ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆಲೂರಿನಲ್ಲೊಂದು ಆರೋಗ್ಯ ಜಗತ್ತು: ಚಿತ್ರಕೂಟ ಆಯುರ್ವೇದ

Pravasi Prapancha: ಉಡುಪಿ ಜಿಲ್ಲೆಯ ಕರಾವಳಿ ಸೊಬಗನ್ನು ತನ್ನೊಳಗೆ ಹೊತ್ತಿರುವ ಕುಂದಾಪುರ, ಕೋಡಿ ಬೀಚ್, ಮರವಂತೆ ಬೀಚ್‌ ಸೇರಿದಂತೆ ಕಡಲತೀರಗಳಿಗೆ ಹೆಸರು ಮಾಡಿದೆ. ಅರಬ್ಬಿ ಸಮುದ್ರಕ್ಕೆ ಸಮೀಪದಲ್ಲಿರುವ ಈ ಪ್ರದೇಶವು ಪ್ರಕೃತಿ ಪ್ರಿಯರು ಹಾಗೂ ಪ್ರವಾಸಿಗರಿಗೆ ವಿಭಿನ್ನ ಅನುಭವಗಳನ್ನು ನೀಡುತ್ತದೆ. ಹಾಲಾಡಿ, ಗಂಗೊಳ್ಳಿ, ತಲ್ಲೂರು ಮತ್ತು ಬಸ್ರೂರು ಪ್ರದೇಶಗಳು ಐತಿಹಾಸಿಕ ಹಾಗೂ ಸಾಂಸ್ಕೃತಿಕವಾಗಿ ಗುರುತಿಸಿಕೊಂಡಿದೆ. ಆದರೆ, ಕುಂದಾಪುರದ ಆಲೂರಿನಲ್ಲಿರುವ ಚಿತ್ರಕೂಟ ಆಯುರ್ವೇದ ಆರೋಗ್ಯ ಕೇಂದ್ರಕ್ಕೆ ದೇಶ ವಿದೇಶಗಳಿಂದಲೂ ಚಿಕಿತ್ಸೆಗಾಗಿ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ.

ಚಿತ್ರಕೂಟ ಆಯುರ್ವೇದ

ವೇಗದ ಜೀವನಶೈಲಿ, ಒತ್ತಡ, ಅನಿಯಮಿತ ಆಹಾರ ಪದ್ಧತಿ ಹಾಗೂ ದೈಹಿಕ ಚಟುವಟಿಕೆಯ ಕೊರತೆಯಿಂದ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಆಯುರ್ವೇದದ ಮಹತ್ವವೂ ಹೆಚ್ಚಾಗಿದೆ. ಸಾವಿರಾರು ವರ್ಷಗಳ ಪರಂಪರೆಯನ್ನು ಹೊಂದಿರುವ ಆಯುರ್ವೇದವು ಕೇವಲ ಕಾಯಿಲೆ ಬಂದಾಗ ಚಿಕಿತ್ಸೆ ಪಡೆಯುವ ಪದ್ಧತಿಯಾಗಿರದೆ, ಆರೋಗ್ಯವನ್ನು ಕಾಪಾಡಿಕೊಳ್ಳುವ ಜೀವನ ವಿಧಾನಕ್ಕೂ ಒತ್ತು ನೀಡುತ್ತದೆ. ಆಹಾರ, ನಿದ್ರೆ, ವ್ಯಾಯಾಮ, ದೈನಂದಿನ ಚಟುವಟಿಕೆಗಳು ಮತ್ತು ಮಾನಸಿಕ ನೆಮ್ಮದಿಯ ನಡುವೆ ಸಮತೋಲನ ಸಾಧಿಸುವುದಕ್ಕೆ ಆಯುರ್ವೇದದಲ್ಲಿ ಮಹತ್ವವಿದೆ. ಯೋಗ, ಧ್ಯಾನ, ಅಭ್ಯಂಗ, ಪಂಚಕರ್ಮದಂಥ ಪದ್ಧತಿಗಳೂ ಆಯುರ್ವೇದದ ವಿಶಾಲ ಪರಂಪರೆಯ ಭಾಗವಾಗಿವೆ. ಪ್ರಕೃತಿಗೆ ಹೊಂದಿಕೊಂಡ ಜೀವನಶೈಲಿ ಹಾಗೂ ವೈಯಕ್ತಿಕ ದೇಹಪ್ರಕೃತಿಗೆ ಅನುಗುಣವಾದ ಆರೈಕೆಯ ಕಲ್ಪನೆ ಇಂದಿನ 'ವೆಲ್‌ನೆಸ್‌' ಕ್ಷೇತ್ರದಲ್ಲೂ ಗಮನ ಸೆಳೆಯುತ್ತಿದೆ. ಅಂಥ ಚಿಕಿತ್ಸಾಲಯಗಳ ಸಾಲಿನಲ್ಲಿ ಪ್ರಮುಖವೆನಿಸಿಕೊಂಡಿರುವುದು ಕುಂದಾಪುರದ ಆಲೂರು ಸಮೀಪದ 'ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯ'.

