ತುಮಕೂರು: ರಾಷ್ಟ್ರಪತಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿಲ್ಲ. ದೆಹಲಿ ಮಟ್ಟದಲ್ಲಿ ಸಚಿವಿ ಜೋಶಿ, ವಿ. ಸೋಮಣ್ಣನವರು ಪಾಪ ಬಹಳ ಪ್ರಯತ್ನ ಪಟ್ಟರು. ರಾಷ್ಟ್ರಪತಿಗಳ ಅಧಿಕಾರಿಗಳ ಮಟ್ಟದಲ್ಲಿ ಸ್ಪಂದನೆ ಇಲ್ಲ ಅನ್ನೊದನ್ನು ಬಿಟ್ಟರೆ, ಇಲ್ಲಿ ಯಾರನ್ನೂ ದೂಷಣೆ ಮಾಡುವ ಅಗತ್ಯ ಇಲ್ಲ ಎಂದು ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ.
ರಾಷ್ಟ್ರಪತಿಗಳ ಕಾರ್ಯಕ್ರಮದಲ್ಲಿ ಆಸನದ ಗೊಂದಲ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಇದರಲ್ಲಿ ಸೋಮಣ್ಣರವರದ್ದು ಯಾವುದೇ ತಪ್ಪಿಲ್ಲ. ರಾಜ್ಯಪಾಲರೇ ಪ್ರಯತ್ನ ಪಟ್ಟರೂ ಆಗಿಲ್ಲ. ರಾಷ್ಟ್ರಪತಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿಲ್ಲ. ನಾವು ಉಲ್ಲಂಘನೆ ಮಾಡಿದೆವು ಎಂದು ಹೇಳಿದ್ದಾರೆ.
ರಾಷ್ಟ್ರಪತಿ ಭವನದ ಅಧಿಕಾರಿಗಳು ಸ್ಪಂದಿಸುತ್ತಿರಲಿಲ್ಲ. ನಾವು ಬಿಹಾರಕ್ಕೆ ಹೊರಟ್ಟಿದ್ದೇವೆ, ಈಗ ಮಾತನಾಡಲು ಆಗಲ್ಲ ಎಂದು ಹೇಳುತಿದ್ದರು. ಬೆಂಗಳೂರಿಗೆ ಬಂದ ನಂತರ ಮಾತನಾಡುತ್ತೇವಿ ಎಂದಿದ್ದರು. ಬೆಂಗಳೂರಿಗೆ ಬಂದಾಗಲೂ ಸ್ಪಂದಿಸಿಲ್ಲ. ಈ ಬಗ್ಗೆ ರಾಜ್ಯಪಾಲರ ಗಮನಕ್ಕೆ ತಂದೆವು, ಅವರು ರಾತ್ರಿ 11 ಗಂಟೆವರೆಗೂ ಪ್ರಯತ್ನ ಪಟ್ಟಿದ್ದಾರೆ. ಆಮೇಲೆ ನಾವೇ ಪರವಾಗಿಲ್ಲ, ರಾಷ್ಟ್ರಪತಿಗಳ ಪಕ್ಕದಲ್ಲೇ ಕೂರಬಹುದಲ್ಲಾ ಎಂದು ಹೆಸರು ಬದಲಾಯಿಸಿ ಪಕ್ಕದಲ್ಲೇ ಕುಳಿತುಕೊಂಡಿದ್ದೆವು. ಆದರೇ ರಾಷ್ಟ್ರಪತಿಗಳ ಭದ್ರತಾ ಸಿಬ್ಬಂದಿ ಸಾಕಷ್ಟು ಗಂಭೀರವಾಗಿ ಪರಿಗಣಿಸಿದರು. ಅಧಿಕಾರಿಗಳು ಆ ರೀತಿ ನಡೆದುಕೊಳ್ಳುತ್ತಾರೆಂದು ನಾವು ಅಂದುಕೊಂಡಿರಲಿಲ್ಲ.
ಆ ಮೇಲೆ ಅವರು ಪುಸ್ತಕ ನೋಡಿ ತಮ್ಮ ಪ್ರೋಟೊಕಾಲ್ ಪ್ರಕಾರ ಎಲ್ಲರನ್ನೂ ಕೂರಿಸಿದರು. ರಾಷ್ಟ್ರಪತಿಗಳು ವೇದಿಕೆ ಬಳಿ ಬಂದಾಗಲು ಅವರ ಭೇಟಿ ಮಾಡಲು ಅಧಿಕಾರಿಗಳು ಬಿಡಲಿಲ್ಲ. ನೀವು ಏನು ಹೇಳಬೇಕೊ ಹೇಳಿ ಅದನ್ನು ನಾವು ತಿಳಿಸುತ್ತೀವಿ ಎಂದಿದ್ದರು. ರಾಷ್ಟ್ರಪತಿಗಳು ಬಂದಾಗ ಬಹಳ ಗೌರವದಿಂದ ನಡೆದುಕೊಳ್ಳುವುದು ನಮ್ಮ ಕರ್ತವ್ಯ.
