ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gokarna Boat Tragedy: ತದಡಿ ಬಂದರಿನಲ್ಲಿ ದುರಂತ; ಬೋಟ್‌ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಮೂವರು ಮೀನುಗಾರರ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

Tadadi port: ಉತ್ತರ ಕನ್ನಡ ಜಿಲ್ಲೆ ಗೋಕರ್ಣ ಬಳಿಯ ತದಡಿಯ ಕುಚೈಮಾ ಮೀನುಗಾರಿಕಾ ಬೋಟ್‌ನಲ್ಲಿ ಮೀನುಗಾರರು ಕೆಲಸ ಮಾಡುತ್ತಿದ್ದರು. ಮೀನುಗಾರಿಕೆ ಮುಗಿಸಿ ಬೋಟ್ ಬಂದರಿಗೆ ಮರಳಿತ್ತು. ಬಳಿಕ ಮೀನುಗಳನ್ನು ಇಳಿಸಿ, ಅವುಗಳನ್ನು ಸಂಗ್ರಹಿಸಿಟ್ಟಿದ್ದ ಸ್ಥಳವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ಮೀನುಗಾರರು ತೊಡಗಿದ್ದಾಗ ದುರಂತ ಸಂಭವಿಸಿದೆ.

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ (Gokarna Boat Tragedy) ಬಳಿಯ ತದಡಿ ಬಂದರಿನಲ್ಲಿ ದುರಂತ ಸಂಭವಿಸಿದೆ. ಮೀನುಗಾರಿಕಾ ಬೋಟ್‌ನೊಳಗೆ ಉಸಿರುಗಟ್ಟಿ ಮೂವರು ಮೀನುಗಾರರು ಮೃತಪಟ್ಟಿದ್ದು, ಮತ್ತೊಬ್ಬ ಮೀನುಗಾರನ ಸ್ಥಿತಿ ಗಂಭೀರವಾಗಿದೆ. ಮೀನು ಸಂಗ್ರಹಿಸಿಟ್ಟಿದ್ದ ಸ್ಥಳವನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಮೃತರನ್ನು ಕಾರ್ಮಿಕರಾದ ನೌಶಾದ್ (48), ಅಮೀನ್ (40) ಮತ್ತು ಅಮನ್ (26) ಎಂದು ಗುರುತಿಸಲಾಗಿದೆ. ಅಸ್ವಸ್ಥಗೊಂಡ ಅಬ್ದುಲ್ ಯಾಕುಬ್ ದಾಡಿಯಾ (60) ಅವರನ್ನು ರಕ್ಷಿಸಿ ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.

ತದಡಿಯ ಕುಚೈಮಾ ಮೀನುಗಾರಿಕಾ ಬೋಟ್‌ನಲ್ಲಿ ಮೀನುಗಾರರು ಕೆಲಸ ಮಾಡುತ್ತಿದ್ದರು. ಮೀನುಗಾರಿಕೆ ಮುಗಿಸಿ ಬೋಟ್ ಬಂದರಿಗೆ ಮರಳಿತ್ತು. ಬಳಿಕ ಮೀನುಗಳನ್ನು ಇಳಿಸಿ, ಅವುಗಳನ್ನು ಸಂಗ್ರಹಿಸಿಟ್ಟಿದ್ದ ಸ್ಥಳವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ಮೀನುಗಾರರು ತೊಡಗಿದ್ದರು.

ಬೆಂಗಳೂರಿನಲ್ಲಿ 4ನೇ ಮಹಡಿಯಿಂದ ಹಾರಿ ಡಿಆರ್‌ಡಿಒ ಹಿರಿಯ ವಿಜ್ಞಾನಿ ಆತ್ಮಹತ್ಯೆ; ತಂದೆಯ ಕಣ್ಣೆದುರೇ ನಡೆಯಿತು ದುರಂತ!​

ಈ ಸಂದರ್ಭದಲ್ಲಿ ಮೀನುಗಳ ತೀವ್ರ ವಾಸನೆ ಅಥವಾ ಮುಚ್ಚಿದ ಸ್ಥಳದಲ್ಲಿ ಉಸಿರಾಟಕ್ಕೆ ತೊಂದರೆಯಾಗಿರುವ ಶಂಕೆ ವ್ಯಕ್ತವಾಗಿದೆ. ಪರಿಣಾಮವಾಗಿ ಮೂವರು ಮೀನುಗಾರರು ಮೃತಪಟ್ಟಿದ್ದು, ಮತ್ತೊಬ್ಬರು ಅಸ್ವಸ್ಥರಾಗಿದ್ದಾರೆ. ಆದರೆ, ಸಾವಿಗೆ ನಿಖರವಾದ ಕಾರಣವೇನು ಎಂಬುದು ಅಧಿಕೃತ ತನಿಖೆಯಿಂದ ದೃಢಪಡಬೇಕಿದೆ. ಘಟನೆಗೆ ಸಂಬಂಧಿಸಿದಂತೆ ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.