ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Self Harming: ಶೇರ್ ಮಾರ್ಕೇಟ್ ನಲ್ಲಿ ನಷ್ಟ: ಯುವಕ ನೇಣಿಗೆ ಶರಣು

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪಟ್ಟಣದಲ್ಲಿ ಯುವಕನೋರ್ವ ಶೇರ್ ಮಾರ್ಕೇಟ್ ನಲ್ಲಿ ಹಣ ಕಳೆದುಕೊಂಡ ಆಘಾತದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಿದ್ಧಾಪುರದ ಹರ್ಷವರ್ಧನ್ (22)ನೇಣಿಗೆ ಶರಣಾದ ಯುವಕ. ಸಿದ್ದಾಪುರದ ಮನೆಯಲ್ಲೇ ಫ್ಯಾನಿಗೆ ನೇಣು ಹಾಕಿಕೊಂಡ ಯುವಕ ಮೊಬೈಲ್ ಮೂಲಕ ಸ್ಟಾಕ್ ಎಕ್ಸ್‌ಚೇಂಜ್ ನಲ್ಲಿ ಟ್ರೇಡಿಂಗ್ ಮಾಡುತ್ತಿದ್ದನೆಂದು ತಿಳಿದು ಬಂದಿದೆ.

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪಟ್ಟಣದಲ್ಲಿ ಯುವಕನೋರ್ವ ಶೇರ್ ಮಾರ್ಕೇಟ್ ನಲ್ಲಿ ಹಣ ಕಳೆದುಕೊಂಡ ಆಘಾತದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಿದ್ಧಾಪುರದ ಹರ್ಷವರ್ಧನ್ (22)ನೇಣಿಗೆ ಶರಣಾದ ಯುವಕ. ಸಿದ್ದಾಪುರದ ಮನೆಯಲ್ಲೇ ಫ್ಯಾನಿಗೆ ನೇಣು ಹಾಕಿಕೊಂಡ ಯುವಕ ಮೊಬೈಲ್ ಮೂಲಕ ಸ್ಟಾಕ್ ಎಕ್ಸ್‌ಚೇಂಜ್ ನಲ್ಲಿ ಟ್ರೇಡಿಂಗ್ ಮಾಡುತ್ತಿದ್ದನೆಂದು ತಿಳಿದು ಬಂದಿದೆ.

ಇದನ್ನೂ ಓದಿ: Self Harming: ಮದುವೆಯಾಗಲಿಲ್ಲ ಅಂತ ನೊಂದು ತೆಂಗಿನಮರಕ್ಕೆ ನೇಣು ಹಾಕಿಕೊಂಡು ಯುವಕ ಆತ್ಮಹತ್ಯೆ

ಹರ್ಷವರ್ಧನ್ ಸ್ಟಾಕ್ ಎಕ್ಸ್‌ಚೇಂಜ್ ನಿಂದ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದು, ನಷ್ಟವನ್ನು ಮನಸ್ಸಿಗೆ ಹಚ್ಚಿಕೊಂಡು ನೇಣಿಗೆ ಕೊರಳೊಡ್ಡಿದ್ದಾನೆ.

ಹರ್ಷವರ್ಧನ್ ತಂದೆ ಚಂದ್ರಶೇಖರ್ ರಿಂದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.