ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಕ್ಕಳಿಗೆ ಅಂಕಗಳು ಮಾತ್ರವಲ್ಲ ಕೌಶಲ್ಯವೂ ಮುಖ್ಯ: ಶಾಸಕ ಜಿ.ಬಿ. ಜ್ಯೋತಿಗಣೇಶ್

ತುಮಕೂರು ​ನಗರದ ಕುಂಚಶ್ರೀ ಪ್ಯಾಲೇಸ್‌ನಲ್ಲಿ 'ಕುಂಚಶ್ರೀ ಮಹಿಳಾ ಬಳಗ'ದ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ-2026 ಕಾರ್ಯಕ್ರಮದಲ್ಲಿ ಶಾಸಕ ಜ್ಯೋತಿಗಣೇಶ್‌ ಅವರು ಮಾತನಾಡಿದ್ದಾರೆ. ಪೋಷಕರು ಮಕ್ಕಳನ್ನು ಕೇವಲ ಮೆಡಿಕಲ್ ಅಥವಾ ಎಂಜಿನಿಯರಿಂಗ್‌ ಕ್ಷೇತ್ರಗಳಿಗೆ ಮಾತ್ರ ಸೀಮಿತಗೊಳಿಸದೆ, ಇತರೆ ನವೀನ ಕ್ಷೇತ್ರಗಳ ಕಡೆಗೂ ಗಮನಹರಿಸುವಂತೆ ಪ್ರೇರೇಪಿಸಬೇಕು ಎಂದು ಸಲಹೆ ನೀಡಿದ್ದಾರೆ.

​ತುಮಕೂರು: ಇಂದಿನ ಪೈಪೋಟಿಯ ಯುಗದಲ್ಲಿ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಿ, ಅವರ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ತುಮಕೂರು (Tumkur) ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ (G. B. Jyothi Ganesh) ಅಭಿಪ್ರಾಯಪಟ್ಟಿದ್ದಾರೆ.

​ನಗರದ ಕುಂಚಶ್ರೀ ಪ್ಯಾಲೇಸ್‌ನಲ್ಲಿ 'ಕುಂಚಶ್ರೀ ಮಹಿಳಾ ಬಳಗ'ದ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ-2026 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.​

ಶಿಕ್ಷಣದ ವ್ಯಾಪ್ತಿ ವಿಸ್ತರಣೆ: ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಮುಗಿಸಿದ ಯುವಜನತೆಗೆ ಬದುಕಿನ ಮಹತ್ವದ ಘಟ್ಟದ ಕುರಿತು ನಿರ್ಧಾರ ತೆಗೆದುಕೊಳ್ಳುವ ಪೂರ್ಣ ಪರಿಜ್ಞಾನವಿರುವುದಿಲ್ಲ. ಹಾಗಾಗಿ ಪೋಷಕರು ಮಕ್ಕಳನ್ನು ಕೇವಲ ಮೆಡಿಕಲ್ ಅಥವಾ ಎಂಜಿನಿಯರಿಂಗ್‌ ಕ್ಷೇತ್ರಗಳಿಗೆ ಮಾತ್ರ ಸೀಮಿತಗೊಳಿಸದೆ, ಇತ್ತೀಚಿನ ದಿನಗಳಲ್ಲಿ ಪ್ರಚಲಿತದಲ್ಲಿರುವ ಇತರೆ ನವೀನ ಕ್ಷೇತ್ರಗಳ ಕಡೆಗೂ ಗಮನಹರಿಸುವಂತೆ ಪ್ರೇರೇಪಿಸಬೇಕು.

​ಕಲಾ ವಿಭಾಗಕ್ಕೂ ಉದ್ಯೋಗಾವಕಾಶ: ವಿಜ್ಞಾನ ಮತ್ತು ತಂತ್ರಜ್ಞಾನ ಹೊರತುಪಡಿಸಿ ಇತರೆ ಕ್ಷೇತ್ರಗಳಿಗೆ ಗಣಿತ ಕಡ್ಡಾಯವೇನಲ್ಲ. ಕಲಾ ವಿಭಾಗದಲ್ಲಿ ಕಲಿತ ಅನೇಕರು ಇಂದು ಗೂಗಲ್‌ನಂತಹ ಜಾಗತಿಕ ಸಂಸ್ಥೆಗಳಲ್ಲಿಯೂ ಕೆಲಸ ಮಾಡುತ್ತಿದ್ದಾರೆ.

Tumkur (1)

ಕೌಶಲ್ಯಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ​ಮುರಳೀಧರ ಹಾಲಪ್ಪ ಮಾತನಾಡಿ, ಇಂದಿನ ಯುವಜನರ ಮುಂದೆ ಹಲವು ಆಕರ್ಷಣೆಗಳಿದ್ದರೂ, ವಿದ್ಯಾರ್ಥಿಗಳು ಪೋಷಕರು ಹೆಮ್ಮೆಪಡುವಂತೆ ಬದುಕಬೇಕು. ವಿಜ್ಞಾನ ಮತ್ತು ವಾಣಿಜ್ಯ ವಿಷಯಗಳಷ್ಟೇ ಕಲಾ ವಿಭಾಗಕ್ಕೂ ಉತ್ತಮ ಅವಕಾಶಗಳಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಲಾ ಮಾಧ್ಯಮದವರು ಹೆಚ್ಚಿನ ಯಶಸ್ಸು ಕಾಣುತ್ತಿದ್ದಾರೆ ಎಂದು ತಿಳಿಸಿದರು.

ಬ್ಲೂಟಿಪಿ ಡಿಜಿಟಲ್ ಪ್ರೈವೇಟ್ ಲಿಮಿಟೆಡ್ ಸಿಇಒ​ ಮಂಜುಶ್ರೀ ನಿಜಲಿಂಗೇಗೌಡ ಮಾತನಾಡಿದರು.

ಕಾರ್ಯಕ್ರಮದ ವಿಶೇಷತೆ:

​ಕುಂಚಶ್ರೀ ಮಹಿಳಾ ಬಳಗದ ಅಧ್ಯಕ್ಷರಾದ ಲಲಿತ ಮಲ್ಲಪ್ಪ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಸ್.ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದ ಕುಂಚಿಟಿಗ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಈ ವೇಳೆ ಸನ್ಮಾನಿಸಿ ಗೌರವಿಸಲಾಯಿತು.

​ವೇದಿಕೆಯಲ್ಲಿ ಜಿಲ್ಲಾ ಕುಂಚಟಿಗ ಒಕ್ಕಲಿಗರ ಸಂಘದ ಅಧ್ಯಕ್ಷ ನೇತಾಜಿ ಶ್ರೀಧರ್, ಮಧುಗಿರಿ ತಾಲೂಕು ಕುಂಚಟಿಗರ ಸಂಘದ ಅಧ್ಯಕ್ಷ ಪಿ.ರಾಜಶೇಖರ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.