ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವಿಜಯನಗರದಲ್ಲಿ ಶಾಕಿಂಗ್‌ ಘಟನೆ; ತಂದೆ, ತಾಯಿ, ತಂಗಿಯನ್ನು ಭೀಕರವಾಗಿ ಕೊಲೆಗೈದ ಯುವಕ

ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ಘಟನೆ ನಡೆದಿದೆ. ಕುಟುಂಬದ ಮೂವರನ್ನೂ ಕೊಲೆ ಮಾಡಿದ ಬಳಿಕ ಆರೋಪಿ ಬೆಂಗಳೂರಿಗೆ ಪರಾರಿಯಾಗಿದ್ದ. ಬಳಿಕ ಆತನೇ ತಿಲಕನಗರ ಠಾಣೆಗೆ ತೆರಳಿ ತಂದೆ, ತಾಯಿ, ಸಹೋದರಿ ಮೂವರು ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದ. ಆದರೆ, ಮೂವರನ್ನು ಆತನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ವಿಜಯನಗರದಲ್ಲಿ ತಂದೆ, ತಾಯಿ, ತಂಗಿಯನ್ನು ಕೊಲೆಗೈದ ಯುವಕ

ಸಾಂದರ್ಭಿಕ ಚಿತ್ರ -

Prabhakara R
Prabhakara R Jan 30, 2026 4:20 PM

ವಿಜಯನಗರ: ತಂದೆ, ತಾಯಿ ಹಾಗೂ ಸಹೋದರಿಯನ್ನು ಯುವಕನೊಬ್ಬ ಭೀಕರವಾಗಿ ಹತ್ಯೆಗೈದಿರುವ ಘಟನೆ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ನಡೆದಿದೆ. ಕುಟುಂಬದ ಮೂವರನ್ನೂ ಕೊಲೆ ಮಾಡಿದ ಬಳಿಕ ಆರೋಪಿ ಬೆಂಗಳೂರಿಗೆ ಪರಾರಿಯಾಗಿದ್ದಾನೆ. ಬಳಿಕ ಆತನೇ ತಿಲಕನಗರ ಠಾಣೆಗೆ ತೆರಳಿ ತಂದೆ, ತಾಯಿ, ಸಹೋದರಿ ಮೂವರು ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದ. ಆದರೆ, ವಿಚಾರಣೆ ವೇಳೆ ತಾನೇ ಮೂವರನ್ನು ಕೊಲೆಗೈದಿರುವುದಾಗಿ ಬಾಯಿಬಿಟ್ಟಿದ್ದಾನೆ.

ದೂರು ನೀಡಿದ ಯುವಕನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ತಾನೇ ತಂದೆ, ತಾಯಿ, ಸಹೋದರಿ ಮೂವರನ್ನೂ ಕೊಲೆಗೈದು, ಮನೆಯೊಳಗೆ ಹೂತು ಹಾಕಿದ್ದಾಗಿ ಒಮ್ಮೆ ಹೇಳಿಕೆ ನೀಡಿದ್ದಾನೆ. ಮತ್ತೊಮ್ಮೆ ಸಂಡೂರಿನಲ್ಲಿ ಶವಗಳನ್ನು ಎಸೆದಿದ್ದಾಗಿ ಹೇಳಿದ್ದಾನೆ. ಹೀಗಾಗಿ ಮಗನೇ ಪೋಷಕರು ಹಾಗೂ ಸಹೋದರಿಯನ್ನು ಕೊಲೆಗೈದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಈ ಬಗ್ಗೆ ತಿಲಕನಗರ ಠಾಣೆ ಪೊಲೀಸರು ಕೊಟ್ಟೂರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಶವಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ಆರತಕ್ಷತೆಗೆ ತೆರಳುತ್ತಿದ್ದ ವರನನ್ನು ಅಡ್ಡಗಟ್ಟಿ ಡ್ಯಾಗರ್‌ನಿಂದ ಇರಿದ ದುಷ್ಕರ್ಮಿಗಳು

