ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸೇವಾ ಸಂಕಲ್ಪ ಅಭಿಯಾನ: ನೆಲದ ಮೇಲೆ ಕುಳಿತು ಉಪಹಾರ ಸೇವಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

Seva Sankalp Abhiyan: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 25 ವರ್ಷಗಳ ಸುದೀರ್ಘ ರಾಜಕೀಯ ಜೀವನ ಹಾಗೂ ಸೇವಾ ಸಾಧನೆಗಳನ್ನು ಸ್ಮರಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ‘ಸೇವಾ ಸಂಕಲ್ಪ ಅಭಿಯಾನ’ದ ಪ್ರಯುಕ್ತ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹಾಗಲವಾಡಿ ಜುಂಜಪ್ಪನ ಹಟ್ಟಿಗೆ ಭೇಟಿ ನೀಡಿದರು.

ಗುಬ್ಬಿ ತಾಲೂಕಿಗೆ ತೆರಳಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೆಲದಲ್ಲಿ ಕುಳಿತು ಉಪಾಹಾರ ಸೇವಿಸಿದರು.

​ತುಮಕೂರು/ಗುಬ್ಬಿ, ಅ. 4: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 25 ವರ್ಷಗಳ ಸುದೀರ್ಘ ರಾಜಕೀಯ ಜೀವನ ಹಾಗೂ ಸೇವಾ ಸಾಧನೆಗಳನ್ನು ಸ್ಮರಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ‘ಸೇವಾ ಸಂಕಲ್ಪ ಅಭಿಯಾನ’ದ (Seva Sankalp Abhiyan) ಪ್ರಯುಕ್ತ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಜಿಲ್ಲೆಯ ಗುಬ್ಬಿ ತಾಲೂಕಿನ ಹಾಗಲವಾಡಿ ಜುಂಜಪ್ಪನ ಹಟ್ಟಿಗೆ ಭೇಟಿ ನೀಡಿ ಗಮನ ಸೆಳೆದರು. ಪ್ರವಾಸದ ಭಾಗವಾಗಿ ವಿಜಯೇಂದ್ರ ಜುಂಜಪ್ಪನ ಹಟ್ಟಿ ಐತಿಹಾಸಿಕ ಜುಂಜಪ್ಪ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

​ನೆಲದ ಮೇಲೆ ಕುಳಿತು ಉಪಹಾರ

ವಿಐಪಿ ಸಂಸ್ಕೃತಿಗೆ ಭಿನ್ನವಾಗಿ, ಸರಳತೆಯನ್ನು ಮೆರೆದ ಬಿ.ವೈ. ವಿಜಯೇಂದ್ರ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ನೆಲದ ಮೇಲೆ ಕುಳಿತು ಉಪಹಾರ ಸೇವಿಸಿದರು. ಅವರ ಈ ಸರಳತೆಯು ಕಾರ್ಯಕರ್ತರಲ್ಲಿ ಉತ್ಸಾಹವನ್ನು ಇಮ್ಮಡಿಗೊಳಿಸಿತು.

ಗ್ಯಾರಂಟಿ ಯೋಜನೆಗಳಿಂದ ಖಜಾನೆ ಖಾಲಿ; ಹಣಕಾಸು ಪರಿಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಲು ವಿಜಯೇಂದ್ರ ಆಗ್ರಹ

​ಪಕ್ಷದ ಸಂಘಟನೆಗೆ ಬಲ

ಪ್ರಧಾನಿ ಮೋದಿಯವರ ಸೇವಾ ಮನೋಭಾವವನ್ನು ಜನಸಾಮಾನ್ಯರಿಗೆ ತಲುಪಿಸುವ ಗುರಿ ಹೊಂದಿರುವ ಈ ಅಭಿಯಾನವು, ಸ್ಥಳೀಯ ಮಟ್ಟದಲ್ಲಿ ಬಿಜೆಪಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ.

