ಕಾರವಾರ: ಸಿದ್ದಾಪುರ ವಸಂತ್ ನಾಯ್ಕ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಸುಚಿತ್ರಾ ನಾಯ್ಕ ಮತ್ತು ಜ್ಯೋತಿಷಿ ಕಮಲಾಕರ್ ಭಟ್ (astrologer Kamalakar Bhat) ಜೋಡಿಯ ಕರ್ಮಕಾಂಡಗಳು ಒಂದೊಂದೆ ಬಯಲಾಗುತ್ತಿವೆ. ಸುಚಿತ್ರಾ ಮೋಹಕ್ಕೆ ಸಿಲುಕಿದ್ದ ಗುರೂಜಿ ಆಕೆಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿ ಪ್ರೇಯಸಿ ಮುಂದೆ ಜ್ಯೋತಿಷಿ ಡ್ಯಾನ್ಸ್ ಮಾಡಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕೊಲೆ ಪ್ರಕರಣದಲ್ಲಿ ಜೈಲುಪಾಲಾಗುತ್ತಿದ್ದಂತೆಯೇ ಈ ಇಬ್ಬರ ಆಡಿಯೊ, ವಿಡಿಯೊಗಳು ಒಂದೊಂದೆ ಹೊರಬರುತ್ತಿವೆ. ಅದರಲ್ಲೂ ಸುಚಿತ್ರಾ ಮುಂದೆ ಕಮಲಾಕರ್ ಭಟ್ ಯಕ್ಷಗಾನ ನೃತ್ಯ ಮಾಡಿರುವುದು ಇದೀಗ ವೈರಲ್ ಆಗಿದೆ. ತನ್ನ ಮೈಮಾಟದಿಂದ ಕಮಲಾಕರ್ ಭಟ್‌ನನ್ನು ಬುಟ್ಟಿಗೆ ಹಾಕಿಕೊಂಡಿದ್ದ ಸುಚಿತ್ರಾ, ತನ್ನ ತಾಳಕ್ಕೆ ತಕ್ಕಂತೆ ಕುಣಿಸಿದ್ದಾಳೆ.
ಕಮಲಾಕರ ಭಟ್ ಈಕೆಯ ಹನಿಟ್ರ್ಯಾಪ್ ಬಲೆಗೆ ಬಿದ್ದಿದ್ದ. ಆಕೆಯ ನಡತೆ ಸರಿ ಇಲ್ಲ ಎಂದು ಗಂಡನೇ ಮಾಧ್ಯಮಗಳ ಮುಂದೆ ಹೇಳಿದ್ದರು. ಕಮಲಾಕರ ಭಟ್ ಅವರ ಖಾಸಗಿ ವಿಡಿಯೋಗಳನ್ನು ಇಟ್ಟುಕೊಂಡು ಈಕೆ ಆಟ ಆಡಿಸುತ್ತಿದ್ದಳು ಎನ್ನಲಾಗಿದೆ.
ನನ್ನ ಮಕ್ಕಳು ಹಾಗೂ ನಾನು ನಿನ್ನ ಜತೆಯಲ್ಲೇ ಇರುತ್ತೇವೆ. ಇದಕ್ಕೆ ನೀನು ಒಪ್ಪದೇ ಇದ್ದರೆ ನಿನ್ನ ವಿಡಿಯೋವನ್ನು ವೈರಲ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಳು ಎಂಬ ಮಾಹಿತಿ ಇದೆ. ಮರ್ಯಾದೆಗೆ ಅಂಜಿ ಜ್ಯೋತಿಷಿ ತನ್ನ ಜತೆಗೆ ಇರಿಸಿಕೊಂಡಿದ್ದು ಮಾತ್ರವಲ್ಲದೆ, ಆಕೆ ಏನು ಕೇಳಿದರೂ ಇಲ್ಲ ಅನ್ನದೇ ಕೊಡಿಸುತ್ತಿದ್ದ ಎಂದು ತಿಳಿದುಬಂದಿದೆ.
ಕಮಲಾಕರ್ ಭಟ್ ಜತೆ ಇದ್ದ ಖಾಸಗಿ ಕ್ಷಣಗಳ ವಿಡಿಯೊ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಸುಚಿತ್ರಾ, ನನ್ನನ್ನ ಬಿಟ್ಟು ಹೋದರೆ ವಿಡಿಯೊ ಹೊರಗಡೆ ಬಿಡುವುದಾಗಿ ಕಮಲಾಕರ್ ಭಟ್‌ಗೆ ಬೆದರಿಕೆ ಹಾಕುತ್ತಿದ್ದಳು. ಹೀಗಾಗಿ ಮರ್ಯಾದೆಗೆ ಅಂಜಿ ಸುಚಿತ್ರಾಳನ್ನು ಕಮಲಾಕರ್ ಭಟ್ ತನ್ನೊಟ್ಟಿಗೆ ಇಟ್ಟುಕೊಂಡಿದ್ದ ಎನ್ನಲಾಗಿದೆ.
ಅವನಿಗೆ ಹೆಂಡ್ತಿಯೂ ನಾನೇ, ಪ್ರೇಯಸಿಯೂ ನಾನೇ; ಸುಚಿತ್ರಾ-ಜ್ಯೋತಿಷಿ ಕಮಲಾಕರ್ ಭಟ್ ಲವ್ವಿ ಡವ್ವಿ ಆಡಿಯೊ ವೈರಲ್!
ಸುಚಿತ್ರಾಗಾಗಿ 50 ರಿಂದ 100 ಕೋಟಿ ಆಸ್ತಿ ಮಾಡಿ ಜ್ಯೋತಿಷಿ!
ಇನ್ನು ಕಮಲಾಕರ್ ಭಟ್ ಮಾತನಾಡಿರುವ ಮತ್ತೊಂದು ಆಡಿಯೊ ವೈರಲ್ ಆಗಿದ್ದು, ಅದರಲ್ಲಿ ಸುಚಿತ್ರಾಗಾಗಿ 50 ರಿಂದ 100 ಕೋಟಿ ಆಸ್ತಿಯನ್ನು ಮಾಡಿದ್ದೇನೆ ಎಂದು ಜ್ಯೋತಿಷಿ ಹೇಳಿದ್ದಾನೆ. ನಾನು ಸತ್ತರೂ ಬೇಜಾರಿಲ್ಲ, ಸುಚಿತ್ರಾಳಿಗಾಗಿ ಏನ್ ಬೇಕಾದರೂ ಮಾಡ್ತೀನಿ ಎಂದಿದ್ದಾನೆ. ನಾನು ಸುಚಿತ್ರಾಳನ್ನ ಮದುವೆ ಮಾಡಿಕೊಂಡು ಬಂದಿದ್ದೇನೆ. ಸುಚಿತ್ರಾ ಬಗ್ಗೆ ಮಾತಾಡಿದ್ದರೆ ಹುಷಾರ್ ಎಂದು ಶಿರಸಿ ಮಹಿಳೆಯೊಬ್ಬರಿಗೆ ಕಮಲಾಕರ್ ಭಟ್ ಆವಾಜ್ ಹಾಕಿರುವುದು ಆಡಿಯೊದಲ್ಲಿದೆ.