ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮದ್ಯವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಧರ್ಮಸ್ಥಳ ಸಂಸ್ಥೆಯ ಕೊಡುಗೆ ಅಪಾರ: ಡಾ. ಹನುಮಂತನಾಥ ಸ್ವಾಮೀಜಿ ಶ್ಲಾಘನೆ

Tumkur News: ಸರ್ಕಾರ ಮಾಡಬೇಕಾದ ಮದ್ಯವರ್ಜನ ಶಿಬಿರಗಳು ಹಾಗೂ ಸಮಾಜ ಸುಧಾರಣೆಯ ಕೆಲಸವನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಿದ್ದು, ಕುಡಿತ ಬಿಟ್ಟವರನ್ನು ಗೌರವಿಸುವ ಏಕೈಕ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು ಎಲೆರಾಂಪುರ ಕುಂಚಿಟಿಗರ ಮಹಾಸಂಸ್ಥಾನದ ಡಾ. ಹನುಮಂತನಾಥ ಸ್ವಾಮೀಜಿ ಶ್ಲಾಘಿಸಿದ್ದಾರೆ.

ತುಮಕೂರು, ಅ.09: ದುಶ್ಚಟಮುಕ್ತ ಸಮಾಜ ನಿರ್ಮಾಣದ ಮಹಾತ್ಮ ಗಾಂಧಿಯವರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜನಜಾಗೃತಿ ವೇದಿಕೆ ಅತ್ಯಮೂಲ್ಯ ಕೆಲಸ ಮಾಡುತ್ತಿವೆ ಎಂದು ಎಲೆರಾಂಪುರ ಕುಂಚಿಟಿಗರ ಮಹಾಸಂಸ್ಥಾನದ ಡಾ. ಹನುಮಂತನಾಥ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ. ಗಾಂಧಿ ಜಯಂತಿಯ ಅಂಗವಾಗಿ ತುಮಕೂರಿನ ಹನುಮಂತಪುರ ಕೊಲ್ಲಾಪುರದಮ್ಮ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ 'ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧಿ ಸ್ಮೃತಿ ಮತ್ತು ಬೃಹತ್ ಜನಜಾಗೃತಿ ಸಮಾವೇಶ'ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರ ಮಾಡಬೇಕಾದ ಮದ್ಯವರ್ಜನ ಶಿಬಿರಗಳು ಹಾಗೂ ಸಮಾಜ ಸುಧಾರಣೆಯ ಕೆಲಸವನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಿದ್ದು, ಕುಡಿತ ಬಿಟ್ಟವರನ್ನು ಗೌರವಿಸುವ ಏಕೈಕ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು ಸ್ವಾಮೀಜಿ ಅವರು ಶ್ಲಾಘಿಸಿದರು.

ಮದ್ಯವ್ಯಸನದಿಂದ ನೂರಾರು ಕುಟುಂಬಗಳ ನೆಮ್ಮದಿ ಹಾಳಾಗುತ್ತಿದ್ದರೂ, ಸರ್ಕಾರ ಹಾಗೂ ರಾಜಕಾರಣಿಗಳು ಮದ್ಯ ಮಾರಾಟವನ್ನು ಪ್ರೋತ್ಸಾಹಿಸುವ ಮೂಲಕ ಮನೆಗಳ ದೀಪ ಆರಿಸುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರ ಆರ್ಥಿಕ ಸ್ವಾವಲಂಬನೆ, ದೇವಾಲಯಗಳ ಜೀರ್ಣೋದ್ಧಾರ, ಬಡವರಿಗೆ ಮನೆ ನಿರ್ಮಾಣ, ವಿದ್ಯಾರ್ಥಿವೇತನ ಮತ್ತು ಶಾಲಾ ಅಭಿವೃದ್ಧಿಗೆ ನೆರವು ನೀಡುವ ಮೂಲಕ ಜಾತಿ-ಧರ್ಮದ ಭೇದವಿಲ್ಲದೆ ಸಂಸ್ಥೆ ಮಾದರಿ ಸೇವೆಯನ್ನು ನೀಡುತ್ತಿದೆ ಎಂದರು.

ಎನ್‌ಡಿಆರ್‌ಎಫ್ ಯೋಧರ ಮಾನಸಿಕ ಆರೋಗ್ಯಕ್ಕಾಗಿ 'ಪ್ರಾಜೆಕ್ಟ್ ನಿರ್ಮಲ್' ಜಾರಿ; ಏನಿದು ಯೋಜನೆ?

ಜನಜಾಗೃತಿ ವೇದಿಕೆ ಟ್ರಸ್ಟ್‌ನ ಜಿಲ್ಲಾ ಅಧ್ಯಕ್ಷ ಆರ್. ಕಾಮರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಉದ್ಯಮಿ ಡಾ. ಆರ್.ಎಲ್. ರಮೇಶ್ ಬಾಬು, ಸ್ಫೂರ್ತಿ ಡೆವಲಪರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಎಸ್.ಪಿ. ಚಿದಾನಂದ್, ಲೇಖಕಿ ಮಲ್ಲಿಕಾ ಬಸವರಾಜು, ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ, ತಾಲೂಕು ಯೋಜನಾಧಿಕಾರಿಗಳಾದ ಸಂದೇಶ್, ಪ್ರಭಾಕರ್, ಡಾ. ಸಂಜಯ್ ನಾಯಕ್, ಅಮರನಾಥ್, ಗಣೇಶ್ ಪ್ರಸಾದ್ ಹಾಗೂ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಕೋತಿತೋಪು ವೃತ್ತದಿಂದ ಬೃಹತ್ ಜಾಗೃತಿ ಜಾಥಾವನ್ನು ನಡೆಸಲಾಯಿತು.