ಚಾಮರಾಜನಗರ: ಮದುವೆ ಆರತಕ್ಷತೆಗೆ ತೆರಳುತ್ತಿದ್ದ ವರನ ಕಾರು ಅಡ್ಡಿಗಟ್ಟಿ ಮನಸೋ ಇಚ್ಛೆ ಹಲ್ಲೆ ನಡೆಸಿ, ಡ್ಯಾಗರ್‌ನಿಂದ ಇರಿದಿರುವ ಘಟನೆ ಚಾಮರಾಜನಗರ (Chamarajnagar) ಜಿಲ್ಲೆ ಕೊಳ್ಳೇಗಾಲದಲ್ಲಿ (Kollegala) ನಡೆದಿದೆ. ಕೊಳ್ಳೇಗಾಲದ ವೆಂಕಟೇಶ್ವರ್ ಮಹಲ್‌ನಲ್ಲಿ ಆಯೋಜಿಸಿದ್ದ ಆರತಕ್ಷತೆಗೆ ವರ ರವೀಶ್ ತೆರಳುತ್ತಿದ್ದ ವೇಳೆ ಅಪರಿಚಿತರು ಏಕಾಏಕಿ ದಾಳಿ ಮಾಡಿದ್ದಾರೆ. ಕುಣಗಳ್ಳಿ ಗ್ರಾಮದಿಂದ ಹೋಗುತ್ತಿದ್ದ ವೇಳೆ ವರ ರವೀಶ್ ಕಾರನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು, ಚಾಕು, ಡ್ಯಾಗರ್​​ನಿಂದ ಹಲ್ಲೆ (Assault Case) ಮಾಡಿದ್ದಾರೆ.

6 ತಿಂಗಳ ಹಿಂದೆ ನಯನ ಎನ್ನುವ ಯುವತಿಯೊಂದಿಗೆ ರವೀಶ್‌ ಮದುವೆ ನಿಶ್ಚಯವಾಗಿತ್ತು. ಅದರಂತೆ ನೆನ್ನೆ (ಜನವರಿ 29) ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ವೆಂಕಟೇಶ್ವರ್ ಮಹಲ್‌ನಲ್ಲಿ ಆರತಕ್ಷತೆ ಆಯೋಜಿಸಲಾಗಿತ್ತು. ಹೀಗಾಗಿ ವರ ರವೀಶ್, ಕುಣಗಳ್ಳಿ ಗ್ರಾಮದಿಂದ ಕಾರಿನಲ್ಲಿ ಹೋಗುವ ವೇಳೆ ಸಿನಿಮೀಯ ರೀತಿಯಲ್ಲಿ ದುಷ್ಕರ್ಮಿಗಳು ಅಡ್ಡಹಾಕಿದ್ದಾರೆ. ಬಳಿಕ ನೀನು ಮದ್ವೆ ಮನೆಗಲ್ಲ ಸ್ಮಶಾನಕ್ಕೆ ತೆರಳಬೇಕೆಂದು ಚಾಕು, ಚೂರಿಯಿಂದ ಮನಸೋ ಇಚ್ಛೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ವರದಕ್ಷಿಣೆಗಾಗಿ ಗರ್ಭಿಣಿ ಪತ್ನಿ ಮೇಲೆ ಹಲ್ಲೆ, ಅಬಾರ್ಷನ್‌; ಮನೆಯವರ ಕೊಲೆಗೂ ಯತ್ನಿಸಿದ ಧನದಾಹಿ ಪತಿ

ಘಟನೆಯಲ್ಲಿ ಎಡಗೈಗೆ ಚಾಕು ತಾಕಿದ್ದರಿಂದ ಸದ್ಯ ರವೀಶ್ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಪಡೆದುತ್ತಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ವಧುವಿನ ಮಾಜಿ ಬಾಯ್ ಫ್ರೆಂಡ್ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದ್ದು, ಕೊಳ್ಳೇಗಾಲ ಪಟ್ಟಣ ಠಾಣಾ ಪೊಲೀಸರು, ದುಷ್ಕರ್ಮಿಗಳ ಬಂಧನಕ್ಕೆ ಶೋಧಕಾರ್ಯ ನಡೆಸಿದ್ದಾರೆ.