ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gokarna News: ಸಂತೋಷದಲ್ಲಿ ಸಂದೇಶವಿರಲಿ: ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿ

ನಮ್ಮ ಅಂತರಂಗದಲ್ಲಿ ಅಸಂಖ್ಯಾತ ಬೆಳಕಿನ ಪುಂಜವಿದ್ದು ಅದನ್ನು ದಾಟಿ ಪರಂಜ್ಯೋತಿ ಇದೆ. ಅದನ್ನು ಸಾಕ್ಷಾತ್ಕರಿಸಿ ಕೊಳ್ಳಬೇಕು. ಅಂತರಂಗದ ಮಹಾ ಯಾತ್ರೆಯಲ್ಲಿ ಒಂದೊಂದು ಚಕ್ರಗಳು ಒಂದೊಂದು ನಿಲ್ದಾಣ ಗಳಿದ್ದಂತೆ. ಸಾಧಕನಿಗೆ ಎಲ್ಲವೂ ಅತಿ ಮುಖ್ಯವಾದವು. ಈ ಸಪ್ತ ಚಕ್ರಗಳು ಅಧ್ಯಾತ್ಮವನ್ನು ಮಾತ್ರ ಸೂಚಿಸದೇ ಲೌಕಿಕ ಬದುಕಿಗೂ ಸಹಕಾರಿ. ಅವುಗಳಿಲ್ಲದೇ ಬದುಕಿನ ಬಂಡಿ ಸಾಗದು

ಗೋಕರ್ಣ: ಏನನ್ನು ಕಲಿತರೂ ಸಂತೋಷದಿಂದ ಕಲಿಯಿರಿ, ಅದರಲ್ಲಿ ಬದುಕಿಗೆ ಬೇಕಾದ ಸಂದೇಶವಿರಲಿ. ಸಂದೇಶವಿಲ್ಲದ ಸಂತೋಷ ಅನಾಹುತಕ್ಕೆ ದಾರಿ ಎಂದು ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಸಂದೇಶ ನೀಡಿದರು.

ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠಮ್ ನ ಸಾರ್ವಭೌಮ‌ ಗುರುಕುಲದ ವಾರ್ಷಿಕೋತ್ಸವ ವಿದ್ಯಾಪರ್ವ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ನಮ್ಮ ಅಂತರಂಗದಲ್ಲಿ ಅಸಂಖ್ಯಾತ ಬೆಳಕಿನ ಪುಂಜವಿದ್ದು ಅದನ್ನು ದಾಟಿ ಪರಂಜ್ಯೋತಿ ಇದೆ. ಅದನ್ನು ಸಾಕ್ಷಾತ್ಕರಿಸಿ ಕೊಳ್ಳಬೇಕು. ಅಂತರಂಗದ ಮಹಾ ಯಾತ್ರೆಯಲ್ಲಿ ಒಂದೊಂದು ಚಕ್ರಗಳು ಒಂದೊಂದು ನಿಲ್ದಾಣ ಗಳಿದ್ದಂತೆ. ಸಾಧಕನಿಗೆ ಎಲ್ಲವೂ ಅತಿ ಮುಖ್ಯವಾದವು. ಈ ಸಪ್ತ ಚಕ್ರಗಳು ಅಧ್ಯಾತ್ಮವನ್ನು ಮಾತ್ರ ಸೂಚಿಸದೇ ಲೌಕಿಕ ಬದುಕಿಗೂ ಸಹಕಾರಿ. ಅವುಗಳಿಲ್ಲದೇ ಬದುಕಿನ ಬಂಡಿ ಸಾಗದು. ಸಾಧಕನನ್ನು ಪ್ರತಿಬಿಂಬಿಸುವ ಸಪ್ತಚಕ್ರದ ಮಾದರಿಯು ಗುರುಕುದ ಸ್ಥಾಪನೆಯ ಸಾರ್ಥಕತೆಯನ್ನು ಸಾರುತ್ತದೆ. ಎಂದು ವಿನೂತನವಾದ 'ಸಪ್ತಚಕ್ರ ಮಾದರಿ'ಯನನ್ನು ಉದ್ಘಾಟಿಸಿ ಆಶೀರ್ವದಿಸಿದರು.