BY Vijayendra Tumkur tour

ಕರಿಕಂಬಳಿ ಗೌರ

ವಿಜಯೇಂದ್ರ ಅವರಿಗೆ ಜುಂಜಪ್ಪ ಹಟ್ಟಿ ಗ್ರಾಮಸ್ಥರು ಕಾಡುಗೊಲ್ಲ ಸಮುದಾಯದ ಸಾಂಪ್ರದಾಯಿಕ ಸಂಕೇತವಾದ ಕರಿ ಕಂಬಳಿಯನ್ನು ಹಾಕಿ ಗೌರವಿಸಿದರು. ಇದೇ ವೇಳೆ ಕಾಡುಗೊಲ್ಲ ಸಮುದಾಯವನ್ನು ಶೀಘ್ರವೇ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರವನ್ನು ಒತ್ತಾಯಿಸುವಂತೆ ಮುಖಂಡರು ಮನವಿ ಸಲ್ಲಿಸಿದರು.

ಶ್ರೀ ಬಸವ ರಮಾನಂದ ಸ್ವಾಮೀಜಿ, ಶಾಸಕರಾದ ಸುರೇಶ್ ಗೌಡ, ಜ್ಯೋತಿ ಗಣೇಶ್, ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ, ಮಾಜಿ ಶಾಸಕ ಮಸಾಲ ಜಯರಾಮ್, ಮಾಜಿ ವಿಧಾನಪರಿಷತ್‌ ಸದಸ್ಯ ಡಾ. ಎಂ.ಆರ್‌. ಹುಲಿನಾಯ್ಕರ್‌, ಕಾರ್ಯದರ್ಶಿ ವಿನಯ್ ಬಿದರೆ, ದಿಲೀಪ್ ಕುಮಾರ್, ದೇವಾಲಯದ ಪ್ರಧಾನ ಅರ್ಚಕ ಈರಪ್ಪ, ಜಗದೀಶ್, ಗಂಗಾಧರ್, ಬಾಬು ಮತ್ತಿತರರು ಉಪಸ್ಥಿತರಿದ್ದರು.

ಡಿಕೆ ಶಿವಕುಮಾರ್‌ಗೆ ಅಧಿಕಾರದ ಮದ ನೆತ್ತಿಗೇರಿದೆ: ವಿಜಯೇಂದ್ರ

ತುಮಕೂ ಗುರಿನಬ್ಬಿ ತಾಲೂಕಿನ ಹಾಗಲವಾಡಿ ಜುಂಜಪ್ಪನ ಹಟ್ಟಿಯಲ್ಲಿ ಪೂಜೆ ಸಲ್ಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ವೈ. ವಿಜಯೇಂದ್ರ, ʼʼಡಿ.ಕೆ. ಶಿವಕುಮಾರ್ ಅಧಿಕಾರಕ್ಕೆ ಬಂದ ತಕ್ಷಣವೇ ನೈಸ್ ಪ್ರಾಜೆಕ್ಟ್ ಟೇಕ್ ಓವರ್ ಮಾಡಲು ಮುಂದಾಗಿದ್ದಾರೆ. ಜನರ ವಿರೋಧದ ನಡುವೆಯೂ ಬಿಡದಿ ಟೌನ್‌ಶಿಪ್ ಮಾಡಲು ಹೊರಟಿದ್ದು, ರೈತರನ್ನು ಬೀದಿಗೆ ತರುತ್ತಿದ್ದಾರೆʼʼ ಎಂದು ಆರೋಪಿಸಿದರು.

​ಫಾರ್ಮ್ 7 ವಿವಾದ ಹಾಗೂ ಎಫ್‌ಐಆರ್

ʼʼಚುನಾವಣಾ ಆಯೋಗ ನೀಡಿರುವ ಫಾರ್ಮ್ 7 ಹಕ್ಕನ್ನು ಬಳಸಿ ಅನುಮಾನವಿರುವ ಮತದಾರರ ಬಗ್ಗೆ ದೂರು ನೀಡಿದರೆ, ಅದನ್ನು ನೆಪ ಮಾಡಿಕೊಂಡು ಆಯೋಗದ ಮೇಲೆ ಪ್ರತಿಭಟನೆ ನಡೆಸಿ ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಎಫ್‌ಐಆರ್ ದಾಖಲಿಸಲಾಗಿದೆʼʼ ಎಂದು ಕಿಡಿಕಾರಿದರು.

