ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪಾವಗಡದಲ್ಲಿ ಘೋರ ಘಟನೆ; ಇಬ್ಬರು ಮಕ್ಕಳ ಕತ್ತು ಕೊಯ್ದು ಕೊಂದು ತಾಯಿ ಆತ್ಮಹತ್ಯೆ!

Pavagada News: ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಕಡಪಲ ಕೆರೆ ಗ್ರಾಮದಲ್ಲಿ ಶನಿವಾರ ಘಟನೆ ನಡೆದಿದೆ. ಒಂದೂವರೇ ವರ್ಷ ಹಾಗೂ ನಾಲ್ಕು ವರ್ಷದ ಮಗುವಿನ ಕತ್ತು ಕೊಯ್ದು ಸಾಯಿಸಿದ ನಂತರ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ.

ಪಾವಗಡ: ಇಬ್ಬರು ಮಕ್ಕಳ ಕತ್ತು ಕೊಯ್ದು ಕೊಂದ ಬಳಿಕ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘೋರ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ (Pavagada News) ಕಡಪಲ ಕೆರೆ ಗ್ರಾಮದಲ್ಲಿ ಶನಿವಾರ ನಡೆದಿದೆ. ಒಂದೂವರೇ ವರ್ಷ ಹಾಗೂ ನಾಲ್ಕು ವರ್ಷದ ಮಗುವಿನ ಕತ್ತು ಕೊಯ್ದು ಸಾಯಿಸಿದ ನಂತರ ತಾಯಿ ಸರಿತಾ (25) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಗಂಡ ಸಂತೋಷ್, ಲಗೇಜ್ ಆಟೋ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ. ಅತ್ತೆ ಖಾಸಗಿ ಕೆಲಸ ಮಾಡುತ್ತಿದ್ದರು ಎಂಬುದಾಗಿ ತಿಳಿದು ಬಂದಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮಧುಗಿರಿ ಡಿವೈಎಸ್ಪಿ ಮಂಜುನಾಥ್ ಹಾಗೂ ಸ್ಥಳೀಯ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಈ ಸುದ್ದಿಯನ್ನೂ ಓದಿ | Murder Case: ಸಹೋದರನ ಆತ್ಮಹತ್ಯೆ; ತಂದೆ ಮೇಲಿನ ಸೇಡಿಗಾಗಿ ಮಗಳನ್ನು ಕೊಂದ ಪಾಪಿ!

ಕೋರ್ಟ್ ಆವರಣದಲ್ಲೇ ಪತ್ನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಪತಿ!

ದಾವಣಗೆರೆ: ಕೋರ್ಟ್ ಆವರಣದಲ್ಲೇ ವ್ಯಕ್ತಿಯೊಬ್ಬ ಪತ್ನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ (Stabbing Case) ದಾವಣಗೆರೆಯಲ್ಲಿ ನಡೆದಿದೆ. ನಗರದ ಕೌಟುಂಬಿಕ ನ್ಯಾಯಾಲಯದ ಆವರಣದಲ್ಲಿ ಈ ಘಟನೆ ನಡೆದಿದೆ. ಪತ್ನಿಗೆ ಚಾಕುವಿನಿಂದ ಇರಿದ ಬಳಿಕ ತಾನೂ ಕೈಗೆ ಇರಿದುಕೊಂಡು ಪತಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಪತ್ನಿ ಪವಿತ್ರಾ ಮೇಲೆ ಪತಿ ಪ್ರವೀಣ್ ಚಾಕುವಿನಿಂದ ಇರಿದು ಹಲ್ಲೆಗೈದಿದ್ದಾನೆ. ಈ ಘಟನೆಯಲ್ಲಿ ಗಾಯಗೊಂಡ ಪತ್ನಿ ಪವಿತ್ರಾ ಹಾಗೂ ಪತಿ ಪ್ರವೀಣ್‌ನನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ದಾವಣಗೆರೆಯ ಜಾಲಿನಗರದ ನಿವಾಸಿ ಪ್ರವೀಣ್, ಬೆಂಗಳೂರು ಮೂಲದ ಪವಿತ್ರಾ ಜತೆ ಮದುವೆಯಾಗಿದ್ದ. ಪರಸ್ಪರ ಪ್ರೀತಿಸಿದ್ದ ಇವರು ಅಂತರ್ಜಾತಿ ವಿವಾಹ ಆಗಿದ್ದರು. ಆದರೇ ಶೀಲ ಶಂಕಿಸಿದ್ದ ಕಾರಣ ಕೆಲ ದಿನಗಳ ಹಿಂದೆ ಪತ್ನಿ ಪವಿತ್ರಾ ಗಂಡನನ್ನು ತೊರೆದು ಹೋಗಿದ್ದರು. ಇಂದು ನ್ಯಾಯಾಲಯದಲ್ಲಿ ವಿಚಾರಣೆ ಇರುವ ಕಾರಣ ದಂಪತಿ ಕೋರ್ಟ್‌ಗೆ ಆಗಮಿಸಿದ್ದರು. ಈ ವೇಳೆ ಪತ್ನಿಗೆ ಪ್ರವೀಣ್‌ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ.