಪ ತಿಳಿಸಿದರು. ಪಟ್ಟಣದ (Madhugiri News) ಸರ್ಕಾರಿ ಬಸ್ ನಿಲ್ದಾಣದ ಬಳಿ ಎಸ್.ಸಿ-ಎಸ್.ಟಿ ನೌಕರರ ಸಮನ್ವಯ ಸಮಿತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿರುವ ಕರ್ನಾಟಕ ರಾಜ್ಯ ಸರ್ಕಾರಿ ಪ.ಜಾ/ಪ.ಪಂಗಡ ಜಾಗೃತ ನೌಕರರ 6ನೇ ರಾಜ್ಯಮಟ್ಟದ ಐಕ್ಯತಾ ಸಮಾವೇಶದಲ್ಲಿ ಭಾಗವಹಿಸಲು ಹೊರಟಿದ್ದ ವಾಹನಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಎಸ್ಸಿ-ಎಸ್ಟಿ ನೌಕರರಿಗೆ ಸಂವಿಧಾನ ಬದ್ಧವಾಗಿ ಲಭಿಸಬೇಕಾದ ಬಡ್ತಿ ಸೇರಿದಂತೆ ಹಲವಾರು ಸೌಲಭ್ಯಗಳು ಮರೀಚಿಕೆಯಾಗುತ್ತಿದ್ದು, ದಲಿತ ನೌಕರರ ಅನೇಕ ಸಮಸ್ಯೆಗಳು ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವ ಉದ್ದೇಶದಿಂದ ಐಕ್ಯತಾ ಸಮಾವೇಶವನ್ನು ಮಾಡಿ ಸರ್ಕಾರದ ಮಟ್ಟದಲ್ಲಿ ನಮಗೆ ನ್ಯಾಯಯುತವಾದ ಹಾದಿಯಲ್ಲಿ ಎಲ್ಲಾ ನಮ್ಮ ನೌಕರರಿಗೆ ಅನುಕೂಲವಾಗುತ್ತದೆ, ಹಾಗಾಗಿ ನಾವೆಲ್ಲರೂ ಒಗ್ಗಟಿನಿಂದ ಪಾಲ್ಗೊಂಡು ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸಮನ್ವಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ಗೌರವಾಧ್ಯಕ್ಷ ಹನುಮಂತರಾಯಪ್ಪ, ಜಿಲ್ಲಾ ಖಜಾಂಚಿ ಸುರೇಶ್ ಎಚ್.ಎಂ., ಮಾಧ್ಯಮ ಸಂಯೋಜಕ ಮಹರಾಜು, ಪ್ರಾಂಶುಪಾಲ ನರಸಿಂಹರಾಜು, ತಾ.ಪಂ. ಎಡಿಓ ಧನಂಜಯ್, ಲಕ್ಷ್ಮೀರಂಗಯ್ಯ, ರಮೇಶ್, ಹನುಮಂತರಾಯಪ್ಪ, ನಾಗರಾಜು, ಅರುಣ್ ಪಟೇಲ್, ಶಿಕ್ಷಣ ಇಲಾಖೆಯ ಗಂಗಾಧರ್, ರಂಗನಾಥ್, ಕೃಷ್ಣಪ್ಪ, ಹನುಮಂತರಾಜು, ಅರಣ್ಯ ಇಲಾಖೆಯ ಸುಮಂತ್, ಪರಶುರಾಂ, ಲ್ಯಾಬ್ ರಾಜಣ್ಣ ಹಾಗೂ ಸಮನ್ವಯ ಸಮಿತಿಯ ಪದಾಧಿಕಾರಿಗಳು ಮತ್ತು ವಿವಿಧ ಇಲಾಖೆಯ ನೌಕರ ವರ್ಗದವರು ಉಪಸ್ಥಿತರಿದ್ದರು.