ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಎಚ್​.ಡಿ.ಕೆ ಬೆಂಗಾವಲು ವಾಹನ ಅಪಘಾತ: ಮೂವರಿಗೆ ಗಾಯ

ಎಚ್​.ಡಿ.ಕೆ ಬೆಂಗಾವಲು ವಾಹನ ಅಪಘಾತ: ಮೂವರಿಗೆ ಗಾಯ

image-ad192fca-94f4-4ac6-81e1-278435638ab3.jpg
ತುಮಕೂರು: ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರ ಬೆಂಗಾವಲು ವಾಹನ ಅಪಘಾತಕ್ಕೀಡಾಗಿದ್ದು, ಮೂವರು ಪೊಲೀಸ್​ ಸಿಬ್ಬಂದಿ ಗಾಯಗೊಂಡಿದ್ದಾರೆ. ಕುಣಿಗಲ್ ತಾಲ್ಲೂಕಿನ ತಿಪ್ಪೂರು ಗೇಟ್ ಬಳಿ ತಡರಾತ್ರಿ ಒಂದು ಗಂಟೆ ಸುಮಾರಿಗೆ ಘಟನೆ ನಡೆದಿದೆ. ಮಂಗಳೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಬೆಂಗಾವಲು ವಾಹನ ರಸ್ತೆಯ ತಡೆಗೋಡೆಗೆ ಗುದ್ದಿ ರಸ್ತೆಯಿಂದಾಚೆಗೆ ನುಗ್ಗಿದೆ. ಪರಿಣಾಮ ವಾಹನದಲ್ಲಿದ್ದ ಐವರಲ್ಲಿ ಮೂವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪೋಲಿಸ್ ಸಿಬ್ಬಂದಿ ಮಹೇಶ್, ಮಂಜುನಾಥ್ ಹಾಗೂ ಆನಂದ್ ಹರೀಶ್​ ಎಂಬುವರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಅಮೃತ್ತೂರು ಪೋಲಿಸರು ಭೇಟಿ‌ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.