ಶಿರಸಿ: ಎಲ್ಲ ಗ್ರಾಮಗಳಿಗೂ ಇಂದು ನಗರವಾಗುವ ಧಾವಂತ. ಆದರೆ ಹಳ್ಳಿಗಳ ಉಳಿಸಿಕೊಳ್ಳುವ ಕಾರ್ಯವನ್ನು ಗ.ನಾ. ಕೋಮಾರರಂಥವರು ಇಂಥ ಮಹನೀಯರು ಸಂಘಟಕರಾಗಿ ಸಮಾಜ ಸೇವೆಯ ಮೂಲಕ ನಿರ್ವಹಿಸುತ್ತಿದ್ದು ನಿಜಕ್ಕೂ ಪ್ರಶಂಸನೀಯ, ಅಭಿನಂದನಾರ್ಹ ಎಂದು ವಿಮರ್ಶಕ ಸಾಹಿತಿ ಶ್ರೀಧರ ಬಳಗಾರ ಹೇಳಿದರು.
ಅವರು ಯಲ್ಲಾಪುರ ಪಟ್ಟಣದ ಅಡಕೆ ಭವನದಲ್ಲಿ ನಡೆದ ಗನಾ ಕೋಮಾರ ಅವರ ಅಭಿನಂದ್ನಾ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ: Sirsi News: ಹಾಸ್ಯಗಾರರ ಕೃತಿಗೆ ಇನ್ನೊಂದು ಗರಿ
ಐ ಪಿ ಎಸ್ ಆಧಿಕಾರಿ ಹಾಗೂ ಗನಾ ಕೋಮಾರ ಅವರ ಸಹೋದರ ನರಸಿಂಹ ಕೋಮಾರ ಅಭಿನಂದನಾ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ನಮಗೆ ಇಂದಿನ ಉನ್ನತಿಗೆ ಮನೆಯ ಮೊದಲ ಪಾಠಶಾಲೆಯಾಗಿತ್ತು. ಊರಿನ, ಗ್ರಾಮದ ಅಭಿವೃದ್ಧಿ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಮನೆಯಲ್ಲಿ ಅಣ್ಣ ಬರೆಸುತ್ತಿದ್ದ ಪತ್ರಗಳು. ಊರಲ್ಲಿ, ಮನೆಯಲ್ಲಿ ನಡೆಯುತ್ತಿದ್ದ ಸಾಹಿತ್ಯಿಕ ಕಾರ್ಯಕ್ರಮ ಚಿಂತೆ, ಓದು ಇಂದು ನಮ್ಮನಗನು ಇಷ್ಟು ಎತ್ತರಕ್ಕೆ ಕರೆದೊಯ್ದಿದೆ ಎಂದು ತಮ್ಮ ಅಂತರಾಳದ ಮಾತಿನ ಮೂಲಕ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಾಂಸ್ಕೃತಿಕ ರೂವಾರಿ ಪ್ರಮೋದ ಹೆಗಡೆ, ಉಮೇಶ ಭಾಗ್ವತ್, ಶಂಕರ ಭಟ್, ಆರ್ ಎನ್ ಹೆಗಡೆ ಗೋರ್ಸಗದ್ದೆ, ನರಸಿಂಹ ಕೋಣೇಮನೆ ಐ ಎಫ್ ಎಸ್ ಅಧಿಕಾರಿ ಅಶೋಕ ಕುಮಾರ್ ಮುಂತಾದ ಗಣ್ಯರು ಉಪಸ್ಥಿರಿದ್ದರು.
ಡಾ. ರವಿ ಭಟ್ ಬರಗದ್ದೆ, ಶಿಕ್ಷಕ ಸಣ್ಣಪ್ಪ ಭಾಗ್ವತ್ ನಿರ್ವಹಿಸಿದರು. ಮುರಳಿ ಹೆಗಡೆ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಹಲವು ಸಂಘ , ಸಂಸ್ಥೆಯ ಹಾಗೂ ಭಾಗಿನಕಟ್ಟಾ, ಬೀಗಾರ ಗ್ರಾಮಸ್ಥರು ಗನಾ ಕೋಮಾರ ಅವರನ್ನು ಅಭಿನಂಧಿಸಿದರು.