ಕಾರ್ಯಕ್ರಮದ ಮುಖ್ಯಾಭ್ಯಾಗತ ಡಾ ಜಿ. ಜಿ ಸಭಾಹಿತ್ ರವರು ದೇಶ ಕಟ್ಟುವ ಶಿಕ್ಷಣ ಇಂದು ಬೇಕಾಗಿದ್ದು, ಇಲ್ಲಿ ಆ ಕಾರ್ಯ ನಡೆಯುತ್ತಿದೆ. ಉತ್ತಮ ಸಾಧನೆ ಮಾಡಿ, ನಿಮ್ಮೊಂದಿಗೆ ನಮ್ಮ ಟ್ರಸ್ಟ್ ಇದೆ ಎಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

ಇದನ್ನೂ ಓದಿ: Gokarna Punyashrama: ಅಹಮದಾಬಾದ್‌ ವಿಮಾನ ದುರಂತದಲ್ಲಿ ಮಡಿದವರಿಗೆ ಗೋಕರ್ಣ ಪುಣ್ಯಾಶ್ರಮದಿಂದ ಸದ್ಗತಿ ಕಾರ್ಯಕ್ರಮ

ಸುಸ್ಥಿರಾಭಿವೃದ್ಧಿಯ ಚಿಂತಕ ಡಾ. ಪ್ರಕಾಶ್ ಭಟ್ ಆಸ್ತಿ-ಹಣದ ಸಂಗ್ರಹತೆಯಲ್ಲಿ ಸಾರ್ಥಕತೆ ಇಲ್ಲ. ಆದರ್ಶ- ಮೌಲ್ಯಗಳ ಸಂಗ್ರಹಗಳ ಉತ್ಕೃಷ್ಟತೆಯಲ್ಲಿ ಸಾರ್ಥಕತೆ ಇದೆ ಎಂದರು. ಡಾ.‌ಜಿ.ಎಲ್ ಹೆಗಡೆ ಅಧ್ಯಕ್ಷತೆ ವಹಿಸಿ ನಮ್ಮ ಕಾರ್ಯವನ್ನು ಗುರುವು ಮೆಚ್ಚಿದಾಗ ಅದು ಸಮಾಜದಲ್ಲಿ ಪ್ರಶಂಸೆಗೆ ಪಾತ್ರವಾಗುತ್ತದೆ. ಗುರು ಸಂತೋಷಪಡಿಸುವ ಕಾರ್ಯ ನಿಮ್ಮದಾಗಲಿ ಎಂದರು.

Vidyaparva 2

ಈ ಸಂದರ್ಭದಲ್ಲಿ ಅಶೋಕಲೋಕದ ಮಂಜುನಾಥ ಭಟ್ಟ, ಸುವರ್ಣ ಗದ್ದೆ, ಎಲ್ಲ ಗುರಕುಲಗಳ ಪ್ರಾಚಾಯರ್ಯರು, ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಾಚಾರ್ಯೆ ಶ್ರೀಮತಿ ಶಶಿಕಲಾ ಕುರ್ಸೆ ಸ್ವಾಗತಿಸಿ, ಮುಖ್ಯ ಶಿಕ್ಷಕಿ ಶ್ರೀಮತಿ ಸೌಭಾಗ್ಯಾ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿ ದರು. ಕಿರಣ ಗುರುಕುಲಗಳ ಸಾಧನೆಯ ವರದಿ ವಾಚಿಸಿ,, ಮಂಜುನಾಥ ಭಟ್ಟ ವಂದಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೇ ಬರೆದು, ಸಂಗ್ರಹಿಸಿದ, ಬಿಡಿಸಿದ ಚಿತ್ರಗಳ "ವಿದ್ಯಾ ವಿಕಾಸ" ಪುಸ್ತಕದ ಅನಾವರಣ ಮತ್ತು ಪಠ್ಯ ಹಾಗೂ ಪಠ್ಯೇತರ ಚಟುವಟಕೆಗಳಲ್ಲಿ ಗುರುತರ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸುವ 'ಅಭಿನಂದನಮ್' ಆಯೋಜನೆಗೊಂಡಿತ್ತು.

ಪ್ರದರ್ಶನಗೊಂಡ ದೇಶಪ್ರೇಮ, ಗುರುಭಕ್ತಿ, ದೇವಭಾವ ಹಾಗೂ ಧರ್ಮನಿಷ್ಠೆ ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಪ್ರಶಂಸೆಗೆ ಪ್ರಾತ್ರವಾಗಿದ್ದು ಯಶಸ್ಸಿಗೆ ಮೆರುಗನ್ನು ನೀಡಿತು.