ಖ್ಯಾತ ಆಯುರ್ವೇದ ತಜ್ಞ ಡಾ. ರಾಜೇಶ್ ಬಾಯರಿ 2008ರಲ್ಲಿ ಅಡಿಪಾಯ ಹಾಕಿ, 2010ರಲ್ಲಿ ಆರಂಭಿಸಿದ 'ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯ'ವು ಇಂದು 18 ಎಕರೆ ವಿಸ್ತಾರವಾದ ಹಸಿರು ಪರಿಸರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಪತ್ನಿ ಡಾ. ಅನುಲೇಖಾ ಬಾಯರಿ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದಲ್ಲಿ ವೈದ್ಯ ವೃತ್ತಿಯ ಜತೆಗೆ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇದುವರೆಗೆ ವಿಶ್ವದ 30ಕ್ಕೂ ಹೆಚ್ಚು ದೇಶಗಳ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆದಿರುವುದು ಹೆಮ್ಮೆಯ ವಿಚಾರ.

Chithrakoota

ವೃಕ್ಷೋದ್ಯಾನದಿಂದ ಆರಂಭವಾದ ಪಯಣ…

ಚಿತ್ರಕೂಟದ ವಿಶೇಷತೆ ಅದರ ಪ್ರಕೃತಿ ಆಧಾರಿತ ವಾತಾವರಣ. ಆಲೂರಿನಲ್ಲಿರುವ ಸುಮಾರು 18 ಎಕರೆಯ ಸ್ವಂತ ಜಾಗದಲ್ಲಿ ವಿವಿಧ ಔಷಧೀಯ ಸಸ್ಯಗಳು, ಮರ, ಗಿಡ, ಬಳ್ಳಿಗಳನ್ನು ಬೆಳೆಸುವ ಮೂಲಕ ಔಷಧ ಕಾಡನ್ನು ನಿರ್ಮಿಸುವ ಕನಸು ಕಂಡವರು ಡಾ. ರಾಜೇಶ್ ಬಾಯರಿ. ಚಿಕಿತ್ಸೆಗೆ ಅಗತ್ಯವಾದ ಔಷಧೀಯ ಸಸ್ಯಗಳಿಗೆ ಪ್ರಾಮುಖ್ಯ ನೀಡುವುದರ ಜತೆಗೆ ಎಲ್ಲ ಬಗೆಯ ಗಿಡ ಮರಗಳೂ ಇರಬೇಕೆನ್ನುವ ಉದ್ದೇಶದಿಂದ ಪುಟ್ಟದಾಗಿ ಪ್ರಾರಂಭವಾದ ಇವರ ವೃಕ್ಷೋದ್ಯಾನ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಸುಮಾರು 250ಕ್ಕೂ ಹೆಚ್ಚು ಔಷಧೀಯ ಸಸ್ಯಗಳನ್ನು ಇಲ್ಲಿ ಬೆಳೆಸಲಾಗಿದೆ.

