ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sirsi News: ಮಹಿಳಾ ಆಯೋಗ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಹಾಕುವ ಬಿಸ್ಕೆಟ್ ಗೆ ಸೀಮಿತವಾಗಿದೆ

ರಾಜ್ಯ ಸರ್ಕಾರ ವಸತಿ ನಿಲಯಗಳ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದರ ಪರಿಣಾಮ ಈ ರೀತಿ ಆಗು ತ್ತಿದೆ. ಕೆಲವೆಡೆ ವಾರ್ಡನ್‌ಗಳೂ ಸಹ ಇಂತಹ ಘಟನೆಗಳಿಗೆ ಸಹಕಾರ ನೀಡುತ್ತಿದ್ದಾರೆ. ದುರುಳರ ಈ ಕೆಲಸಕ್ಕೆ ಏನೂ ಅರಿಯದ ಮುಗ್ದ ಬಾಲಕಿಯರು ಬಲಿಯಾಗುತ್ತಿದ್ದರೂ ರಾಜ್ಯದ ನಾಯಕರು ಇತ್ತ ಲಕ್ಷ್ಯ ವಹಿಸು ತ್ತಿಲ್ಲ.

ಶಿರಸಿ: ರಾಜ್ಯದ ಹಿಂದುಳಿದ ವರ್ಗಗಳ ವಸತಿ ನಿಲಯಗಳ ವಿದ್ಯಾರ್ಥಿನಿಯರಲ್ಲಿ ಬಾಲಕಿಯರು ಗರ್ಭ ಧರಿಸಿದ ಪ್ರಕರಣ ಜಾಸ್ತಿಯಾಗುತ್ತಿದೆ. ರಾಜ್ಯದೆಲ್ಲೆಡೆ ಕಳೆದ ೧೦ ತಿಂಗಳಿನಲ್ಲಿ ಇಂತಹ ೧೦ ಸಾವಿರ ಪ್ರಕರಣಗಳು ವರದಿಯಾಗಿದ್ದು, ರಾಜ್ಯ ಸರ್ಕಾರ ಈ ವಸತಿ ನಿಲಯಗಳ ನಿರ್ವಹಣೆ, ಉಸ್ತುವಾರಿಯನ್ನು ಸಮರ್ಪಕವಾಗಿ ನೋಡಿಕೊಳ್ಳದಿರುವುದನ್ನು ಈ ಘಟನೆಗಳು ಎತ್ತಿ ತೋರಿಸು ತ್ತಿವೆ ಎಂದು ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷೆ ಸಿ. ಮಂಜುಳಾ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ರಾಜ್ಯ ಸರ್ಕಾರ ವಸತಿ ನಿಲಯಗಳ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದರ ಪರಿಣಾಮ ಈ ರೀತಿ ಆಗುತ್ತಿದೆ. ಕೆಲವೆಡೆ ವಾರ್ಡನ್‌ಗಳೂ ಸಹ ಇಂತಹ ಘಟನೆಗಳಿಗೆ ಸಹಕಾರ ನೀಡುತ್ತಿದ್ದಾರೆ. ದುರುಳರ ಈ ಕೆಲಸಕ್ಕೆ ಏನೂ ಅರಿಯದ ಮುಗ್ದ ಬಾಲಕಿಯರು ಬಲಿಯಾಗುತ್ತಿದ್ದರೂ ರಾಜ್ಯದ ನಾಯಕರು ಇತ್ತ ಲಕ್ಷ್ಯ ವಹಿಸು ತ್ತಿಲ್ಲ.

