ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

School Bag: ಅತಿ ಭಾರದ ಶಾಲಾ ಬ್ಯಾಗ್‌ ಹೊತ್ತು ವಿದ್ಯಾರ್ಥಿಯ ಕೈ ಮುರಿತ!

ಕಾರವಾರದ ಸಮರ್ಥ್ ನಾಯ್ಕ್ ಕಾರವಾರದ ಖಾಸಗಿ ಶಾಲೆಯೊಂದರಲ್ಲಿ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಶಾಲೆಗೆ ಹೋಗಿದ್ದ ವಿದ್ಯಾರ್ಥಿ, ಶಿಕ್ಷಕರು ಹೆಚ್ಚು ಪುಸ್ತಕ ತರಲು ಹೇಳಿದ್ದರಿಂದ ಹೆಚ್ಚು ಭಾರದ ಪುಸ್ತಕಗಳನ್ನು ತುಂಬಿಕೊಂಡು ಭಾರವಾದ ಬ್ಯಾಗ್ ಹೊತ್ತು ಶಾಲೆಗೆ ತೆರಳಿದ್ದ. ಶಾಲೆಯಿಂದ ಮರಳಿ ಮನೆಗೆ ಬಂದಾಗ ವಿದ್ಯಾರ್ಥಿಯ ಬಲಗೈ ಭುಜ ಭಾಗದಲ್ಲಿ ತೀವ್ರ ಊತ ಕಂಡುಬಂದಿದೆ.

ಕೈ ಮುರಿದುಕೊಂಡ ವಿದ್ಯಾರ್ಥಿ

ಕಾರವಾರ, ಜ.09: ಅತಿ ಭಾರವಾದ ಶಾಲಾ ಬ್ಯಾಗ್ (School bag) ಹೊತ್ತುಕೊಂಡು ಹೋದ ಪರಿಣಾಮ 6ನೇ ತರಗತಿ ವಿದ್ಯಾರ್ಥಿಯೊಬ್ಬನ ಬಲಗೈ ಮುರಿದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಕಾರವಾರದಲ್ಲಿ ಬೆಳಕಿಗೆ ಬಂದಿದೆ. ಕಾರವಾರದ ಸಮರ್ಥ ನಾಯ್ಕ ಎಂಬ ವಿದ್ಯಾರ್ಥಿಯೇ ಬಾರವಾದ ಬ್ಯಾಗ್ ಹೊತ್ತುಕೊಂಡು ಹೋದ ಪರಿಣಾಮ ಕೈ ಮುರಿದುಕೊಂಡ ವಿದ್ಯಾರ್ಥಿ.

ಕಾರವಾರದ ಸಮರ್ಥ್ ನಾಯ್ಕ್ ಕಾರವಾರದ ಖಾಸಗಿ ಶಾಲೆಯೊಂದರಲ್ಲಿ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಶಾಲೆಗೆ ಹೋಗಿದ್ದ ವಿದ್ಯಾರ್ಥಿ, ಶಿಕ್ಷಕರು ಹೆಚ್ಚು ಪುಸ್ತಕ ತರಲು ಹೇಳಿದ್ದರಿಂದ ಹೆಚ್ಚು ಭಾರದ ಪುಸ್ತಕಗಳನ್ನು ತುಂಬಿಕೊಂಡು ಭಾರವಾದ ಬ್ಯಾಗ್ ಹೊತ್ತು ಶಾಲೆಗೆ ತೆರಳಿದ್ದ. ಶಾಲೆಯಿಂದ ಮರಳಿ ಮನೆಗೆ ಬಂದಾಗ ವಿದ್ಯಾರ್ಥಿಯ ಬಲಗೈ ಭುಜ ಭಾಗದಲ್ಲಿ ತೀವ್ರ ಊತ ಕಂಡುಬಂದಿದೆ.

ತಕ್ಷಣ ಆತಂಕಗೊಂಡ ಪೋಷಕರು ವಿದ್ಯಾರ್ಥಿಯನ್ನು ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯ ವೇಳೆ ವಿದ್ಯಾರ್ಥಿಯ ಬಲಗೈ ಮುರಿದಿರುವುದು ದೃಢಪಟ್ಟಿದೆ. ಈ ಘಟನೆ, ಸಣ್ಣ ಮಕ್ಕಳ ಮೇಲೆ ಅತಿಯಾದ ಪುಸ್ತಕಗಳ ಹಾಗೂ ಶಾಲಾ ಬ್ಯಾಗ್‌ನ ಹೊರೆ ಹೊರಿಸುತ್ತಿರುವ ಖಾಸಗಿ ಶಾಲೆಗಳ ಅಪಾಯಕಾರಿ ರೂಢಿಯ ಬಗ್ಗೆ ಪ್ರಶ್ನೆ ಎತ್ತುವಂತೆ ಮಾಡಿದೆ.

Rakshak Bullet: ಬಿಗ್‌ಬಾಸ್‌ ಖ್ಯಾತಿಯ ರಕ್ಷಕ್‌ ಬುಲೆಟ್‌ ಕಾರು ಡಿಕ್ಕಿಯಾಗಿ ಯುವಕನ ಕಾಲು ಮುರಿತ

ಹರೀಶ್‌ ಕೇರ

View all posts by this author