​ಅಧಿಕಾರದ ಮದದ ಆರೋಪ

ʼʼಸ್ವಾಮೀಜಿಗಳ ಸಭೆಯಲ್ಲಿ ಅಗೌರವ ತೋರುವ ಮೂಲಕ ಡಿ.ಕೆ. ಶಿವಕುಮಾರ್‌ಗೆ ಅಧಿಕಾರದ ಮದ ನೆತ್ತಿಗೇರಿದೆʼʼ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದರು.

Vijayendra in Tumkur

​ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿಯಲಿದೆ

ʼʼಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ವಿಚಾರವಾಗಿ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಲಾಗಿದೆ. ಯಾವ ಕ್ಷೇತ್ರದಲ್ಲಿ ಯಾವ ಪಕ್ಷ ಸ್ಪರ್ಧಿಸಬೇಕು ಎಂಬುದು ಈಗಲೇ ತೀರ್ಮಾನವಾದರೆ ಕಾರ್ಯಕರ್ತರಿಗೆ ಅನುಕೂಲವಾಗಲಿದೆ ಎಂದು ಕುಮಾರಸ್ವಾಮಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆʼʼ ಎಂದು ತಿಳಿಸಿದರು.

ಬಿಜೆಪಿ ಸಭೆಯಲ್ಲೇ ಮುಖಂಡರ ಬೆಂಬಲಿಗರ ಗಲಾಟೆ; ವಿಜಯೇಂದ್ರ ತೀವ್ರ ತರಾಟೆ

ಗುಬ್ಬಿ ತಾಲೂಕಿನ ಚೇಳೂರಿನಲ್ಲಿ ನಡೆದ ಬಿಜೆಪಿ 'ಸೇವಾ ಸಂಕಲ್ಪ ಅಭಿಯಾನ' ಸಭೆಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಮ್ಮುಖದಲ್ಲೇ ಮುಖಂಡರ ಬೆಂಬಲಿಗರು ಗಲಾಟೆ ಮಾಡಿಕೊಂಡಿದ್ದಾರೆ. ​ಕಳೆದ ಚುನಾವಣೆಯಲ್ಲಿ ಸೋತಿದ್ದ ದಿಲೀಪ್ ಕುಮಾರ್ ಹಾಗೂ ಟಿಕೆಟ್ ಆಕಾಂಕ್ಷಿ ಗ್ಯಾಸ್ ಬಾಬು ಬೆಂಬಲಿಗರ ನಡುವೆ ಭಾಷಣದ ವಿಚಾರವಾಗಿ ಮಾತಿನ ಚಕಮಕಿ ನಡೆದು, ವೇದಿಕೆಯಿಂದ ಕೆಳಗಿಳಿದು ವಾಗ್ವಾದ ನಡೆಸಿದರು.

2028ಕ್ಕೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ: ವಿಜಯೇಂದ್ರ

ಕಾರ್ಯಕರ್ತರ ಗಲಾಟೆಗೆ ಗರಂ ಆದ ವಿಜಯೇಂದ್ರ, "ಕುಂಬಾರನಿಗೆ ವರ್ಷ, ದೊಣ್ಣೆಗೆ ನಿಮಿಷ" ಎಂದು ಅತೃಪ್ತಿ ವ್ಯಕ್ತಪಡಿಸಿದರು. "ಒಬ್ಬರ ಕಡೆ ಬೆರಳು ತೋರುವಾಗ ನಾಲ್ಕು ಬೆರಳು ನಮ್ಮ ಕಡೆ ಇರುತ್ತವೆ. ನೀವು ಕಿತ್ತಾಡಿಕೊಳ್ಳದಿದ್ದರೆ ಯಾವಾಗಲೋ ಬಿಜೆಪಿ ಗೆಲ್ಲುತ್ತಿತ್ತು. ಹೀಗೆ ಮುಂದುವರಿದರೆ ನಾನೇ ಬಂದು ಇಲ್ಲಿ ನಿಲ್ಲಬೇಕಾಗುತ್ತದೆ" ಎಂದು ಕಠಿಣ ಎಚ್ಚರಿಕೆ ನೀಡಿದರು.

ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author