Vinay Guruji: ನಮಗೆ ಬೇಕಿರುವುದು ಗಾಂಧಿ ನೋಟಲ್ಲ, ಗಾಂಧಿ ಆದರ್ಶಗಳು: ವಿನಯ್ ಗುರೂಜಿ
Vinay Guruji: ತುಮಕೂರು ನಗರದ 1ನೇ ವಾರ್ಡಿನ ಮರಳೇನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಶಿವ ದೇವಾಲಯದ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ವಿನಯ್ ಗುರೂಜಿ ಅವರು ಮಾತನಾಡಿದ್ದಾರೆ. ಗಾಂಧೀಜಿಯವರ ಆದರ್ಶಗಳನ್ನು ಅಳವಡಿಸಿಕೊಂಡರೆ ಜೀವನ ಸುಗಮ ಮಾರ್ಗದಲ್ಲಿ ಸಾಗುತ್ತದೆ ಎಂದು ಅವರು ತಿಳಿಸಿದ್ದಾರೆ.


ತುಮಕೂರು: ಪ್ರಪಂಚದಲ್ಲಿರುವುದು ಹೆಣ್ಣು, ಗಂಡು ಜಾತಿ ಮಾತ್ರ. ಜಾತಿಯಿಂದ ವ್ಯಕ್ತಿ ಶ್ರೇಷ್ಠನಾಗುವುದಿಲ್ಲ. ಅವನು ಮಾಡುವ ಒಳ್ಳೆ ಕೆಲಸದಿಂದ ಮಾದರಿಯಾಗುತ್ತಾನೆ ಎಂದು ವಿನಯ್ ಗುರೂಜಿ ತಿಳಿಸಿದರು. ನಗರದ 1ನೇ ವಾರ್ಡಿನ ಮರಳೇನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಶಿವ ದೇವಾಲಯದ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಅವರು ಮಾತನಾಡಿದ್ದು,ಧಾರ್ಮಿಕ ಕಾರ್ಯಗಳಿಂದ ಸಮಾಜಕ್ಕೆ ಒಳಿತಾಗುತ್ತದೆ. ಪ್ರತಿಯೊಬ್ಬರು ತಮ್ಮ ಕೈಲಾದ ಮಟ್ಟಿಗೆ ಧಾರ್ಮಿಕ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಕರೆ ನೀಡಿದರು.
ಮನುಷ್ಯ ಗಾಂಧೀಜಿ ಅವರ ನೋಟಿನ ಹಿಂದೆ ಓಡುತ್ತಿದ್ದಾನೆ. ಆದರೆ ನಮಗೆ ಬೇಕಿರುವುದು ಗಾಂಧೀಜಿಯವರ ಆದರ್ಶಗಳು. ಅವುಗಳನ್ನು ಅಳವಡಿಸಿಕೊಂಡರೆ ಜೀವನ ಸುಗಮ ಮಾರ್ಗದಲ್ಲಿ ಸಾಗುತ್ತದೆ ಎಂದರು.
ಮಕ್ಕಳು ಪೋಷಕರನ್ನು ಉತ್ತಮವಾಗಿ ನೋಡಿಕೊಳ್ಳಬೇಕು. ಶಿಕ್ಷಣವಂತರು ಹೆಚ್ಚಾಗುತ್ತಿದ್ದಾರೆ ಆದರೆ ಪೋಷಕರನ್ನು ಆರೈಕೆ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಹಣದಿಂದ ಮನುಷ್ಯನಿಗೆ ಗೌರವ ಲಭಿಸುವುದಿಲ್ಲ. ಅವನಲ್ಲಿರುವಂತಹ ಉತ್ತಮ ಮೌಲ್ಯಗಳಿಂದ ಗೌರವ ದೊರೆಯುತ್ತದೆ ಎಂದರು.
