ಶಿರಸಿ/ಹಳಿಯಾಳ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿಂದು ಇ-ಸ್ವಚ್ಛತಾ ಅಭಿಯಾನ(E-Swachhta Abhiyan) ಹಮ್ಮಿಕೊಳ್ಳಲಾಗಿತ್ತು. ಮೂರು ದಿನಗಳವರೆಗೆ ಹಳಿಯಾಳ ದಾಂಡೇಲಿ, ಜೋಯಿಡಾ ತಾಲೂಕಿನ ನಗರ, ಗ್ರಾಮಗಳಲ್ಲಿ ಈ ಸ್ಛಚ್ಛತಾ ಕಾರ್ಯ ನಡೆಯಲಿದೆ.
ಶಾಸಕ ಆ ರ್ ವಿ ದೇಶಪಾಂಡೆ(MLA RV Deshpande) ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಹಾಕಿಕೊಟ್ಟ ಸ್ವಚ್ಛತೆಯ ಹಾದಿಯಲ್ಲಿ ನಾವು ಸಾಗಬೇಕು. ಸ್ವಚ್ಛತೆಯ ಕೆಲಸಕ್ಕೆ ಪೂರ್ಣ ವಿರಾಮ ಇರಬಾರದು. ಜನರ ಸಹಕಾರದೊಂದಿಗೆ ಪ್ರತಿ ಹಳ್ಳಿ, ಪಟ್ಟಣ, ಶೌಚಾಲಯ ಹಾಗೂ ಉದ್ಯಾನವನಗಳು ಸ್ವಚ್ಛವಾಗಿರಬೇಕು. ಸ್ವಚ್ಛತಾ ಅಭಿಯಾನವನ್ನು ನಾವು ಮಾ.30 ರಿಂದ ಏ.1 ರವರೆಗೆ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದೇವೆ.
ಹಳಿಯಾಳ ಕ್ಷೇತ್ರದ ಪಟ್ಟಣ ಪಂಚಾಯಿತಿಗಳು ಹಾಗೂ ದಾಂಡೇಲಿ ಪಟ್ಟಣದ ಪಂಚಾ ಯಿತಿ ವ್ಯಾಪ್ತಿಗಳಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಹಕಾರದೊಂದಿಗೆ ಈ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಇದನ್ನೂ ಓದಿ: Sirsi News: ಸಮಾಜದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಅನನ್ಯ: ಶಿರಸಿ ರಂಗಧಾಮದಲ್ಲಿ ಲೋಗೋ ಬಿಡುಗಡೆಗೊಳಿಸಿ ಶಾಸಕ ಭೀಮಣ್ಣ ನಾಯ್ಕ
ತಹಸೀಲ್ದಾರ್ ಫಿರೋಜ್ ಷಾ ಮಾತನಾಡಿ, ಗಾಂಧೀಜಿಯವರ ಸ್ವಚ್ಛತೆಯೇ ಸೇವೆ ಮತ್ತು ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಧ್ಯೇಯವಾಕ್ಯಗಳೊಂದಿಗೆ, ಮಾನ್ಯ ಶಾಸಕರ ಸೂಚನೆಯ ಮೇರೆಗೆ ಹಳಿಯಾಳ ತಾಲೂಕಿನ ಸಂಪೂರ್ಣ ಸ್ವಾಸ್ಥ್ಯಕ್ಕಾಗಿ ಈ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ. ಇದು ಕೇವಲ ಒಂದು ದಿನದ ಕಾರ್ಯಕ್ರಮವಲ್ಲ, ನಿರಂತರವಾಗಿ ಸ್ವಚ್ಛತೆಯನ್ನು ಕಾಯ್ದುಕೊಳ್ಳುವ ಗುರಿಯನ್ನು ಸರ್ಕಾರ ಮತ್ತು ಆಡಳಿತ ಹೊಂದಿದೆ.
ಹಳಿಯಾಳ ತಾಲೂಕಿನ ಸಾರ್ವಜನಿಕರು ಈ ಅಭಿಯಾನಕ್ಕೆ ಸಂಪೂರ್ಣವಾಗಿ ಸಹಕರಿಸ ಬೇಕೆಂದು ವಿನಂತಿಸುವುದಾಗಿ ತಿಳಿದರು.
ಸ್ಥಳೀಯ ಮಹಿಳೆ ಭಾರತಿ ಎಸ್ ಮಾತನಾಡಿ, ನಾವು ಪ್ರತಿ ವರ್ಷವೂ ಸ್ವಚ್ಛತಾ ಆಂದೋ ಲನದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದೇವೆ.
ಸ್ವಚ್ಛತೆಗೆ ನಾವು ಹೆಚ್ಚಿನ ಆದ್ಯತೆ ನೀಡಬೇಕು. ಎಲ್ಲಿ ಸ್ವಚ್ಛತೆ ಇರುತ್ತದೆಯೋ ಅಲ್ಲಿ ರೋಗ ರುಜಿನಗಳು ಇರುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಈ ಕಾರ್ಯಕ್ರಮದಲ್ಲಿ ಉತ್ಸಾಹ ದಿಂದ ಪಾಲ್ಗೊಂಡು ಇದನ್ನು ಯಶಸ್ವಿಗೊಳಿಸಬೇಕು.
ನಾವು ಕೇವಲ ಉದ್ಯಾನವನಗಳು ಅಥವಾ ದೇವಸ್ಥಾನಗಳ ಮುಂಭಾಗವನ್ನಷ್ಟೇ ಸ್ವಚ್ಛ ಗೊಳಿಸುವುದಲ್ಲ, ಮೊದಲು ನಮ್ಮ ಮನೆಯಿಂದಲೇ ಸ್ವಚ್ಛತೆಯನ್ನು ಪ್ರಾರಂಭಿಸಬೇಕು. ನಮ್ಮ ಮನೆ ಸ್ವಚ್ಛವಾಗಿದ್ದರೆ ಎಲ್ಲವೂ ಸುಂದರವಾಗಿ ಮತ್ತು ಆರೋಗ್ಯಕರವಾಗಿ ಇರುತ್ತದೆ ಎಂದರು.
ಈ ಸಂದರ್ಭದಲ್ಲಿ ಶಾಸಕರ ಧರ್ಮಪತ್ನಿ ಸಹ ಪಾಲ್ಗೊಂಡು ಶಾಸಕರ ಜತೆ ಕಸ ಗುಡಿದರು.