ಇದನ್ನೂ ಓದಿ: Sirsi News: ತಜ್ಞ ಮಧುಕೇಶ್ವರ ಹೆಗಡೆ ಕಲ್ಲಳ್ಳಿಮನೆ ಅವರಿಗೆ ಸನ್ಮಾನ

ಹೆಣ್ಣು ಮಕ್ಕಳ ವಸತಿ ನಿಲಯಗಳಿಗೆ ಸ್ತ್ರೀರೋಗ ತಜ್ಞೆಯರು ಕನಿಷ್ಠ ೧೦ ದಿನಗಳಿಗೆ ಒಮ್ಮೆಯಾ ದರೂ ಭೇಟಿ ಮಾಡಿ ಇಂತಹ ಸಂಗತಿಗಳ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಬೇಕಿತ್ತು. ಮಹಿಳಾ ಹಕ್ಕು ಆಯೋಗ ರೀಲ್ಸ್, ಇನ್ಸ್ಟಾಗ್ರಾಮ್‌ನಲ್ಲಿ ಪ್ರಚಾರ ಕಾರ್ಯಕ್ಕೆ ಮಾತ್ರ ಸೀಮಿತವಾಗಿದೆ. ಧರ್ಮಸ್ಥಳದ ಸುಳ್ಳು ಆರೋಪಗಳನ್ನು ಎಸ್ ಐ ಟಿ ತನಿಖೆಗೆ ಒಳಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಉತ್ತೇಜಿಸಿದ ಮಹಿಳಾ ಹಕ್ಕು ಆಯೋಗಕ್ಕೆ ಇಂತಹ ಸಂಗತಿಗಳಿಗೆ ಸ್ಪಂದಿಸಲು ಸಮಯವಿಲ್ಲ. ಇಂದು ಈ ಬಾಲಕಿ ಯನ್ನು ಕೇಳುವವರೇ ಇಲ್ಲದಂತಾಗಿದೆ. ಮಹಿಳಾ ಆಯೋಗ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಹಾಕುವ ಬಿಸ್ಕೆಟ್ ಗೆ ಸೀಮಿತವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಮಲೆನಾಡಿನ ತಾಲೂಕುಗಳಲ್ಲಿಯೂ ಸಹ ಇಂದು ಒಂಟಿ ಮಹಿಳೆಯರು ಓಡಾಡುವ ವೇಳೆ ದೌರ್ಜ ನ್ಯ, ಕಳ್ಳತನ ಪ್ರಕರಣ ಜಾಸ್ತಿಯಾಗಿದೆ. ಆರಕ್ಷಕ ಇಲಾಖೆ ಗಸ್ತು ತಿರುಗುವಿಕೆ ಕಡಿಮೆಯಾಗಿದ್ದರ ಪರಿಣಾಮ ಇಂತಹ ಘಟನೆಗಳಾಗುತ್ತಿವೆ. ಈ ಎಲ್ಲ ಸಂಗತಿಗಳು ಅಧಿವೇಶನದಲ್ಲಿ ಚರ್ಚೆ ಆಗಬೇಕು. ಮಹಿಳೆಯರ ರಕ್ಷಣೆಗೆ ಕ್ರಮ ಆಗಬೇಕು. ಕೇವಲ ೨ ಸಾವಿರ ರೂ. ನೀಡುವಿಕೆ, ಉಚಿತ ಬಸ್ ಸೌಲಭ್ಯ ನೀಡುವುದರಿಂದ ಮಹಿಳೆಯರ ಸುರಕ್ಷತೆ ಸಾಧ್ಯವಿಲ್ಲ. ತಾವು ಬಡವರ ಪರ ಎಂದು ಬಡಾಯಿ ಕೊಚ್ಚಿಕೊಳ್ಳುವ ಈ ಸರ್ಕಾರ ಪುಂಡ ಪೋಕರ ಕೈಗೆ ಅಧಿಕಾರ ನೀಡಿ ನಡು ಬಗ್ಗಿಸಿದ್ದಾರೆ ಎಂದರು.

ರಾಜ್ಯದಲ್ಲಿ ಇಂದು ಸ್ತಿçà ಪುರುಷರ ಅನುಪಾತದಲ್ಲಿ ವ್ಯತ್ಯಾಸವಾಗಿದೆ. ಬೀದರ್ ಜಿಲ್ಲೆಯಂತಹ ಪ್ರದೇಶದಲ್ಲಿ ಮಹಿಳೆಯರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಮಂಡ್ಯದ ಆದಿಚುಂಚನ ಗಿರಿ ಮಠ ಸತಿ ಪತಿ ಕಾರ್ಯಕ್ರಮಕ್ಕಾಗಿ ಹೆಸರು ನೊಂದಣಿಗೆ ಇತ್ತಿಚೆಗೆ ಸೂಚಿಸಿತ್ತು. ೧೦ ಸಾವಿರ ಯುವಕರು ಕನ್ಯೆ ಹುಡುಕುವ ಸಲುವಾಗಿ ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಅಂದರೆ, ಸಿದ್ದರಾಮಯ್ಯ ಅವರ ಕ್ಷೇತ್ರ ಮತ್ತು ಸುತ್ತಮುತ್ತಲಿನ ಕ್ಷೇತ್ರದಲ್ಲಿ ಎಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸ್ತಿçà ಪುರುಷರ ಅನುಪಾತದಲ್ಲಿ ಅಜಗಜಾಂತರವಿದೆ ಎಂಬುದನ್ನು ಇದು ತೋರಿಸುತ್ತಿದೆ.

ರಾಜ್ಯದಲ್ಲಿ ಸ್ತ್ರೀ ಭ್ರೂಣ ಹತ್ಯೆ ಎಷ್ಟು ದೊಡ್ಡ ಪ್ರಮಾಣದಲ್ಲಿದೆ ಎಂಬುದನ್ನು ಇದು ತೋರಿಸುತ್ತದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆ ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮೀ ಬಾಂಡ್ ಯೋಜನೆ ಜಾರಿಗೆ ತಂದಿದ್ದರಿಂದ ಭ್ರೂಣ ಹತ್ಯೆ ನಿಯಂತ್ರಣಕ್ಕೆ ಬಂದಿತ್ತು ಎಂದರು.

ಪ್ರಮುಖರಾದ ಗುರುಪ್ರಸಾದ ಹೆಗಡೆ ಹರ್ತೆಬೈಲ್, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಅನಂತಮೂರ್ತಿ ಹೆಗಡೆ, ಉಷಾ ಹೆಗಡೆ, ಸದಾನಂದ ಭಟ್, ಆನಂದ ಸಾಲೇರ, ಅನುಸೂಯಾ ಹೆಗಡೆ ಇತರರಿದ್ದರು.

*

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಹಗುರವಾಗಿ ಮಾತನಾಡಿರುವ ಮುಖ್ಯಮಂತ್ರಿ ಅಧಿವೇಶನದಲ್ಲಿ ಮಹಿಳೆಯರ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ರಾಜ್ಯದ ಮಹಿಳೆಯರೆಲ್ಲ ಮುಖ್ಯಮಂತ್ರಿ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಲಿದ್ದಾರೆ.

- ಸಿ. ಮಂಜುಳಾ