ನಾವು ಎರಡು ಬಾರಿ ವೇದಿಕೆ ಮೇಲೆ ಕೂರುವವರ ಪಟ್ಟಿಯನ್ನು ಎರಡು ಬಾರಿ ಕಳುಹಿಸಿಕೊಟ್ಟಿದ್ದೇವೆ. ನಾವು ಕಳುಹಿಸಿದ್ದನು ಅವರು ಒಪ್ಪಿಲ್ಲ. ಅವರು ಯಾರ ಪಕ್ಕದಲ್ಲಿ ಯಾರು ಕೂರಬೇಕು ಅನ್ನೊದನ್ನು ಅವರ ಪ್ರಕಾರ ಪಟ್ಟಿ ಮಾಡಿಕೊಂಡಿದ್ದಾರೆ. ಇಲ್ಲಿ ಬಂದಾಗಲೂ ಜೋಶಿ, ಸೋಮಣ್ಣ ಬಹಳ ಪ್ರಯತ್ನ ಪಟ್ಟರು. ಆದರೇ ರಾಷ್ಟ್ರಪತಿಗಳ ಭದ್ರತಾ ಸಿಬ್ಬಂದಿಗಳು ರಾಷ್ಟ್ರಪತಿಗಳ ಗಮನಕ್ಕೆ ತಂದಿಲ್ಲ. ರಾಷ್ಟ್ರಪತಿಗಳು ಅಧಿಕಾರಿಗಳು ಹೇಳದಂತೆ ನಡೆದು ಕೊಂಡರು ಎಂದು ತಿಳಿಸಿದ್ದಾರೆ.
ಇದೇನು ದೊಡ್ಡದಲ್ಲ, ರಾಷ್ಟ್ರದ ಘನತೆ ಗೌರವ ಹೆಚ್ಚಿಸುವ ನಾವುಗಳು, ರಾಷ್ಟ್ರಪತಿಗಳಿಗೆ ಗೌರವ ಕೊಡಬೇಕು. ನಾವು ಎಲ್ಲಿ ಕುಳಿತುಕೊಂಡರೂ ಒಂದೇ. ರಾಷ್ಟ್ರಪತಿ ಪಕ್ಕದಲ್ಲಿ ಕುಳಿತುಕೊಂಡರೇ ನಮಗೇನೂ ಕೋಡು ಬರೋದಿಲ್ಲ. ಗದ್ದುಗೆಗೆ ಹೋಗಿ ರಾಷ್ಟ್ರಪತಿಗಳು ತುಂಬಾ ಭಕ್ತಿ ಭಾವದಿಂದ ನಡೆದುಕೊಂಡರು.. ಧ್ಯಾನ ಮಂಟಪದಲ್ಲಿ ಧ್ಯಾನದಲ್ಲಿ ತನ್ಮಯರಾಗಿದ್ದರು.. ಬಳಿಕ ಮಠದ ಮಕ್ಕಳ ಜತೆಯೆಲ್ಲಾ ಬೆರತು ಮಾತನಾಡಿದರು ಎಂದು ಹೇಳಿದ್ದಾರೆ.
ರಾಷ್ಟ್ರಪತಿ ಭಾಗಿಯಾದ ಕಾರ್ಯಕ್ರಮದಲ್ಲಿ ಸಿದ್ದಲಿಂಗ ಸ್ವಾಮೀಜಿಗೆ ಕೊನೆಯ ಆಸನ; ಭಕ್ತರ ಆಕ್ರೋಶ
ಭಕ್ತಾಧಿಗಳು ಈ ವಿಚಾರದಲ್ಲಿ ಬೇಸರಗೊಳ್ಳುವ ಅಗತ್ಯವಿಲ್ಲ. ಬಸವಣ್ಣನವರು ಹೇಳಿದಂತೆ "ಎನಗಿಂತ ಕಿರಿಯರಿಲ್ಲ, ಶಿವ ಭಕ್ತರಿಗಿಂತ ಹಿರಿಯರಿಲ್ಲ" ಎಂಬಂತೆ ರಾಷ್ಟ್ರದ ಘನತೆವೆತ್ತ ರಾಷ್ಟ್ರಪತಿಗಳು ಬಂದಾಗ ಅವರ ಭದ್ರತೆಗೆ ಏನು ಮಾಡ್ತಾರೋ ಅದರಂತೆ ನಾವು ಅನುಸರಿಸಬೇಕು. ನಮ್ಮ ಮಠದಲ್ಲಿ ಭದ್ರತೆ ವಿಚಾರವಾಗಿ ಅಷ್ಟೇನು ತೊಂದರೆ ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ಬರುತ್ತಿರುವುದು ತಪ್ಪು ಮಾಹಿತಿ. ನಮಗೆ ರಾಷ್ಟ್ರಪತಿಗಳು ಬಂದಿರೊದೆ ಸಂತೋಷ ಎಂದು ತಿಳಿಸಿದ್ದಾರೆ.