ಉಡುಪಿ: ಅಯೋಧ್ಯೆಯ ಭವ್ಯ ಐತಿಹಾಸಿಕ ಶ್ರೀರಾಮ ಮಂದಿರದ ವಿದ್ಯುದೀಕರಣ ಮತ್ತು ದೀಪಾಲಂಕಾರ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದ ಉದ್ಯಮಿ, ಬೆಂಗಳೂರಿನ ಶಂಕರ್ ಎಲೆಕ್ಟ್ರಿಕಲ್ಸ್ ಸಂಸ್ಥೆಯ ಸ್ಥಾಪಕ ರಾಜೇಶ್ ಶೆಟ್ಟಿ ಅವರಿಗೆ ಉಡುಪಿಯ ಪರ್ಯಾಯ ಶ್ರೀ ಪುತ್ತಿಗೆ ಮಠದ ವತಿಯಿಂದ ಶ್ರೀಕೃಷ್ಣಾನುಗ್ರಹ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಪ್ರಶಸ್ತಿ ನೀಡಿ ಆಶೀರ್ವದಿಸಿದರು.

ಉಡುಪಿ ಶ್ರೀಕೃಷ್ಣ ದೇವಸ್ಥಾನದಲ್ಲಿ ನಡೆದ ಪಾರ್ಥಸಾರಥಿ ಸುವರ್ಣ ರಥ ಮಹೋತ್ಸವದಲ್ಲಿ, ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರ ಸಾನ್ನಿಧ್ಯದಲ್ಲಿ ಶ್ರೀ ಕೃಷ್ಣಗೀತೆ ಅನುಗ್ರಹ ಪ್ರಶಸ್ತಿ ಸ್ವೀಕರಿಸುವ ಗೌರವ ನನಗೆ ಲಭಿಸಿರುವುದಕ್ಕೆ ಧನ್ಯನಾಗಿರುವೆ ಎಂದು ರಾಜೇಶ್ ಶೆಟ್ಟಿಯವರು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಅಯೋಧ್ಯೆ ರಾಮಮಂದಿರಕ್ಕೆ ಸಾರ್ವಜನಿಕರಿಂದ 3,000 ಕೋಟಿ ರೂ. ದೇಣಿಗೆ