ಕಾರವಾರ: ಸಿದ್ದಾಪುರದ ವಸಂತ್ ನಾಯ್ಕ್ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ಜ್ಯೋತಿಷಿ ಕಮಲಾಕರ್ ಭಟ್ (Kamalakar Bhat) ಪ್ರೇಯಸಿ ಸುಚಿತ್ರಾಳ (Suchitra Naik) ಕಳ್ಳಾಟಗಳು ಒಂದೊಂದೆ ಬಯಲಾಗುತ್ತಿವೆ. ಜ್ಯೋತಿಷಿ ಜತೆ ಅನೈತಿಕ ಸಂಬಂಧ ಹೊಂದುವ ಮೊದಲು ಕಲಬುರಗಿಯ ಜಮೀನ್ದಾರನ ಜತೆ ಈಕೆ ಮೂರು ವರ್ಷ ಲವ್ವಿ ಡವ್ವಿ ಮಾಡಿದ್ದಳು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಕಲಬುರಗಿಯ ಜಮೀನ್ದಾರ ಶರಣಬಸಪ್ಪ ಎಂಬಾತನ ಜತೆ ಮೂರು ವರ್ಷ ಲಿವ್-ಇನ್‌ನಲ್ಲಿದ್ದ ಸುಚಿತ್ರಾ, ಆತನ ಹಣದಿಂದ ʼಅಪ್ಪು ಮೆಲೋಡಿಸ್ ಗುಲ್ಬರ್ಗʼ ಎಂಬ ಆರ್ಕೆಸ್ಟ್ರಾ ಮಾಡಿಕೊಂಡಿದ್ದಳು. ಇದೀಗ ಆ ಪ್ರಿಯಕರನ ಜತೆಗಿನ ಖಾಸಗಿ ಕ್ಷಣದ ಫೋಟೊಗಳು ವೈರಲ್ ಆಗುತ್ತಿವೆ.
ಕಲಬುರಗಿಗೆ ಹೋಗಿ ಆತನೊಂದಿಗೆ ಸುಚಿತ್ರಾ ಸುತ್ತಾಡುತ್ತಿದ್ದಳು. ಅಲ್ಲದೆ ಗಂಡನಿಲ್ಲದ ಸಂದರ್ಭದಲ್ಲಿ ಆತನನ್ನು ಮನೆಗೆ ಕರೆಸಿಕೊಳ್ಳುತ್ತಿದ್ದಳು. ಆತ ನೀಡಿದ ಹಣದಲ್ಲಿ ಸಿದ್ದಾಪುರದಲ್ಲಿ ಬಡ್ಡಿಗೆ ಹಣ ನೀಡುತ್ತಿದ್ದಳು.
ಸುಚಿತ್ರಾಗೆ ಜಮೀನ್ದಾರನ ಜತೆಗಿನ ಸಂಬಂಧದ ಬಗ್ಗೆ ಜ್ಯೋತಿಷಿ ಕಮಲಾಕರ್ ಭಟ್‌ಗೆ ತಿಳಿದು ಇಬ್ಬರ ನಡುವೆ ಮನಸ್ತಾಪ ಮೂಡಿತ್ತು. ಕೊನೆಗೆ ಜಮೀನ್ದಾರನ ಬಿಟ್ಟು ಜ್ಯೋತಿಷಿ ಕಮಲಾಕರ್ ಭಟ್ ಕೈ ಹಿಡಿದಿದ್ದಳು. ಸುಚಿತ್ರಾ ಹಣದ ದಾಹಕ್ಕೆ ಕಾರ್, ಬೈಕ್‌ಗಳನ್ನು ಉಡುಗೊರೆಯಾಗಿ ಕಮಲಾಕರ್ ಭಟ್ ನೀಡಿದ್ದ. ಪತ್ನಿಯ ಲಿವ್-ಇನ್ ರಿಲೇಷನ್‌ಗೆ ಬೇಸತ್ತು ಪತಿ ಮಹೇಶ್ ನಾಯ್ಕ ಜಗಳವಾಡಿದ್ದರು. ಕೊನೆಗೆ ಆರು ತಿಂಗಳಿಂದ ಪತ್ನಿಯಿಂದ ದೂರವಿದ್ದರು ಎಂದು ತಿಳಿದುಬಂದಿದೆ.
ಅವನಿಗೆ ಹೆಂಡ್ತಿಯೂ ನಾನೇ, ಪ್ರೇಯಸಿಯೂ ನಾನೇ; ಸುಚಿತ್ರಾ-ಜ್ಯೋತಿಷಿ ಕಮಲಾಕರ್ ಭಟ್ ಲವ್ವಿ ಡವ್ವಿ ಆಡಿಯೊ ವೈರಲ್!
ಇನ್ನು ಶಿವಮೊಗ್ಗದಲ್ಲಿ ಸುಚಿತ್ರಾಳ ಪತಿ ಹಾಗೂ ಮಗಳು ಮಾಧ್ಯಮಗಳ ಮುಂದೆ ನೀಡಿದ ಹೇಳಿಕೆಗಳು ಇನ್ನೂ ಹಲವರಿಗೆ ಸಂಕಷ್ಟ ತಂದಿದೆ. ಸುಚಿತ್ರಾಳ ಮೊಬೈಲ್ ಚೆಕ್ ಮಾಡಿದರೆ ಅವಳ ಬಗ್ಗೆ ಅಸಹ್ಯ ಆಗುತ್ತದೆ. ಬೇರೆ ಬೇರೆ ಹುಡುಗರ ಜತೆ ಅವಳು ಸಂಪರ್ಕದಲ್ಲಿ ಇದ್ದಳು ಎಂದು ಆಕೆಯ ಪತಿ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಕೆಲವರು ತಮ್ಮ ಇನ್‌ಸ್ಟಾಗ್ರಾಂ ಖಾತೆಗಳನ್ನು ಡಿಲಿಟ್ ಮಾಡಿಕೊಂಡರೆ, ಇನ್ನೂ ಕೆಲವರು ಮೊಬೈಲ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ತಮ್ಮ ಹೆಸರು ತನಿಖೆಯಲ್ಲಿ ಹೊರಬೀಳಬಹುದೆಂಬ ಆತಂಕದಲ್ಲಿ ಯುವಕರು ಸಿಲುಕಿದ್ದಾರೆ.