ಬಾಗಿಲಿಲ್ಲದ ಭಗವಂತ; ಕುಣಿಗಲ್‌ನ ಬೆಟ್ಟದ ರಂಗನಾಥಸ್ವಾಮಿ

ಪ್ರಕೃತಿಯ ನಡುವೆ ಚಿಕಿತ್ಸೆ

ಚಿತ್ರಕೂಟದ ಪರಿಕಲ್ಪನೆಯ ಪ್ರಮುಖ ಅಂಶವೆಂದರೆ ಚಿಕಿತ್ಸೆ ನಡೆಯುವ ಪರಿಸರವೇ. ನಗರದ ಗದ್ದಲದಿಂದ ದೂರವಾಗಿ ಮರಗಳ ಹಸಿರು, ತಂಪಾದ ಗಾಳಿ ಮತ್ತು ಪಕ್ಷಿಗಳ ಕಲರವದ ನಡುವೆ ಆರೋಗ್ಯದತ್ತ ಗಮನ ಹರಿಸಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಸಂಸ್ಥೆಯು ತನ್ನನ್ನು ಸ್ಪಾ ಅಥವಾ ಐಷಾರಾಮಿ ರೆಸಾರ್ಟ್‌ಗಿಂತ ಭಿನ್ನವಾಗಿ, ಸಾಂಪ್ರದಾಯಿಕ ಆಯುರ್ವೇದ ಜೀವನಶೈಲಿಯನ್ನೇ ಅನುಭವಿಸುವ ಸ್ಥಳವಾಗಿ ಗುರುತಿಸಿಕೊಂಡಿದೆ. ಇಲ್ಲಿ ಆಹಾರ ಪದ್ಧತಿ, ಗಿಡಮೂಲಿಕೆಗಳು, ಯೋಗ, ಧ್ಯಾನ, ಉಸಿರಾಟದ ವ್ಯಾಯಾಮಗಳು, ಮಸಾಜ್ ಮತ್ತು ಪಂಚಕರ್ಮ ಸೇರಿದಂತೆ ವಿವಿಧ ಆಯುರ್ವೇದ ಚಿಕಿತ್ಸಾ ವಿಧಾನಗಳನ್ನು ಬಳಸಲಾಗುತ್ತಿದೆ. ವ್ಯಕ್ತಿಯ ದೇಹ ಪ್ರಕೃತಿಗೆ ಅನುಗುಣವಾಗಿ ಚಿಕಿತ್ಸಾ ಕ್ರಮ ರೂಪಿಸುವುದು ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ವಿಶೇಷತೆ.

Chithrakoota treatment

ಪಂಚಕರ್ಮದಿಂದ ಆಯುರ್ವೇದ ಚಿಕಿತ್ಸೆಗಳವರೆಗೆ

ಚಿತ್ರಕೂಟದಲ್ಲಿ ಪಂಚಕರ್ಮ ಸೇರಿದಂತೆ ಹಲವು ಸಾಂಪ್ರದಾಯಿಕ ಆಯುರ್ವೇದ ಚಿಕಿತ್ಸಾ ವಿಧಾನಗಳನ್ನು ನೀಡಲಾಗುತ್ತದೆ. ಶ್ವಾಸಕೋಶದ ಸಮಸ್ಯೆಗಳು, ಹೃದಯ ಸಂಬಂಧಿ ಕಾಯಿಲೆಗಳು, ಜೀವನಶೈಲಿ ಸಂಬಂಧಿತ ಆರೋಗ್ಯ ಸಮಸ್ಯೆಗಳು, ದೀರ್ಘಕಾಲದ ಕೀಲು, ಕುತ್ತಿಗೆ ಮತ್ತು ಬೆನ್ನು ನೋವು ಹಾಗೂ ನರ- ಸ್ನಾಯು ಸಂಬಂಧಿತ ಅಸ್ವಸ್ಥತೆಗಳು, ಮೂತ್ರ ಸಂಬಂಧಿತ ಮಾತ್ರವಲ್ಲದೇ ಸೌಂದರ್ಯವರ್ಧಕ ಚಿಕಿತ್ಸೆಗಳು ಸೇರಿದಂತೆ ಎಲ್ಲ ಆರೋಗ್ಯ ಸಮಸ್ಯೆಗಳಿಗೂ ಆಯಾ ವಿಭಾಗದ ಪರಿಣಿತ ವೈದ್ಯರ ಭೇಟಿಗೆ ಇಲ್ಲಿ ಅವಕಾಶವಿದ್ದು, ಮುಂಗಡವಾಗಿ ಬುಕಿಂಗ್‌ ಮಾಡಿಕೊಳ್ಳುವುದು ಅತಿ ಅಗತ್ಯವಾಗಿದೆ.

