ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅವನಿಗೆ ಹೆಂಡ್ತಿಯೂ ನಾನೇ, ಪ್ರೇಯಸಿಯೂ ನಾನೇ; ಸುಚಿತ್ರಾ-ಜ್ಯೋತಿಷಿ ಕಮಲಾಕರ್‌‌ ಭಟ್‌‌ ಲವ್ವಿ ಡವ್ವಿ ಆಡಿಯೊ ವೈರಲ್‌!

ಜ್ಯೋತಿಷಿ ಕಮಲಾಕರ ಭಟ್‌ ಮತ್ತು ಸುಚಿತ್ರಾ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಸದ್ಯ ಎಲ್ಲೆಡೆ ವೈರಲ್‌ ಆಗುತ್ತಿದೆ. ಈ ಆಡಿಯೊದಲ್ಲಿ ಅಸಭ್ಯಕರವಾಗಿ ಇಬ್ಬರ ಸಂಭಾಷಣೆ ಇದೆ. ಇಬ್ಬರ ನಡುವಿನ ಸಂಬಂಧದ ಬಗ್ಗೆ ಮಹಿಳೆಯೊಬ್ಬರು ಪ್ರಶ್ನಿಸಿದಾಗ ಆರೋಪಿಗಳು ಮಾತನಾಡಿರುವ ಆಡಿಯೊ ಇದಾಗಿದೆ.

ಜ್ಯೋತಿಷಿ ಕಮಲಾಕರ್‌‌ ಭಟ್‌‌-ಸುಚಿತ್ರಾ ಲವ್ವಿ-ಡವ್ವಿ ಆಡಿಯೊ ವೈರಲ್‌!

-

Prabhakara R
Prabhakara R Feb 5, 2026 4:53 PM

ಕಾರವಾರ: ಸಿದ್ದಾಪುರದ ವಸಂತ್‌ ನಾಯ್ಕ್‌ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ಜ್ಯೋತಿಷಿ ಕಮಲಾಕರ ಭಟ್‌ (Kamalakar Bhat) ಮತ್ತು ಸುಚಿತ್ರಾ ನಾಯ್ಕ್‌ (Suchitra Naik) ಜೈಲು ಸೇರಿದ್ದಾರೆ. ಅರೆಸ್ಟ್‌ ಆದ ಬಳಿಕ ಆರೋಪಿಗಳ ಕುರಿತು ಹಲವು ಶಾಕಿಂಗ್‌ ವಿಚಾರಗಳು ಬಹಿರಂಗವಾಗಿದ್ದವು. ಆದರೆ, ಇದೀಗ ಇವರಿಬ್ಬರ ಲವ್ವಿ-ಡವ್ವಿಗೆ ಸಂಬಂಧಿಸಿ ಆಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಜ್ಯೋತಿಷಿ ಕಮಲಾಕರ ಭಟ್‌ ಮತ್ತು ಸುಚಿತ್ರಾ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಸದ್ಯ ಎಲ್ಲೆಡೆ ವೈರಲ್‌ ಆಗುತ್ತಿದೆ. ಈ ಆಡಿಯೊದಲ್ಲಿ ಅಸಭ್ಯಕರವಾಗಿ ಇಬ್ಬರ ಸಂಭಾಷಣೆ ಇದೆ. ಮಹಿಳೆಯೊಬ್ಬರು ಇವರ ಸಂಬಂಧದ ಬಗ್ಗೆ ಪ್ರಶ್ನಿಸಿದಾಗ ಕಮಲಾಕರ ಭಟ್‌ ಮತ್ತು ಸುಚಿತ್ರಾ ಅಶ್ಲೀಲವಾಗಿ ಮಾತನಾಡಿರುವುದು ಆಡಿಯೊದಲ್ಲಿದೆ.

ಆಡಿಯೊದಲ್ಲಿ ಏನಿದೆ?

