ಭಟ್ಕಳ: ರಾಜ್ಯ ಸರ್ಕಾರವು 2025ಸಾಲಿನ ಮುಖ್ಯಮಂತ್ರಿ ಪದಕ(Chief Minister Medal) ಪಟ್ಟಿ ಪ್ರಕಟಿಸಿದ್ದು, ಭಟ್ಕಳ ಶಹರಾ ಠಾಣೆಯ ಪಿ.ಎಸ್.ಐ ನವೀನ್ ಎಸ್ ನಾಯ್ಕ(PSI Naveen S Naik) ಗೌರವಕ್ಕೆ ಬಾಜನರಾಗಿದ್ದಾರೆ.
ಪೋಲಿಸ್ ಇಲಾಖೆಯಲ್ಲಿ ತೋರಿದ ಸಾಧನೆ ಹಾಗೂ ಕರ್ತವ್ಯ ನಿಷ್ಠೆಯನ್ನು ಗಮನಿ ಸಿ ಅವರಿಗೆ ಈ ಗೌರವವನ್ನು ನೀಡಲಾಗುತ್ತಿದೆ. ಈ ಕುರಿತಂತೆ ಸಾರ್ವಜನಿಕ ವಲಯದಲ್ಲಿ ಬಾರಿ ಪ್ರಶಂಸೆ ವ್ಯಕ್ತವಾಗಿದೆ. ಸಹೋದ್ಯೋಗಿಗಳು ಹಾಗೂ ಸಾರ್ವಜನಿಕರು ಅಭಿನಂದನೆ ಗಳನ್ನು ಸಲ್ಲಿಸಿದ್ದಾರೆ.
ಇದನ್ನೂ ಓದಿ: Moodubidire Police inspector Case: ಲೈಂಗಿಕ ಕಿರುಕುಳ ಆರೋಪ; ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಸಸ್ಪೆಂಡ್
ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಹಿಂದೆ ಪೋಲೀಸ್ ವರಿಷ್ಠಾಧಿಕಾರಿಯಾಗಿ ದಕ್ಷ ಸೇವೆ ಸಲ್ಲಿಸಿದ ಹಾಲಿ ಬಳ್ಳಾರಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸುಮನ್ ಪೆನ್ನೆಕರ್ ಸೇರಿದಂತ್ಲೆ 153 ಪೋಲಿಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ಗೌರವಕ್ಕೆ ಭಾಜನರಾಗಿದ್ದಾರೆ,
ಅಂದಹಾಗೇ ಪದಕ ಪ್ರದಾನ ಕಾರ್ಯಕ್ರಮವು ಏಪ್ರಿಲ್ ೨ ರಂದು ಪ್ರದಾನ ಮಾಡ ಲಾಗುತ್ತಿದೆ.