ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hospet News: ಹೊಚ್ಚ ಹೊಸ ವಿನ್ಯಾಸಗಳೊಂದಿಗೆ ಹೊಸಪೇಟೆಗೆ ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್‌ನ ಆಭರಣ ಪ್ರದರ್ಶನ!

‘ಹೊಸಪೇಟೆಯಲ್ಲಿನ ಈ ಪ್ರದರ್ಶನವು ಕೇವಲ ಪ್ರದರ್ಶನಕ್ಕೆ ಸೀಮಿತವಾಗಿಲ್ಲ - ಕಲಾತ್ಮ ಕತೆ, ಪರಂಪರೆಯ ಪ್ರದರ್ಶನ. ಇಲ್ಲಿ ಸಂದರ್ಶಕರು 155 ವರ್ಷಗಳಷ್ಟು ಹಳೆಯ ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಭರಣಗಳ ಭವಿಷ್ಯವನ್ನು ಹೇಗೆ ರೂಪಿಸುತ್ತಿದೆ ಎಂಬುದನ್ನು ವೀಕ್ಷಿಸುತ್ತಾರೆ’ ಎಂದು ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್‌ನ ಪಿಆರ್ ಮುಖ್ಯಸ್ಥ ಶ್ರೀ ತೇಜಸ್ ಕಲ್ರಾ ಹೇಳಿದರು

ಹೊಸಪೇಟೆ: 155 ವರ್ಷಗಳ ಸುದೀರ್ಘ ಪರಂಪರೆಯನ್ನು ಹೊಂದಿರುವ ಭಾರತದ ಪ್ರತಿಷ್ಠಿತ ಆಭರಣ ಬ್ರ್ಯಾಂಡ್ ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್ ನವೆಂಬರ್ 7 ರಿಂದ 10, 2025ರವರೆಗೆ ಹೊಸಪೇಟೆಯ ಹೋಟೆಲ್ ರಾಯಲ್ ಆರ್ಕಿಡ್ ಸೆಂಟ್ರಲ್ ಕಿರೀಟಿಯಲ್ಲಿರುವ ಸೀಸನ್ ಹಾಲ್‌ನಲ್ಲಿ ವಿಶೇಷ ಆಭರಣ ಪ್ರದರ್ಶನಕ್ಕೆ ಚಾಲನೆ ನೀಡಿದೆ.

ಈ ನಾಲ್ಕು ದಿನಗಳ ವಿಶೇಷ ಪ್ರದರ್ಶನವನ್ನು ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿ ಶ್ರೀಮತಿ ಕವಿತಾ ಎಸ್ ಮನ್ನಿಕೇರಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತ ನಾಡಿದ ಅವರು, "ಇಂತಹ ಶ್ರೀಮಂತ ಇತಿಹಾಸ ಹೊಂದಿರುವ ಬ್ರ್ಯಾಂಡ್ ಹೊಸಪೇಟೆಗೆ ತನ್ನ ಕಲಾತ್ಮಕತೆಯನ್ನು ಹೊತ್ತುತಂದಿರುವುದು ಸಂತೋಷಕರ. ಈ ವಿನ್ಯಾಸಗಳು ಕಥೆ, ಸಂಪ್ರದಾಯ ಮತ್ತು ಭಾವನೆಗಳಿಗೆ ಜೀವ ತುಂಬಿವೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ: Hospet News: ಶಿರೂರು ಮಠದ ವೇದರ್ಧನತೀರ್ಥ ಶ್ರೀಪಾದರಿಂದ ಪರ್ಯಾಯ ಸಂಚಾರ

ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್‌ನ ಮಳಿಗೆಯ ಮುಖ್ಯಸ್ಥರಾದ ಶ್ರೀಹರಿ ಅವರು ಮಾತನಾಡಿ, "ನಮ್ಮ ಪರಂಪರೆಯನ್ನು ಹೊಸಪೇಟೆ ಜನರೊಂದಿಗೆ ಹಂಚಿಕೊಳ್ಳಲು ಮತ್ತು ನಮ್ಮ ಹೊಸ ಆಲೋಚನೆಗಳಾದ 'crash.club' ನಂತಹ ಸಂಗ್ರಹಗಳನ್ನು ಪರಿಚಯಿಸಲು ಈ ಪ್ರದರ್ಶನವು ಉತ್ತಮ ವೇದಿಕೆಯಾಗಿದೆ" ಎಂದರು.

‘ಹೊಸಪೇಟೆಯಲ್ಲಿನ ಈ ಪ್ರದರ್ಶನವು ಕೇವಲ ಪ್ರದರ್ಶನಕ್ಕೆ ಸೀಮಿತವಾಗಿಲ್ಲ - ಕಲಾತ್ಮ ಕತೆ, ಪರಂಪರೆಯ ಪ್ರದರ್ಶನ. ಇಲ್ಲಿ ಸಂದರ್ಶಕರು 155 ವರ್ಷಗಳಷ್ಟು ಹಳೆಯ ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಭರಣಗಳ ಭವಿಷ್ಯವನ್ನು ಹೇಗೆ ರೂಪಿಸುತ್ತಿದೆ ಎಂಬುದನ್ನು ವೀಕ್ಷಿಸುತ್ತಾರೆ’ ಎಂದು ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್‌ನ ಪಿಆರ್ ಮುಖ್ಯಸ್ಥ ಶ್ರೀ ತೇಜಸ್ ಕಲ್ರಾ ಹೇಳಿದರು.

ವಿಶೇಷ ರಿಯಾಯಿತಿಗಳು: ಹೊಸಪೇಟೆ ಗ್ರಾಹಕರಿಗೆ ವಿಶೇಷ ಕೊಡುಗೆಗಳಿದ್ದು, ಚಿನ್ನದ ಆಭರಣಗಳ ಮೇಲೆ 4% ಮತ್ತು ₹18.69 ಲಕ್ಷ ಹಾಗೂ ಅದಕ್ಕಿಂತ ಹೆಚ್ಚಿನ ಮೌಲ್ಯದ ವಜ್ರದ ಆಭರಣಗಳ ಮೇಲೆ 9% ವರೆಗೆ ರಿಯಾಯಿತಿ ಘೋಷಿಸಲಾಗಿದೆ.

ಈ ಪ್ರದರ್ಶನವು ನವೆಂಬರ್ 10, 2025ರವರೆಗೆ ತೆರೆದಿರುತ್ತದೆ.