ಔಷಧದ ತೋಟ – ಇನ್‌ಹೌಸ್ ಫಾರ್ಮಸಿ

ಇನ್‌ಹೌಸ್ ಫಾರ್ಮಸಿ, ಇದು ಚಿತ್ರಕೂಟದ ಪ್ರಮುಖ ವಿಭಾಗ. ಸಂಸ್ಥೆಯ ಆವರಣದಲ್ಲಿ ಬೆಳೆಸುವ ಕೆಲವು ಔಷಧೀಯ ಸಸ್ಯಗಳನ್ನು ಬಳಸಿ ಔಷಧಿಗಳನ್ನು ತಯಾರಿಸಲಾಗುತ್ತದೆ. ಇದರಿಂದ ಔಷಧೀಯ ಸಸ್ಯಗಳ ಕೃಷಿ, ಸಂಸ್ಕರಣೆ ಮತ್ತು ಚಿಕಿತ್ಸೆಯ ನಡುವೆ ನೇರ ಸಂಪರ್ಕ ಕಲ್ಪಿಸಲಾಗುತ್ತಿದೆ. ಇದರ ಜತೆಗೆ ಸ್ಥಳೀಯವಾಗಿ ದೇಸೀ ಹಸುಗಳ ಫಾರ್ಮ್‌ ಕೂಡ ಇದ್ದು, ಹಾಲು, ತುಪ್ಪವನ್ನೂ ಚಿಕಿತ್ಸೆಯ ವೇಳೆ ಬಳಕೆ ಮಾಡಲಾಗುತ್ತಿದೆ. ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ತನ್ನದೇ ಬ್ರ್ಯಾಂಡ್‌ನ ಉತ್ಪನ್ನಗಳನ್ನೂ ಸಿದ್ಧಪಡಿಸಿದ್ದು, ನುಗ್ಗೆ ಸೊಪ್ಪಿನ ಹುಡಿ, ಆಮ್ಲಾ ಸ್ಕ್ವಾಶ್‌, ರಕ್ಷಕ್‌ ಹರ್ಬಲ್‌ ಟೀ, ಸ್ವಾಸ್ತ್ಯ ಟೀ, ಆಮ್ಲಾ ಜಾಮ್‌, ನ್ಯೂಟ್ರಿ ಮಿಕ್ಸ್‌, ಚಿತ್ರಕೂಟ ಶಿಶು ಪೋಷಕ್‌ ಶಕ್ತಿ ಮತ್ತು ಸಮೃದ್ಧಿಯಂಥ ಅನೇಕ ಉತ್ಪನ್ನಗಳು ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿದೆ.

Chithrakoota  Yoga

ಜೀವನಶೈಲಿಯ ಪಾಠ

ಚಿತ್ರಕೂಟದ ಚಿಕಿತ್ಸಾ ವಿಧಾನದಲ್ಲಿ ದಿನನಿತ್ಯದ ಚಟುವಟಿಕೆಗಳಿಗೂ ಮಹತ್ವ ನೀಡಲಾಗಿದೆ. ಪ್ರಸ್ತುತ ಸಂಸ್ಥೆಯ ವೇಳಾಪಟ್ಟಿಯ ಪ್ರಕಾರ ಬೆಳಗಿನ ಯೋಗ, ಆರೋಗ್ಯಕರ ಉಪಾಹಾರ, ಕಷಾಯ, ಧ್ಯಾನ, ಊಟ ಮತ್ತು ಸಂಜೆ ಚಟುವಟಿಕೆಗಳು ದಿನಚರಿಯ ಭಾಗವಾಗಿವೆ. ವಾರದ ವಿವಿಧ ದಿನಗಳಲ್ಲಿ ಆಯುರ್ವೇದ ಜ್ಞಾನ ಅಧಿವೇಶನ, ಔಷಧೀಯ ತೋಟದ ಭೇಟಿ, ಆರೋಗ್ಯಕರ ಆಹಾರ ತಯಾರಿಸುವ ತರಗತಿ, ಫಾರ್ಮಸಿ ಮತ್ತು ಗೋಶಾಲೆ ಭೇಟಿ, ಆರೋಗ್ಯ-ಕ್ಷೇಮ ಅಧಿವೇಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಹೀಗಾಗಿ ಇಲ್ಲಿ ಆರೋಗ್ಯವನ್ನು ಕೇವಲ ಔಷಧಿ ಅಥವಾ ಚಿಕಿತ್ಸೆಯ ದೃಷ್ಟಿಯಿಂದ ನೋಡುವ ಬದಲು ಆಹಾರ, ದಿನಚರಿ, ದೈಹಿಕ ಚಟುವಟಿಕೆ, ಮನಸಿನ ನೆಮ್ಮದಿ ಮತ್ತು ಪ್ರಕೃತಿಯ ಸಂಪರ್ಕದೊಂದಿಗೆ ನೋಡಲು ಪ್ರಯತ್ನಿಸಲಾಗಿದೆ.

ಪರಿಸರ ಸ್ನೇಹಿ ಚಿಂತನೆ

ಆಯುರ್ವೇದ ಮತ್ತು ಪ್ರಕೃತಿಯ ನಡುವಿನ ಸಂಬಂಧವನ್ನು ಕೇಂದ್ರವಾಗಿಟ್ಟುಕೊಂಡಿರುವ ಚಿತ್ರಕೂಟದಲ್ಲಿ ಪರಿಸರ ಸಂರಕ್ಷಣೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಸಂಸ್ಥೆಯ ಆವರಣದಲ್ಲಿ ಸೌರಶಕ್ತಿಯನ್ನು ಬಳಸಲಾಗುತ್ತಿದ್ದು, ಸ್ಥಳೀಯವಾಗಿ ದೊರೆಯುವ ತಾಜಾ ಹಣ್ಣು-ತರಕಾರಿಗಳಿಗೆ ಆದ್ಯತೆ ನೀಡಲಾಗುತ್ತದೆ.

ಸ್ಥಳೀಯ ಸಂಸ್ಕೃತಿಯ ಪರಿಚಯ

ಕುಂದಾಪುರ ಮತ್ತು ಸುತ್ತಮುತ್ತಲಿನ ಪ್ರದೇಶದ ಸಂಸ್ಕೃತಿಯನ್ನೂ ಚಿತ್ರಕೂಟದ ಅನುಭವದೊಂದಿಗೆ ಜೋಡಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಮನಸಿನ ನೆಮ್ಮದಿ ಹಾಗೂ ಆಧ್ಯಾತ್ಮಿಕ ಅನುಭವಕ್ಕಾಗಿ ಭಜನೆ, ಆಯುರ್ವೇದದ ಬಗೆಗೆ ಅರಿವು ನೀಡುವ ಕಾರ್ಯಾಗಾರಗಳು, ಆರೋಗ್ಯಕರ ಅಡುಗೆಯ ಬಗೆಗೆ ತರಬೇತಿ, ಹೆಲ್ತ್‌ ಹಾಗೂ ವೆಲ್‌ನೆಸ್‌ ಸೆಶನ್‌ಗಳು, ಸಾಂಸ್ಕೃತಿಕ ಸಂಜೆ, ಹವನ ಸೇರಿದಂತೆ ವಾರದ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಪ್ರವಾಸಿಗರು ಮತ್ತು ಚಿಕಿತ್ಸೆಗೆ ಬರುವವರಿಗೆ ಸ್ಥಳೀಯ ಸಂಸ್ಕೃತಿಯ ಪರಿಚಯ ಮಾಡಿಕೊಡುವ ಉದ್ದೇಶ ಎಲ್ಲರ ಗಮನಸೆಳೆದಿದೆ.

ಸರಳತೆಯಲ್ಲೇ ವಿಶೇಷತೆ

ಐಷಾರಾಮಿ ವಾತಾವರಣಕ್ಕಿಂತ ಪ್ರಕೃತಿ, ಆಯುರ್ವೇದ ಮತ್ತು ಸರಳ ಜೀವನಶೈಲಿಗೆ ಒತ್ತು ನೀಡುವ ಆರೋಗ್ಯ ಕೇಂದ್ರ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯ. ಆರೋಗ್ಯ ಚಿಕಿತ್ಸೆಯ ಜತೆಗೆ ನೆಮ್ಮದಿ, ಹಸಿರು ಪರಿಸರ, ಸಾಂಪ್ರದಾಯಿಕ ಆಹಾರ ಪದ್ಧತಿ ಮತ್ತು ಯೋಗ-ಧ್ಯಾನದ ಅನುಭವವನ್ನು ಬಯಸುವವರಿಗೆ ಆಲೂರಿನ ಚಿತ್ರಕೂಟ ವಿಭಿನ್ನ ಅನುಭವವನ್ನು ನೀಡುತ್ತದೆ. ಆಯುರ್ವೇದ ಚಿಕಿತ್ಸೆಗಳು ಮತ್ತು ಪಂಚಕರ್ಮ ಸೇರಿದಂತೆ ಯಾವುದೇ ವೈದ್ಯಕೀಯ ಚಿಕಿತ್ಸೆಗಳ ಕುರಿತು ಹೆಚ್ಚಿನ ಮಾಹಿತಿಗೆ ಸಂಸ್ಥೆಯ ಸಂಪರ್ಕ ವೆಬ್‌ಸೈಟ್‌ ಹಾಗೂ ಸಂಪರ್ಕ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.

Chithrakoota  Kundapura

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಸ್ಥಳ: ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯ

ಆಲೂರು, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ.

ದೂರವಾಣಿ: 8762220168

ಇನ್‌ಸ್ಟಾಗ್ರಾಮ್: @chithrakoota

ವೆಬ್‌ಸೈಟ್: chithrakoota.com

ರಾಮೋಜಿ ಫಿಲ್ಮ್‌ ಸಿಟಿ; ಸಿನಿಮಾ ನಗರಿಯಲ್ಲಿದೆ ಇಡೀ ಜಗತ್ತು

image

2010ರಿಂದಲೇ ನನ್ನ ಪೂರ್ವಜರ ಈ ಜಾಗದಲ್ಲಿ ಚಿತ್ರಕೂಟ ಆಯುರ್ವೇದ ಕೇಂದ್ರವನ್ನು ಪುಟ್ಟದಾಗಿ ಪ್ರಾರಂಭಿಸಿದ್ದೆ. ಇಂದು ಇದು 30ಕ್ಕೂ ಹೆಚ್ಚು ದೇಶಗಳಿಂದ ಚಿಕಿತ್ಸೆಗಾಗಿ ಬರುವವರ ಬಹುಬೇಡಿಕೆಯ ತಾಣವಾಗಿ ಗುರುತಿಸಿಕೊಂಡಿರುವುದು ಖುಷಿಯ ವಿಚಾರ. ಎಲ್ಲ ಆಯುರ್ವೇದ ಚಿಕಿತ್ಸಾಲಯಗಳಂತೆ ನಮ್ಮಲ್ಲೂ ಆಯುರ್ವೇದ, ಪಂಚಕರ್ಮ ಚಿಕಿತ್ಸೆಗಳು, ನ್ಯಾಚುರೋಪಥಿ ಚಿಕಿತ್ಸೆಗಳು ಲಭ್ಯವಿದ್ದು ವಾಸ್ತವ್ಯದ ಜತೆಗೆ ಚಿಕಿತ್ಸೆಗೆ ಹೆಚ್ಚಿನ ಅವಕಾಶವಿದೆ. ತಜ್ಞ ವೈದ್ಯರು ನಮ್ಮಲ್ಲಿರುವುದರಿಂದ ಪ್ರತಿಯೊಬ್ಬ ವ್ಯಕ್ತಿಯ ದೇಹಪ್ರಕೃತಿಯನ್ನು ತಿಳಿದು, ಸೂಕ್ತ ರೀತಿಯ ಪರಿಹಾರವನ್ನು ನೀಡಲಾಗುತ್ತದೆ.

- ಡಾ. ರಾಜೇಶ್‌ ಬಾಯರಿ, ಸಂಸ್ಥಾಪಕರು, ಚಿತ್ರಕೂಟ ಆಯುರ್ವೇದ

Ramesh Ballamoole

View all posts by this author