ತಿಪಟೂರು: ಯುವಕನೋರ್ವ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ತಿಪಟೂರು ತಾಲೂಕಿನ (Tiptur News) ಹೊನ್ನವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗುರುಗದಹಳ್ಳಿಯಲ್ಲಿ ಜರುಗಿದೆ. ಅರಸೀಕೆರೆ ತಾಲೂಕಿನ ಬೆಳಗುಂಬ ಗ್ರಾಮದ ಹರ್ಷ ಬಿ.ಪಿ (25) ಮೃತ ಯುವಕ ಎಂದು ಗುರುತಿಸಲಾಗಿದೆ.
ಬೆಂಗಳೂರಿನ ನಾಗಸಂದ್ರದಲ್ಲಿ ತರಕಾರಿ ಮಾರಿಕೊಂಡು ಜೀವನ ಸಾಗಿಸುತ್ತಿದ್ದ ಮೃತ ಯುವಕ ಹರ್ಷ ಕುಟುಂಬಸ್ಥರು ಹಲವು ವರ್ಷಗಳಿಂದ ಬೆಂಗಳೂರಿನಲ್ಲೇ ವಾಸವಾಗಿದ್ದರು. ಈತ ಕಳೆದ ಆರು ವರ್ಷದ ಹಿಂದೆ ತಿಪಟೂರು ತಾಲೂಕಿನ ಗುರುಗದಹಳ್ಳಿಗೆ ದೇವರ ಕಾರ್ಯಕ್ಕೆಂದು ಹೋದಾಗ ಅದೇ ಗ್ರಾಮದ ಭೂಮಿಕಾ ಎಂಬ ಯುವತಿಯ ಪರಿಚಯವಾಗಿದ್ದು, ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಜು.18 ರಂದು ತನ್ನ ಸಹೋದರನು ಊರಿಗೆ ಹೋಗಿ ಬರುವುದಾಗಿ ತಿಳಿಸಿ ಹೋಗಿದ್ದು, ಜು.20 ರಂದು ಗುರುಗದಹಳ್ಳಿಯ ಮನೆಯೊಂದರ ಹಿತ್ತಲಿನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ ಎಂದು ಮೃತ ಯುವಕನ ಸಹೋದರ ರಾಕೇಶ್, ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮನೆಗೆ ಆಧಾರವಾಗಿದ್ದ ಹಿರಿಯ ಮಗನ ಸಾವಿನಿಂದಾಗಿ ಕುಟುಂಬವೇ ಕುಗ್ಗಿ ಹೋಗಿದೆ. ನನ್ನ ಅಣ್ಣನ ಸಾವು ಅನುಮಾನಾಸ್ಪದವಾಗಿದ್ದು, ಅಣ್ಣನ ಸಾವಾಗಿ ವಾರ ಕಳೆದರೂ ಪೊಲೀಸರು ಈವರೆಗೂ ಆ ಹುಡುಗಿ ಮನೆಯವರನ್ನು ಕರೆಸಿ ತನಿಖೆ ನಡೆಸುತ್ತಿಲ್ಲ ಎಂದು ಮೃತ ಯುವಕನ ಸಹೋದರ ರಾಕೇಶ್ ಆರೋಪಿಸಿದ್ದಾರೆ. ಈ ಕುರಿತು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಬೀದಿನಾಯಿಗಳ ಬರ್ಬರ ದಾಳಿಗೆ ವೃದ್ಧ ಬಲಿ
ಬೆಂಗಳೂರು: ಬೆಂಗಳೂರಿನಲ್ಲಿ (Bengaluru News) ಬೀದಿ ನಾಯಿಗಳ ದಾಳಿಗಳು (Street Dog attack) ಹೆಚ್ಚು ಹೆಚ್ಚು ಮಾರಕವಾಗುತ್ತಿದ್ದು, ಇವುಗಳ ದಾಳಿಗೆ ಹಿರಿಯ ನಾಗರಿಕರೊಬ್ಬರು (Senior citizen) ಬಲಿಯಾಗಿದ್ದಾರೆ. 71 ವರ್ಷದ ಸೀತಪ್ಪ ಎನ್ನುವ ವೃದ್ಧರ ಮೇಲೆ ಬೀದಿನಾಯಿಗಳು ಬರ್ಬರವಾಗಿ ದಾಳಿಯೆಸಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು (death) ಸಾವನ್ನಪ್ಪಿದ್ದಾರೆ. ಕೊಡಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ನಿನ್ನೆ ಬೆಳಿಗ್ಗೆ ವಾಕಿಂಗ್ ಹೋಗುತ್ತಿದ್ದಾಗ ಸೀತಪ್ಪ ಅವರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ಓಡಲಾಗದೆ ಬಿದ್ದ ವೃದ್ಧ ಸೀತಪ್ಪ ಅವರ ಕೈ ಕಾಲು ಮತ್ತು ಮುಖಕ್ಕೆ ಬೀದಿ ನಾಯಿಗಳು ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ್ದವು. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ಒಯ್ಯಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿ ಆಗದೆ ಸೀತಪ್ಪ ಕೊನೆಯುಸಿರೆಳೆದಿದ್ದಾರೆ.
ಈ ಸುದ್ದಿಯನ್ನೂ ಓದಿ | Digital Arrest: ಅಶ್ಲೀಲ ಫೋಟೋ ವೈರಲ್ ಮಾಡುವ ಬೆದರಿಕೆ; 3 ತಿಂಗಳಲ್ಲಿ 19 ಕೋಟಿ ರೂ ಕಳೆದುಕೊಂಡ ವೈದ್ಯೆ