ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವೈ.ಎನ್.ಹೊಸಕೋಟೆಯಲ್ಲಿ ಮಳೆಗಾಗಿ ಮುಸ್ಲಿಂ ಸಮುದಾಯದವರಿಂದ ಸಾಮೂಹಿಕ ಪ್ರಾರ್ಥನೆ

Pavagada News: ಪಾವಗಡ ತಾಲೂಕಿನ ವೈ.ಎನ್. ಹೊಸಕೋಟೆ ಗ್ರಾಮದಲ್ಲಿ ಶುಕ್ರವಾರ ಮಳೆಗಾಗಿ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ವೈ.ಎನ್. ಹೊಸಕೋಟೆ ಗ್ರಾಮದ ಮುಸ್ಲಿಂ ಸಮುದಾಯದವರು ಶುಕ್ರವಾರದ ಸಾಮೂಹಿಕ ನಮಾಜ್‌ ಪೂರ್ಣಗೊಳಿಸಿದ ಬಳಿಕ ಈದ್ಗಾ ಮೈದಾನದಲ್ಲಿ ಒಂದೆಡೆ ಸೇರಿ ಮಳೆಗಾಗಿ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ.

ಪಾವಗಡ, ಸೆ.18: ತಾಲೂಕಿನ ವೈ.ಎನ್.ಹೊಸಕೋಟೆ ಗ್ರಾಮದಲ್ಲಿ (Pavagada News) ಶುಕ್ರವಾರ ಮಳೆಗಾಗಿ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ವೈ.ಎನ್. ಹೊಸಕೋಟೆ ಗ್ರಾಮದ ಮುಸ್ಲಿಂ ಸಮುದಾಯದವರು ಶುಕ್ರವಾರದ ಸಾಮೂಹಿಕ ನಮಾಜ್‌ ಪೂರ್ಣಗೊಳಿಸಿದ ಬಳಿಕ ಈದ್ಗಾ ಮೈದಾನದಲ್ಲಿ ಒಂದೆಡೆ ಸೇರಿ ಮಳೆಗಾಗಿ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಮಳೆ ಕೊರತೆಯಿಂದಾಗಿ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿದ್ದು, ರೈತರು ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಉತ್ತಮ ಮಳೆಯಾಗಲಿ, ಜನ-ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾಗದಿರಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು.

ಈ ವೇಳೆ ಗ್ರಾಮದ ಮುಸ್ಲಿಂ ಸಮುದಾಯದ ಮುಖಂಡ ಇಸ್ಮಾಯಿಲ್ ಮಾತನಾಡಿ, ತಾಲೂಕಿನಲ್ಲಿ ಮಳೆಗಾಗಿ ಜನರು ಪರಿತಪ್ಪಿಸುವಂತಾಗಿದೆ. ತಾಲೂಕಿನ ಬಹುತೇಕ ರೈತರು ಬೆಳೆದಂತಹ ಬೆಳೆ ಕೈಗೆಟಕದಂತೆ ಅಗಿದೆ. ಇರುವಂತಹ ಕೊಳವೆ ಬಾವಿಗಳಲ್ಲಿ ನೀರು ಕುಸಿತ ಕಂಡಿದೆ. ಇನ್ನೂ ಕೆಲವೇ ದಿನಗಳಲ್ಲಿ ಮಳೆ ಬಾರದೆ ಹೋದರೆ ನೀರಿನ ಸಮಸ್ಯೆ ಉಲ್ಬಣಗೊಳ್ಳುವ ಬಹುತೇಕ ಸಾಧ್ಯತೆ ಇದೆ ಎಂದು ತಿಳಿಸಿದ ಅವರು, ಉತ್ತಮ ಮಳೆಯಾಗಲಿ ಎಂದು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು ಎಂದು ಹೇಳಿದರು.‌

ಪ್ರಗತಿ ಪಥದಲ್ಲಿ ತುಮಕೂರು ಪಟ್ಟಣ ಕ್ರೆಡಿಟ್ ಸೊಸೈಟಿ: ಪಿ.ಆರ್. ದೇವರಾಜು

ಈ ಸಂದರ್ಭದಲ್ಲಿ ಮುಖಂಡರಾದ ಇಸ್ಮಾಯಿಲ್, ನಜೀರ್‌ಸಾಬ್, ಮೌಲನ ತಲ್ಹಾ, ಫಜ್ಲುಸಾಬ್, ಜಹುರ್ ಸಾಬ್, ಅಪ್ಲೆಪಲ್ಲಿ ಬಾಬು, ಮುಜಮಿಲ್, ಸಲಾವುದ್ದಿನ್ ಸೇರಿದಂತೆ ಅನೇಕ ಮುಸ್ಲಿಂ ಸಮುದಾಯದ ಮುಖಂಡರು ಭಾಗವಹಿಸಿದ್ದರು.