ಮಕ್ಕಳಿಲ್ಲದಿರುವ ತಾಯಿ ಬಂಜೆಯಲ್ಲ. ಹೆಣ್ಣು ಸಂಸ್ಕಾರವಂತರಾಗಬೇಕು. ಸಂಸ್ಕಾರ ಮರೆತರೆ ಒಳಿತಾಗುವುದಿಲ್ಲ. ಮೌಲ್ಯಗಳನ್ನು ಉಳಿಸುವಲ್ಲಿ ಉಳಿಸುವಲ್ಲಿ ಹೆಣ್ಣು ಮಕ್ಕಳ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಶ್ರೀದೇವಿ ಕಾಲೇಜಿನ ಆವರಣದಲ್ಲಿರುವ ಶ್ರೀ ಶಂಭುಲಿಂಗೇಶ್ವರ, ಶ್ರೀ ದುರ್ಗಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿ ಪೂಜಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಬಿಂದುಶೇಖರ ಸ್ವಾಮೀಜಿ, ರಾಜಣ್ಣ, ಡಾ. ಹುಲಿನಾಯ್ಕರ್, ಇಂದ್ರಕುಮಾರ್, ಶಿವಣ್ಣ, ಡಾ.ರಮಣ ಹುಲಿನಾಯ್ಕರ್, ಹರೀಶ್, ಪ್ರವೀಣ್, ಸಂತೋಷ್, ಯಶವಂತ್, ಯೋಗೀಶ್ ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು.
ಈ ಸುದ್ದಿಯನ್ನೂ ಓದಿ | Laxmi Hebbalkar: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಯಾವುದೇ ನೇಮಕಾತಿ ಇಲ್ಲ, ಮೋಸ ಹೋಗಬೇಡಿ: ಲಕ್ಷ್ಮಿ ಹೆಬ್ಬಾಳ್ಕರ್
ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ: ಜಪಾನಂದ ಸ್ವಾಮೀಜಿ

ತುಮಕೂರು: ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಗುಣಮಟ್ಟದ ಮೌಲ್ಯಯುತವಾದ ಶಿಕ್ಷಣವನ್ನು ನೀಡುತ್ತಿದೆ ಎಂದು ಶ್ರೀ ರಾಮಕೃಷ್ಣ ಸೇವಾಶ್ರಮ ಅಧ್ಯಕ್ಷರಾದ ಜಪಾನಂದ ಸ್ವಾಮೀಜಿ ಪ್ರಶಂಸೆ ವ್ಯಕ್ತಪಡಿಸಿದರು. ನಗರದ (Tumkur News) ಶೇಷಾದ್ರಿಪುರಂ ಪದವಿ ಕಾಲೇಜು ನ್ಯಾಕ್ ಬಿ++ ಶ್ರೇಣಿ ಪಡೆದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಂತೋಷಕೂಟ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಶೇಷಾದ್ರಿಪುರಂ ಕಾಲೇಜು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಅತ್ಯಂತ ಗುಣಮಟ್ಟದ ಮತ್ತು ಮೌಲ್ಯಯುತವಾದ ಶಿಕ್ಷಣವನ್ನು ನೀಡುತ್ತಾ ಬಂದಿದೆ ಅದರ ಫಲವೇ ನ್ಯಾಕ್‌ನ ಮೊದಲ ಪ್ರಯತ್ನದಲ್ಲೇ ಬಿ++ ಶ್ರೇಣಿ ಪಡೆದುಕೊಂಡಿದೆ. ವಿದ್ಯಾರ್ಥಿಗಳನ್ನು ಮಾನವೀಯ ಮೌಲ್ಯಗಳೊಂದಿಗೆ ಸಮಾಜಮುಖಿಯಾಗಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇದೇ ನಿಟ್ಟಿನಲ್ಲಿ ಸಂಸ್ಥೆ ಮುಂದೆ ಸಾಗಲಿ ಎಂದರು.
