ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Abhishek Death: ಅಭಿಷೇಕ್‌ ಆತ್ಮಹತ್ಯೆ: ಗೆಳತಿಯರ ಅರೆನಗ್ನ ಫೋಟೋ ಕಳಿಸುತ್ತಿದ್ದ ಹನಿಟ್ರ್ಯಾಪ್‌ ಯುವತಿಯ ಬಂಧನ

Honey Trap: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆಯ ಪರಪ್ಪಾಡಿ ನಿವಾಸಿ ಅಭಿಷೇಕ್ ಡೆತ್ ನೋ‌ಟ್‌ನಲ್ಲಿ ನಿರೀಕ್ಷಾ ಎಂಬಾಕೆಯ ಹೆಸರು ಬರೆದಿದ್ದು ಸಾವಿಗೆ ಶರಣಾಗಿದ್ದನು. ನಿರೀಕ್ಷಾ ತನ್ನ ರೂಮ್​​ ಮೇಟ್ ಯುವತಿಯರು ಬಟ್ಟೆ ಬದಲಿಸುವುದನ್ನು ರಹಸ್ಯವಾಗಿ ವಿಡಿಯೋ ಮಾಡಿಕೊಂಡು ವೈರಲ್ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಬಹಿರಂಗಗೊಂಡಿದೆ.

ಮೃತ ಅಭಿಷೇಕ್

ಮಂಗಳೂರು: ಮಂಗಳೂರಿನ (Mangaluru) ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ 26 ವರ್ಷದ ಯುವಕ ಅಭಿಷೇಕ್ (Abhishek Death) ತನ್ನ ಖಾಸಗಿ ವಿಡಿಯೋ ಬಳಸಿ ನಾಲ್ವರು ತನಗೆ ಬ್ಲ್ಯಾಕ್‌ಮೇಲ್ (Blackmail) ಮಾಡುತ್ತಿದ್ದಾರೆ ಎಂದು ಆರೋಪಿಸಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದನು. ಈ ಪ್ರಕರಣದ ತನಿಖೆ ಚುರುಕುಗೊಳಿಸಿದ್ದ ಮಂಗಳೂರಿನ ಕದ್ರಿ ಪೊಲೀಸರು ಯುವತಿಯೋರ್ವಳನ್ನು ಬಂಧಿಸಿದ್ದಾರೆ. ಈಕೆ ತನ್ನ ರೂಮ್‌ಮೇಟ್‌ಗಳ ಅರೆನಗ್ನ ಫೋಟೋ ವಿಡಿಯೋಗಳನ್ನು ರಹಸ್ಯವಾಗಿ ಮಾಡಿಕೊಂಡು ವೈರಲ್‌ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆಯ ಪರಪ್ಪಾಡಿ ನಿವಾಸಿ ಅಭಿಷೇಕ್ ಡೆತ್ ನೋ‌ಟ್‌ನಲ್ಲಿ ನಿರೀಕ್ಷಾ ಎಂಬಾಕೆಯ ಹೆಸರು ಬರೆದಿದ್ದು ಸಾವಿಗೆ ಶರಣಾಗಿದ್ದನು. ಹೀಗಾಗಿ ಪೊಲೀಸರು ಚಿಕ್ಕಮಗಳೂರಿನ ನಿರೀಕ್ಷಾಳನ್ನು ಬಂಧಿಸಿದ್ದಾರೆ. ನಿರೀಕ್ಷಾ ಹಾಗೂ ಇನ್ನಿಬ್ಬರು ಯುವತಿಯರು ಸೇರಿಕೊಂಡು ಕುದ್ಕೋರಿಗುಡ್ಡೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ನಿರೀಕ್ಷಾ ತನ್ನ ರೂಮ್​​ ಮೇಟ್ ಯುವತಿಯರು ಬಟ್ಟೆ ಬದಲಿಸುವುದನ್ನು ರಹಸ್ಯವಾಗಿ ವಿಡಿಯೋ ಮಾಡಿಕೊಂಡು ವೈರಲ್ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಬಹಿರಂಗಗೊಂಡಿದೆ. ನಿರೀಕ್ಷಾ ಈ ವಿಡಿಯೋಗಳನ್ನು ಅಭಿಷೇಕ್‌ಗೆ ಕಳುಹಿಸಿದ್ದಳು.

ಇದನ್ನೂ ಓದಿ: Self Harming: ಮಾಜಿ ಶಾಸಕ ದಿ. ಗೋಪಾಲ ಭಂಡಾರಿ ಪುತ್ರ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಅಭಿಷೇಕ್ truth group ಎಂಬ ವಾಟ್ಸಾಪ್ ಗುಂಪು ರಚಿಸಿ ಅದರಲ್ಲಿ ಈ ಯುವತಿಯರ ವಿಡಿಯೋ ಸೇರಿದಂತೆ ಕೆಲವು ವಿಡಿಯೋಗಳನ್ನು ಹಾಕಿದ್ದನು. ಈ ಘಟನೆಯಿಂದ ಆಘಾತಗೊಂಡ ಸಂತ್ರಸ್ತ ಯುವತಿಯರು ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಕದ್ರಿ ಪೊಲೀಸರು ನಿರೀಕ್ಷಾಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಅಭಿಷೇಕ್ ಡೆತ್ ನೋಟ್‌ನಲ್ಲಿ ಏನಿತ್ತು?

ಡೆತ್ ನೋಟ್‌ನಲ್ಲಿ, ತಾನು ಪ್ರೀತಿಸಿದ ಹುಡುಗಿ ನಿರೀಕ್ಷಾ, ಆಕೆಯ ತಂಡದಲ್ಲಿದ್ದ ಮಂಗಳೂರು ಮೂಲದ ರಾಕೇಶ್ ,ರಾಹುಲ್ ಹಾಗೂ ತಸ್ಲೀಮ್ ಸಾವಿಗೆ ಕಾರಣ ಎಂದು ಬರೆದಿದ್ದಾನೆ. ಅವರು ಹಣಕ್ಕಾಗಿ ತೀವ್ರ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾರೆ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾನೆ. ಅಲ್ಲದೆ ಇವರು ತಂಡವಾಗಿ ಅನೇಕ ಜನರನ್ನು ಅಶ್ಲೀಲ ಫೋಟೋ ಬಳಸಿ ವಂಚಿಸಿದ್ದಾರೆ ಅಂತಲೂ ದೂರಿದ್ದನು.

ಹರೀಶ್‌ ಕೇರ

View all posts by this author