ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಧುಗಿರಿಯಲ್ಲಿ ʼಮುಗಿಯದ ಪ್ರೇಮ ಕಥೆʼ ಕಿರುಚಿತ್ರ ರಿಲೀಸ್‌

Madhugiri News: ಮಧುಗಿರಿ ತಾಲೂಕಿನ ಸ್ಥಳೀಯ ಕಲಾವಿದರು ವರಮಹಾಲಕ್ಷ್ಮಿ ಹಬ್ಬದ ದಿನವಾದ ಶುಕ್ರವಾರ ಐತಿಹಾಸಿಕ ಶ್ರೀ ದಂಡಿನ ಮಾರಮ್ಮ ದೇವಾಲಯದ ಆವರಣದಲ್ಲಿ 13 ನಿಮಿಷಗಳ ಕಾಲದ ಯೂಟ್ಯೂಬ್‌ನ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುವ ಕಿರುಚಿತ್ರ 'ಮುಗಿಯದ ಪ್ರೇಮ ಕಥೆ' ಬಿಡುಗಡೆಗೊಳಿಸಿದರು.

ಮಧುಗಿರಿ, ಆ.21: ತಾಲೂಕಿನ ಸ್ಥಳೀಯ ಕಲಾವಿದರು ವರಮಹಾಲಕ್ಷ್ಮಿ ಹಬ್ಬದ ದಿನವಾದ ಶುಕ್ರವಾರ ಐತಿಹಾಸಿಕ ಶ್ರೀ ದಂಡಿನ ಮಾರಮ್ಮ ದೇವಾಲಯದ ಆವರಣದಲ್ಲಿ 13 ನಿಮಿಷಗಳ ಕಾಲದ ಯೂಟ್ಯೂಬ್‌ನ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುವ ಕಿರುಚಿತ್ರ ಮುಗಿಯದ ಪ್ರೇಮ ಕಥೆ'' ಬಿಡುಗಡೆಗೊಳಿಸಿದರು.

ಈ ಕಿರುಚಿತ್ರವನ್ನು ನರಹ ಪ್ರೊಡಕ್ಷನ್ (NARAHA Production) ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿಸಬಹುದಾಗಿದ್ದು, ಆದರ್ಶ ಕಥೆ ಮತ್ತು ನಿರ್ದೇಶನ ಮಾಡಿದ್ದು, ಶಿವು ಮಧುಗಿರಿ ಅವರು ಛಾಯಾಗ್ರಾಹಣ ಮಾಡಿದ್ದಾರೆ. ಜಾನ್ ಕಿನಾಡಿ ಸಂಗೀತ, ಅಶೋಕ್ ಬೈರೇನಹಳ್ಳಿ ಸಾಹಿತ್ಯ, ಬುಜ್ಜಿ ಗಿರೀಶ್ ಪೋಸ್ಟರ್ ವಿನ್ಯಾಸ ಮಾಡಿದ್ದು, ಈ ಚಿತ್ರದಲ್ಲಿ ಕಲಾವಿದರಾಗಿ ಆದರ್ಶ ವೀಣಾ ಕುಮಾರಿ, ಕೀರ್ತಿ, ಅಶೋಕ್ ಬೈರನಹಳ್ಳಿ, ರಾಕಿ ಮಧುಗಿರಿ ಅವರು ಅಭಿನಯಿಸಿದ್ದಾರೆ.

ಶ್ರೀ ಸಿರಿ ಸೌಭಾಗ್ಯ ಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ

ಮಧುಗಿರಿ: ತಾಲೂಕಿನ ನಿಟ್ರಹಳ್ಳಿ ಕ್ರಾಸ್ ಬಳಿ ಇರುವ ಶ್ರೀ ಸಿರಿ ಸೌಭಾಗ್ಯ ಲಕ್ಷ್ಮೀ ದೇವಸ್ಥಾನದಲ್ಲಿ ಶುಕ್ರವಾರ ವರಲಕ್ಷ್ಮಿ ಹಬ್ಬದ ಪ್ರಯುಕ್ತ ಅಮ್ಮನವರಿಗೆ ವಿಶೇಷ ಪೂಜೆಯನ್ನು ಭಕ್ತಾದಿಗಳು ನೆರವೇರಿಸಿದರು.

Madhugiri News

ಈ ಸಂದರ್ಭದಲ್ಲಿ ಈ ಕ್ಷೇತ್ರದ ಧರ್ಮದರ್ಶಿಗಳಾದ ರಾಮರಾವ್ ಸ್ವಾಮೀಜಿ ಹಾಗೂ ಶ್ರೀ ವೆಂಕಟೇಶ್ವರ ಸ್ವಾಮಿ, ಪ್ರಧಾನ ಅರ್ಚಕ ಅನಂತಪದ್ಮನಾಭ ಸ್ವಾಮಿ, ಮುಖಂಡರಾದ ನರಸೇಗೌಡ, ಶ್ರೀನಿವಾಸ್, ನರಸಿಂಹಸ್ವಾಮಿ, ಗಂಗಣ್ಣ, ಮೂಡ್ಲಿ ಗಿರೀಶ್, ಶಿವಕುಮಾರ್, ಪಾಂಡುರಂಗರೆಡ್ಡಿ, ಯತೀಶ್ ಬಾಬು, ಸುದರ್ಶನ್ ಬಾಬು, ಮೂಡ್ಲಿಗಿರಿ, ಸೀಮೆಎಣ್ಣೆ ರಂಗಣ್ಣ, ಸಣ್ಣರಾಮಣ್ಣ, ಏರ್ಟೆಲ್ ರಾಜಣ್ಣ, ಸುಶೀಲಮ್ಮ, ಗಜ ಹಾಗೂ ಅನೇಕ ಭಕ್ತಾದಿಗಳು ಉಪಸ್ಥಿತರಿದ್ದರು.