ಇಂದು ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಿತರು ಜೀವನ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಮಾನವೀಯತೆ ಮನುಷ್ಯರಿಂದ ದೂರವಾಗುತ್ತಿದೆ. ಮೌಲ್ಯಯುತ ಮತ್ತು ಗುಣಮಟ್ಟದ ಶಿಕ್ಷಣದ ಕೊರತೆ ಇದೆಲ್ಲಕ್ಕೂ ಕಾರಣ ಈ ಹಿಂದೆ ನಳಂದ ವಿಶ್ವವಿದ್ಯಾನಿಲಯ ಸಾಮಾಜಿಕ ಕಾಳಜಿಯಿಂದ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿತ್ತು. ಇಂದು ಶೇಷಾದ್ರಿಪುರಂ ಶಿಕ್ಷಣ ದತ್ತಿ ಈ ಕೆಲಸ ಮಾಡುತ್ತಿದೆ ಎಂದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ನಾಡೋಜ ಡಾ.ಡಬ್ಲ್ಯೂ.ಪಿ .ಕೃಷ್ಣ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯೇ ನಮ್ಮ ಮುಖ್ಯ ಉದ್ದೇಶ. ಮೌಲ್ಯಯುತ ಶಿಕ್ಷಣದ ಕಡೆ ನಮ್ಮ ಸಂಸ್ಥೆ ಕಾಳಜಿ ವಹಿಸುತ್ತದೆ ಈ ಕಾರಣಕ್ಕಾಗಿಯೇ ತುಮಕೂರಿನ ನಮ್ಮ ಶೇಷಾದ್ರಿಪುರಂ ಕಾಲೇಜು, ತುಮಕೂರು ವಿಶ್ವವಿದ್ಯಾಲಯದಲ್ಲಿಯೇ ನ್ಯಾಕ್‌ಗೆ ಒಳಪಟ್ಟ ಮೊದಲ ಖಾಸಗಿ ಕಾಲೇಜು ಆಗಿ ಬಿ++ ಶ್ರೇಣಿ ಪಡೆದಿದೆ, ಇಂತಹ ಗುಣಮಟ್ಟದ ಶಿಕ್ಷಣಕ್ಕೆ ಶ್ರಮಿಸಿದ ಕಾಲೇಜಿನ ಪ್ರಾಂಶುಪಾಲ ಡಾ.ಜಗದೀಶ ಮತ್ತು ಅವರ ಸಿಬ್ಬಂದಿ ವರ್ಗದವರಿಗೆ ನಮ್ಮ ಸಂಸ್ಥೆ ಧನ್ಯವಾದಗಳನ್ನು ತಿಳಿಸುತ್ತದೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | IDBI Bank Recruitment 2025: ಐಡಿಬಿಐ ಬ್ಯಾಂಕ್‌ನಲ್ಲಿದೆ 119 ಹುದ್ದೆ; ಹೀಗೆ ಅಪ್ಲೈ ಮಾಡಿ
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಹೆಂಜಾರಪ್ಪ, ಧರ್ಮದರ್ಶಿಗಳಾದ ಲೋಕನಾಥ್, ಕೃಷ್ಣ ಸ್ವಾಮಿ, ಎಂ.ಎಸ್. ನಟರಾಜು ಮತ್ತು ಕಾಲೇಜಿನ ಗವರ್ನಿಂಗ್ ಕೌನ್ಸಿಲ್ ಅಧ್ಯಕ್ಷ ಡಬ್ಲ್ಯೂ.ಡಿ.ಅಶೋಕ್, ಅಂಗ ಸಂಸ್ಥೆಯ ಪ್ರಾಂಶುಪಾಲರು, ಮುಖ್ಯಸ್ಥರು, ಕಾಲೇಜು ಸಿಬ್ಬಂದಿ ವರ್ಗ ಹಾಗೂ ಇತರರು ಉಪಸ್ಥಿತರಿದ್ದರು.