ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಪ್ರಪ್ರಥಮ ಅನಾಥ ಪ್ರಾಣಿ-ಪಕ್ಷಿಗಳ ರಕ್ಷಣಾ ಮತ್ತು ಪುನರ್ವಸತಿ ಕೇಂದ್ರವಾದ ಶಿರಸಿಯ "ಅಮೇಜಿಂಗ್ ಪೆಟ್ ಪ್ಲಾನೆಟ್" ನಮ್ಮ ಹೆಮ್ಮೆಯ ಸಂಸ್ಥೆಯಾಗಿದೆ ಎಂದು ಲೋಕಸಭಾ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ(MP Vishweshwar Hegde Kageri) ಅವರು ಪ್ರಶಂಸಿಸಿದ್ದಾರೆ.
ಭಾನುವಾರ ಸಂಸದರು ತಮ್ಮ ಊರಿನಿಂದ ಬರುತ್ತಿದ್ದ ಸಂದರ್ಭದಲ್ಲಿ, ರಸ್ತೆ ಬದಿಯ ಮರದ ಮೇಲಿನಿಂದ ಬಿದ್ದಿದ್ದ ಅಸ್ವಸ್ಥಗೊಂಡ ಪುಟ್ಟ ಗಿಳಿಮರಿಯನ್ನು ಗಮನಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅವರು, ಆ ಗಿಳಿಮರಿಯನ್ನು ಸ್ವತಃ ತಾವೇ ಅಮೇಜಿಂಗ್ ಪೆಟ್ ಪ್ಲಾನೆಟ್ ಸಂಸ್ಥೆಗೆ ತಲುಪಿಸುವ ಮೂಲಕ ಒಂದು ಜೀವ ಉಳಿಸಿ ಮಾನವೀಯತೆ ಮೆರೆದಿದ್ದಾರೆ.
ಇದನ್ನೂ ಓದಿ: Vishweshwar Hegde Kaageri: ರಾಜಕೀಯ ಭೀಷ್ಮನನ್ನು ಕಳೆದುಕೊಂಡಂತಾಗಿದೆ: ವಿಶ್ವೇಶ್ವರ ಹೆಗಡೆ ಕಾಗೇರಿ
ಕೇಂದ್ರಕ್ಕೆ ಭೇಟಿ ನೀಡಿದ ಸಂಸದರು, ಅಲ್ಲಿ ಆಶ್ರಯ ಪಡೆದಿರುವ ವಿವಿಧ ಅನಾಥ ಪ್ರಾಣಿ-ಪಕ್ಷಿಗಳನ್ನು ವೀಕ್ಷಿಸಿದರು. ತಮ್ಮ ಬಿಡುವಿಲ್ಲದ ಕಾರ್ಯಕಲಾಪಗಳ ನಡುವೆಯೂ ಅವು ಗಳೊಂದಿಗೆ ಸಮಯ ಕಳೆದ ಕಾಗೇರಿ ಅವರು, "ಅನಾಥ ಪ್ರಾಣಿಗಳಿಗಾಗಿ ನೀವು ಮಾಡು ತ್ತಿರುವ ಈ ಕಾರ್ಯ ನಿಜಕ್ಕೂ ಶ್ಲಾಘನೀಯ. ಇಂತಹ ಸಂಸ್ಥೆ ಇರುವುದು ನಮ್ಮ ಶಿರಸಿಗೆ ಹೆಮ್ಮೆಯ ವಿಷಯ" ಎಂದು ತಂಡವನ್ನು ಪ್ರೋತ್ಸಾಹಿಸಿದರು.
ಸಂಸದರ ಈ ಕಾಳಜಿಗೆ ಶ್ರೀ ಪದ್ಮ ಸೇವಾ ಟ್ರಸ್ಟ್‌ನ ಮುಖ್ಯಸ್ಥೆ ಪೂಜಾ ರಾಜ್ ಹಾಗೂ ಪ್ರಾಣಿ-ಪಕ್ಷಿ ತಜ್ಞ ಡಾ.ರಾಜೇಂದ್ರ ಸಿರ್ಸಿಕರ್ ಅವರು ಅಮೇಜಿಂಗ್ ಪೆಟ್ ಪ್ಲಾನೆಟ್ ವತಿಯಿಂದ ತುಂಬು ಹೃದಯದ ಧನ್ಯವಾದಗಳನ್ನು ಸಮರ್ಪಿಸಿದರು.