Tumkur News: ದೇಶವೇ ಶೋಕಾಚರಣೆಯಲ್ಲಿರುವಾಗ ಸಿಪಿಐಗೆ ಅದ್ಧೂರಿ ಬೀಳ್ಕೊಡುಗೆ!
Tumkur News: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರು ಉಗ್ರರ ದಾಳಿಯಲ್ಲಿ ಮೃತಪಟ್ಟು ಇಡೀ ದೇಶ ಶೋಕಚರಣೆಯಲ್ಲಿರುವಾಗ, ತುಮಕೂರಿನಿಂದ ವರ್ಗಾವಣೆಯಾಗಿರುವ ಸಿಪಿಐ ಗೆ ತೆರೆದ ಜೀಪಿನಲ್ಲಿ ರೋಡ್ ಶೋ ಮಾಡಿ, ಅದ್ಧೂರಿಯಾಗಿ ಬೀಳ್ಕೊಡುಗೆ ಆಚರಿಸಿಕೊಂಡಿರುವ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
-
Siddalinga Swamy
Apr 24, 2025 7:45 PM
ತುಮಕೂರು: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರು ಉಗ್ರರ ದಾಳಿಯಲ್ಲಿ (Pahalgam Terror Attack) ಮೃತಪಟ್ಟು ಇಡೀ ದೇಶ ಶೋಕಚರಣೆಯಲ್ಲಿರುವಾಗ, ತುಮಕೂರಿನಿಂದ ವರ್ಗಾವಣೆಯಾಗಿರುವ ಸಿಪಿಐಗೆ ತೆರೆದ ಜೀಪಿನಲ್ಲಿ ರೋಡ್ ಶೋ ಮಾಡಿ, ಅದ್ಧೂರಿಯಾಗಿ ಬೀಳ್ಕೊಡುಗೆ ಆಚರಿಸಿಕೊಂಡಿರುವ ಬಗ್ಗೆ ಟೀಕೆ ವ್ಯಕ್ತವಾಗಿದೆ. ತುಮಕೂರು ನಗರ ಸಿಪಿಐ ಆಗಿದ್ದ ದಿನೇಶ್ ಕುಮಾರ್ ಇತ್ತೀಚೆಗೆ ಕುಶಾಲನಗರಕ್ಕೆ ವರ್ಗಾವಣೆಯಾಗಿದ್ದರು. ಇದರ ಅಂಗವಾಗಿ ಬುಧವಾರ ರಾತ್ರಿ ಅಭಿಮಾನಿ ಬಳಗದ ವತಿಯಿಂದ ತೆರೆದ ಜೀಪಿನಲ್ಲಿ ಬೃಹತ್ ಹಾರ ತುರಾಯಿಗಳೊಂದಿಗೆ ಮೆರವಣಿಗೆ ಮಾಡಿ, ಬೀಳ್ಕೊಡುಗೆ ನೀಡಲಾಗಿದೆ.
ಇಡೀ ದೇಶ ಶೋಕದಲ್ಲಿರುವಾಗ ಸಿಪಿಐಗೆ ತೆರೆದ ಜೀಪಿನಲ್ಲಿ ರೋಡ್ ಶೋ ಮಾಡಿ, ಅದ್ಧೂರಿಯಾಗಿ ಬೀಳ್ಕೊಡುಗೆ ಸಮಾರಂಭ ಆಚರಿಸಿಕೊಂಡ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Pahalgam Terror Attack: ಪಾಕ್ ಪ್ರೇರಿತ ಭಯೋತ್ಪಾದನಾ ಕೃತ್ಯಕ್ಕೆ ಪ್ರತೀಕಾರ ಶತಸಿದ್ಧ: ಪ್ರಲ್ಹಾದ್ ಜೋಶಿ