ಮಧುಗಿರಿ, ಜು.3: ಫ.ಗು.ಹಳಕಟ್ಟಿ ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿ. ಅವರು ವಚನ ಸಾಹಿತ್ಯದ ದಾರಿದೀಪ ಎಂದು ಅಚಲ ಕಲ್ಚರಲ್ ಫೌಂಡೇಶನ್‌ನ ಆಧ್ಯಕ್ಷ, ನಿವೃತ್ತ ಪ್ರಾಂಶುಪಾಲ ಪ್ರೊ.ಡಿ.ಎಸ್. ಮುನೀಂದ್ರ ಕುಮಾರ್ ತಿಳಿಸಿದರು. ಪಟ್ಟಣದ (Madhugiri News) ಗೌತಮಬುದ್ಧ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಫ.ಗು.ಹಳಕಟ್ಟಿ ಮತ್ತು ಛತ್ರಪತಿ ಶಾಹು ಮಹಾರಾಜ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಫ.ಗು. ಹಳಕಟ್ಟಿ ಅವರು ನಿರಂತರ ಪರಿಶ್ರಮದಿಂದ ವಚನ ಸಾಹಿತ್ಯ ಶೋಧಿಸಿ, ಪ್ರಕಟಿಸಿ, ಜನಸಾಮಾನ್ಯರಿಗೆ ತಲುಪಿಸಿದ ಹಿರಿಯ ಚೇತನ ಎಂದು ಹೇಳಿದರು.
ಹಿರಿಯ ಸಾಹಿತಿ ಪ್ರೊ.ಮ.ಲ.ನ ಮೂರ್ತಿ ಮಾತನಾಡಿ, ಛತ್ರಪತಿ ಶಾಹು ಮಹಾರಾಜ್ ಮೀಸಲಾತಿ ಜನಕ, ಸಾಮಾಜಿಕ ಪ್ರಜಾಪ್ರಭುತ್ವದ ರೂವಾರಿ, ಅಸ್ಪೃಶ್ಯರು, ಹಿಂದುಳಿದ ವರ್ಗದವರಿಗೆ ಶಿಕ್ಷಣದೊಂದಿಗೆ ಅಧಿಕಾರದಲ್ಲಿ ಸಮಪಾಲು ಮತ್ತು ಸಾಮಾಜಿಕ ಸ್ಥಾನಮಾನ ದೊರಕಿಸಿಕೊಟ್ಟರು ಎಂದು ತಿಳಿಸಿದರು.
ಪ್ರಾಂಶುಪಾಲ ಶ್ರೀನಿವಾಸ್ ಮಾತನಾಡಿ, ಇಂಥ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಅರಿವು ಹೆಚ್ಚಿಸಿ, ಆತ್ಮವಿಶ್ವಾಸ ಮೂಡಿಸುವಲ್ಲಿ ಸಹಾಯಕ ಎಂದು ತಿಳಿಸಿದರು.
Gruha Jyothi Scheme: ಗೃಹ ಜ್ಯೋತಿ ಪರಿಶೀಲನೆ ವೇಳೆ ಜಾತಿ ಮಾಹಿತಿ ಕಡ್ಡಾಯವಲ್ಲ: ಬೆಸ್ಕಾಂ ಸ್ಪಷ್ಟನೆ
ವೇದಿಕೆಯಲ್ಲಿ ಉಪನ್ಯಾಸಕರಾದ ನಾಗರತ್ನ, ಸುಧಾ, ದೊಡ್ಡಮಲ್ಲಯ್ಯ, ಚಿತ್ತಯ್ಯ ಮತ್ತು ಪಿ.ಕೆ.ರಂಗಸ್ವಾಮಿ ಉಪಸ್ಥಿತರಿದ್ದರು. ಸೌಮ್ಯ ಸಂಗಡಿಗರು ಪ್ರಾರ್ಥಿಸಿದರು. ಕರೀಗೌಡ ಸ್ವಾಗತಿಸಿದರು. ಕವಯತ್ರಿ ವೀಣಾ ಶ್ರೀನಿವಾಸ್ ನಿರೂಪಿಸಿದರು. ಎಚ್. ರಂಗಸ್ವಾಮಯ್ಯ ವಂದಿಸಿದರು.