ಇಲ್ಲಿ ಕೇಳು ಇಲ್ಲಿ. ಇನ್ನೊಂದು ವಿಚಾರ ನಿನಗೆ ಗೊತ್ತೋ ಇಲ್ವೋ ಗೊತ್ತಿಲ್ಲ ನಂಗೆ. ಇವಳೇ ನನ್ನ ಸರ್ವಸ್ವ, ಇವಳನ್ನ ಪಡೆಯಬೇಕು ಎಂದು ಅವಳು ಏನು ಮಾಡಿದ್ರೂ ಕೂಡ ನಾಯಿ ತರ ಅವಳ ಹಿಂದೆ ಓಡಾಡಿದವನು ನಾನು. ಅವಳು ನನ್ನ ಹಿಂದೆ ಬಂದವಳಲ್ಲ. ಅವಳಿಗೆ ಬೇಕು ಅಂದ್ರೆ ಚಿಟಿಕೆ ಹೊಡೆದ್ರೆ ಸಾವಿರಾರು ನಾಯಿಗಳು ಎದುರಿಗೆ ಬೌಬೌ ಅಂತ ಬರುತ್ತಿದ್ದವು. ಆದರೆ 4 ತಿಂಗಳ ಪರಿಶ್ರಮದ ಫಲವಾಗಿ ಭಗವಂತ ನನಗೆ ಕೊಟ್ಟ ಅಂದುಕೊಂಡಿದ್ದೀನಿ, ಗೊತ್ತಾಯ್ತಾ ಮೇಡಂ? ಎಂದು ಕಮಲಾಕರ್‌ ಭಟ್‌ ಮಾತನಾಡಿರುವುದು ಆಡಿಯೊದಲ್ಲಿದೆ.

ಈ ವೇಳೆ ಮಾತನಾಡಿರುವ ಸುಚಿತ್ರಾ, ಅವನಿಗೆ ಹೆಂಡತಿಯೂ ನಾನೇ, ಲವರ್‌ ಕೂಡ ನಾನೇ, ಎಲ್ಲವೂ ನಾನೇ. ಮನೆಯಲ್ಲಿ ಮಗಳು ಇಲ್ಲದಿದ್ದರೆ ನಮ್ಮ ಸುಖಕ್ಕೆ ಪಾರವೇ ಇಲ್ಲ. ನಮ್ಮ ವಿಷಯದಲ್ಲಿ ನೀನ್ಯಾಕೆ ಬರ್ತಿಯಾ? ಎಂದು ಮಹಿಳೆ ಜತೆ ಅಸಭ್ಯಕರವಾಗಿ ಮಾತನಾಡಿದ್ದಾಳೆ.



ಇನ್​ಸ್ಟಾಗ್ರಾಮ್​ನಲ್ಲಿ ಎರಡು ಖಾತೆ

ಆರೋಪಿ ಸುಚಿತ್ರಾ ಇನ್​ಸ್ಟಾಗ್ರಾಮ್​ನಲ್ಲಿ ಎರಡು ಖಾತೆ ಹೊಂದಿದ್ದಾಳೆ. ಈ ಪೈಕಿ ಒಂದು ಖಾತೆಯಲ್ಲಿ​ ನೊಂದ ಹೃದಯ, ಇಷ್ಟು ದಿನ ಪ್ರೀತಿ ಗೀತಿ, ಇನ್ಮೇಲೆ ಓನ್ಲಿ ಮನಿ ಎಂದು ಬಯೋ ಹಾಕಿಕೊಂಡಿದ್ದಾಳೆ.

ಸಿದ್ದಾಪುರ ಕೊಲೆ ಕೇಸ್‌; ಜ್ಯೋತಿಷಿ ಕಮಲಾಕರ ಭಟ್, ಸುಚಿತ್ರಾಗೆ 8 ದಿನ ನ್ಯಾಯಾಂಗ ಬಂಧನ

ಸುಚಿತ್ರಾ ಪತಿ ಬೆಂಗಳೂರಿನ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಈಕೆ ಸಿದ್ದಾಪುರದಲ್ಲಿ ಡ್ಯಾನ್ಸ್‌ ಕ್ಲಾಸ್‌ ನಡೆಸುತ್ತಿದ್ದಳು. ರೀಲ್ಸ್‌, ಡ್ಯಾನ್ಸ್ ಎಂದು ಐಷಾರಾಮಿ ಲೈಫ್ ಹಿಂದೆ ಬಿದ್ದ ಸುಚಿತ್ರಾ ಗಂಡನಿಂದ ದೂರ ಆಗಿ, ಕಮಲಾಕರ್ ಭಟ್‌ ಹಿಂದೆ ಬಿದ್ದಿದ್ದಳು. ಇದೀಗ ಬಾವನ ಕೊಲೆ ಕೇಸ್‌ನಲ್ಲಿ ಜ್ಯೋತಿಷಿ ಕಮಲಾಕರ್‌ ಭಟ್‌ ಜತೆ ಜೈಲು ಸೇರಿದ್ದಾಳೆ.