ಕೊರಟಗೆರೆ: ಪಟ್ಟಣದ ಅಧಿಪತಿ ಶ್ರೀಗಂಗಾಧರೇಶ್ವರ ಸ್ವಾಮಿಯ ಹೆಸರಿನಲ್ಲಿ ನಿರ್ಮಾಣವಾಗಿರುವ ಗಂಗಾಧರೇಶ್ವರ ನಗರಕ್ಕೆ ನಾಲ್ಕು ರಸ್ತೆಗಳ ನಾಮಕರಣ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ನಗರದ ನಾಮಪಲಕವನ್ನು ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಚಾರ್ಯ ಸ್ವಾಮೀಜಿ ನಾಮಪಲಕ ಅನಾವರಣ ಮಾಡಿದರು.
ಕೊರಟಗೆರೆ ಪಟ್ಟಣ ದಿನದಿಂದ ದಿನಕ್ಕೆ ಅಭಿವೃದ್ಧಿಯತ್ತ ಸಾಗುತ್ತಿದ್ದು, ವಸತಿ ಪ್ರದೇಶಗಳು ವಿಸ್ತರಣೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಪಟ್ಟಣದಿಂದ ಬೋಡಬಂಡೇನಹಳ್ಳಿ ರಸ್ತೆಯ ಸುವರ್ಣಮುಖಿ ನದಿಯಿಂದ ಬೈಪಾಸ್ ರಸ್ತೆಯವರೆಗೆ ಗುರುತಿಸಲಾಗಿರುವ ಗಂಗಾಧರೇಶ್ವರ ನಗರದ ವ್ಯಾಪ್ತಿಯಲ್ಲಿ ನಾಲ್ಕು ರಸ್ತೆಗಳಿಗೆ ವಿಶೇಷವಾಗಿ ನಾಮಕರಣ ಇದರ ಜೊತೆಗೆ ಅನ್ನಪೂರ್ಣೇಶ್ವರಿ ನಗರ ಎಂದು ನಾಮಕರಣ ಮಾಡಲಾಗಿದೆ.

ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾಶಾಖಾ ಮಠದ ಪೀಠಾಧ್ಯಕ್ಷ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದಕ್ಷಿಣ ಕಾಶಿ ಎಂದೇ ಕರೆಯಲ್ಪಡುವ ಕೊರಟಗೆರೆ ಪಟ್ಟಣದ ಗಂಗಾಧರೇಶ್ವರ ಸ್ವಾಮಿಯ ಹೆಸರನ್ನು ನಾಮಕರಣ ಮಾಡಿರುವುದು ಸಂತಸ ತಂದಿದೆ. ಪಟ್ಟಣ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದೆ. ಮುಂದಿನ ದಿನಗಳಲ್ಲಿ ಕೊರಟಗೆರೆ ಇನ್ನಷ್ಟು ಬೃಹತ್ ಪಟ್ಟಣವಾಗಿ ಬೆಳೆಯಲಿ. ನಗರದ ಅಭಿವೃದ್ಧಿಯ ಜೊತೆಗೆ ನಮ್ಮ ಧಾರ್ಮಿಕ ಪರಂಪರೆ ಇತಿಹಾಸ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವ ಕಾರ್ಯವನ್ನು ಕೊರಟಗೆರೆಯ ಜನರು ಮಾಡಲಿ ಎಂದು ತಿಳಿಸಿದರು.

ಪುರಸಭೆಯ ಮಾಜಿ ಸದಸ್ಯ ಓಬಳಾರಾಜು ಮಾತನಾಡಿ ಶ್ರೀ ಗಂಗಾಧರೇಶ್ವರ ಸ್ವಾಮಿಯ ಹೆಸರಿನಲ್ಲಿ ನಗರ ಹಾಗೂ ರಸ್ತೆಗಳಿಗೆ ನಾಮಕರಣ ಮಾಡಿರುವುದು ಸ್ಥಳೀಯರಿಗೆ ಹೆಮ್ಮೆಯ ವಿಚಾರ. ಪಟ್ಟಣ ವೇಗವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ರಸ್ತೆಗಳಿಗೆ ಸೂಕ್ತ ಹೆಸರು ಮತ್ತು ಗುರುತು ದೊರೆಯುತ್ತಿರುವುದು ಸಾರ್ವಜನಿಕರಿಗೂ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಗುರು ಹಿರಿಯರ ಆಶೀರ್ವಾದದಿಂದ ಈ ಪ್ರದೇಶ ಮತ್ತಷ್ಟು ಅಭಿವೃದ್ಧಿಯಾಗಲಿ ಎಂದು ಹೇಳಿದರು.
Annabrahma Chaturmasya: ಸ್ಟೀಲ್, ಪ್ಲಾಸ್ಟಿಕ್ ಬಿಟ್ಟು ಪಾರಂಪರಿಕ ಪಾತ್ರೆಗಳನ್ನು ಬಳಸಿ: ರಾಘವೇಶ್ವರ ಶ್ರೀ ಸಲಹೆ
ಇದೆ ಸಂದರ್ಭದಲ್ಲಿ ಡಾ.ಹರೀಶ್, ಎಲ್.ರಾಜಣ್ಣ, ವೆಂಕಟೇಶ್, ಎನ್.ಮೂರ್ತಿ, ಕೆ.ವಿ. ಪುರುಷೋತ್ತಮ್, ದಿವ್ಯಪ್ರಸಾದ್, ಸೋಮಶೇಖರ್, ಚಂದ್ರು, ನವೀನ, ದಿನೇಶ್, ರಘುನಾಥ್, ನರೇಂದ್ರ, ಗೌಡ್ರು, ವೆಂಕಟೇಶಣ್ಣ, ಕೃಷ್ಣಮೂರ್ತಿ, ವಿಜಯನರಸಿಂಹ, ಮಂಜುನಾಥ್, ನಾಗಮಣಿ, ರಂಗಪ್ಪ, ನಾಗರಾಜು (ಎನ್.ಆರ್.ಶಾಮಿಯಾನ), ಗಿರೀಶ್ ಸೇರಿದಂತೆ ಇತರರು ಇದ್ದರು.