ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಧಿಕಾರಿಗಳ ಬೇಜವಾಬ್ದಾರಿಗೆ ಬೇಸತ್ತು ಹೊಂಡ ಮುಚ್ಚಿದ ಕಾನಸೂರು ಗ್ರಾಮಸ್ಥರು

ಸಿದ್ದಾಪುರ ತಾಲೂಕು ಕಾನಸೂರು ಬಳಿಯ ಜಾಗನಳ್ಳಿ ಕತ್ರಿಯಿಂದ ಅಜ್ಜೀಬಳದವರೆಗೆ ಬಾವಿ ಗಾತ್ರದ ಹೊಂಡಗಳು ಬಿದ್ದು ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿತ್ತು. ಇದನ್ನು ಮನಗಂಡ ಕಾನಸೂರಿನ ಕೆಲವು ಯುವಕರು ಮುಂದಾಗುವ ಅನಾಹುತವನ್ನು ತಡೆಯುವುದಕ್ಕೋಸ್ಕರ ಸ್ವಂತ ಕರ್ಚಿನಿಂದ ಜೆ.ಸಿ.ಬಿ. ತರಿಸಿ ಹೊಂಡ‌ಮುಚ್ಚುವ ಕಾರ್ಯವನ್ನು ಮಾಡಿದರು.

ಶಿರಸಿ: ಸ್ವತಃ ಅಧಿಕಾರಿಗಳ ವಾಹನವೇ ಧಡಲ್ ಭಡಲ್ ಎನ್ನುತ್ತ ಸಾಗುತ್ತಿದ್ದರೂ ಹೊಂಡ ಮುಚ್ಚಲು ಅಧಿಕಾರಿಗಳ ನಿರುತ್ಸಾಹ. ಇನ್ಬು ಸಾರ್ವಜನಿಕರ ವಾಹನದ ಸ್ಥಿತಿ ಏನಾಗಬೇಡ ? ರಸ್ತೆ ಹೊಂಡ ಮುಚ್ಚುವಂತೆ ಅಧಿಕಾರಿಗಳಲ್ಲಿ ವಿನಂತಿಸಿದ್ದರೂ ಸ್ಪಂದನೆ ಸಿಗದಿದ್ದಾಗ ಗ್ರಾಮಸ್ಥರೇ ಸ್ವತಃ ಹೊಂಡ ತುಂಬಿ ಅಧಿಕಾರಿಗಳಿಗೆ ತೋರಿಸಿದ್ದಾರೆ. ಸಾರ್ವಜನಿಕರೇ ಹೊಂಡ ತುಂಬಿದ ರಸ್ತೆಗಳಲ್ಲಿ ಈಗ ಅಧಿಕಾರಿಗಳ ವಾಹನವೂ ಸಾಗುತ್ತಿದೆ.

ಇದನ್ನೂ ಓದಿ: Sirsi news: ಉಂಚಳ್ಳಿ ಗ್ರಾಮ ಪಂಚಾಯತದ ನೂತನ ಕಟ್ಟಡ ಉದ್ಘಾಟನೆ

ಸಿದ್ದಾಪುರ ತಾಲೂಕು ಕಾನಸೂರು ಬಳಿಯ ಜಾಗನಳ್ಳಿ ಕತ್ರಿಯಿಂದ ಅಜ್ಜೀಬಳದವರೆಗೆ ಬಾವಿ ಗಾತ್ರದ ಹೊಂಡಗಳು ಬಿದ್ದು ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿತ್ತು. ಇದನ್ನು ಮನಗಂಡ ಕಾನಸೂರಿನ ಕೆಲವು ಯುವಕರು ಮುಂದಾಗುವ ಅನಾಹುತವನ್ನು ತಡೆಯುವುದಕ್ಕೋಸ್ಕರ ಸ್ವಂತ ಕರ್ಚಿನಿಂದ ಜೆ.ಸಿ.ಬಿ. ತರಿಸಿ ಹೊಂಡ‌ಮುಚ್ಚುವ ಕಾರ್ಯವನ್ನು ಮಾಡಿದರು.

ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಎಲ್.ಬಿ. ನಾಮಧಾರಿ, ವಿನೋದ ನಾಯ್ಕ, ಸುದರ್ಶನ, ನಾಗೇಂದ್ರ ನಾಯ್ಕ, ಅಶೋಕ‌ ನಾಯ್ಕ ಮುಂತಾದವರು ಪಾಲ್ಗೊಂಡಿದ್ದರು.